Advertisement
“ಎನಿವೇರ್ ರಿಜಿಸ್ಟ್ರೇಶನ್’ ಯಶಸ್ವಿಯಾಗಿ ನಡೆಯುತ್ತಿದೆ. ಇದರ ನಡುವೆ ವಾರಾಂತ್ಯ ದಲ್ಲೂ ನೋಂದಣಿಗೆ ಅವಕಾಶ ನೀಡಬೇಕೆಂದು ದುಡಿಯುವ ವರ್ಗದಿಂದ ಬೇಡಿಕೆ ಬಂದಿದೆ ಎಂದು ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
Related Articles
ರಾಜ್ಯದಲ್ಲಿ 48 ಲಕ್ಷ ಕೃಷಿ ಭೂಮಿಗಳು ತೀರಿ ಹೋದವರ ಹೆಸರಿನಲ್ಲೇ ಇಂದಿಗೂ ಇದ್ದು, ಇವುಗಳನ್ನು ಅವರ ಮಕ್ಕಳು ಅಥವಾ ವಾರಸುದಾರರ ಹೆಸರಿಗೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತಿದೆ. ಎಲ್ಲರೂ ತಮ್ಮ ಜಮೀನುಗಳ ಪಹಣಿ (ಆರ್ಟಿಸಿ)ಗೆ ಆಧಾರ್ ವಿಲೀನ ಮಾಡಬೇಕೆಂದು ಈಗಾಗಲೇ ತಿಳಿಸಲಾಗಿದೆ. ಕುಟುಂಬ ಸದಸ್ಯರ ನಡುವೆ ವಿವಾದ ಇದ್ದರೆ ಅದನ್ನು ಅವರೇ ಬಗೆಹರಿಸಿಕೊಳ್ಳಬೇಕು ಇಲ್ಲವೇ ಪೌತಿ ಖಾತೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶೀಘ್ರದಲ್ಲೇ ಹೋಬಳಿ ಅಥವಾ ಗ್ರಾಮ ಲೆಕ್ಕಿಗರ ವ್ಯಾಪ್ತಿಯಲ್ಲಿ ಪೌತಿ ಆಂದೋಲನ ನಡೆಸಲಾಗುತ್ತದೆ. ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸೇವಕರ ಮೂಲಕ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
Advertisement