Advertisement

UK: ಇಂದಿನಿಂದ ಯು.ಕೆ. ವೀಸಾ ಶುಲ್ಕ ಹೆಚ್ಚಳ

08:28 PM Oct 03, 2023 | Team Udayavani |

ಲಂಡನ್‌: ಯು.ಕೆ.ವಿವಿಗಳಲ್ಲಿ ಅಧ್ಯಯನ ನಡೆಸಲು ತೆರಳುವವರಿಗೆ, ಪ್ರವಾಸಕ್ಕೆ ಹೋಗುವವರಿಗೆ ವೀಸಾ ಶುಲ್ಕ ದುಬಾರಿಯಾಗಲಿದೆ. ಪರಿಷ್ಕೃತ ದರ ಬುಧವಾರದಿಂದಲೇ ಅನ್ವಯವಾಗಲಿದೆ. ವಿಸಿಟರ್‌ ವೀಸಾಕ್ಕಾಗಿ ಹಾಲಿ ಸದ್ಯ 10, 299 ರೂ. ವಿಧಿಸಲಾಗತ್ತಿದೆ. ಅದನ್ನು 15 ಪೌಂಡ್‌ (1,505.36 ರೂ) ಹೆಚ್ಚಿಸಲಾಗಿದೆ. ಆರು ತಿಂಗಳಿಗಿಂತ ಕಡಿಮೆ ಅವಧಿಯ ವೀಸಾಕ್ಕೆ ಈ ಮೊತ್ತ ಅನ್ವಯವಾಗಲಿದೆ.

Advertisement

ಯು.ಕೆ.ಯ ಹೊರಗಿನಿಂದ ಸ್ಟೂಡೆಂಟ್‌ ವೀಸಾ ಬಯಸುವ ಅಂದರೆ ಭಾರತದಂಥ ದೇಶಗಳಿಂದ ಅಲ್ಲಿನ ವಿವಿಗಳಲ್ಲಿ ಅಧ್ಯಯನಕ್ಕಾಗಿ ತೆರಳುವವರಿಗೆ 490 ಪೌಂಡ್‌ ಸ್ಟರ್ಲಿಂಗ್‌ (49, 163.07 ರೂ) ಹೆಚ್ಚು ವೆಚ್ಚವಾಗಲಿದೆ. ಸದ್ಯ ಈ ವೀಸಾ ಶುಲ್ಕ 363 ಪೌಂಡ್‌ ಸ್ಟರ್ಲಿಂಗ್‌ (37,082 ರೂ.) ಇದೆ. ವೀಸಾ ಶುಲ್ಕಗಳನ್ನು ಪರಿಷ್ಕರಿಸುವ ಬಗ್ಗೆ ಕಳೆದ ತಿಂಗಳು ಯು.ಕೆ.ಯ ಸಂಸತ್‌ನಲ್ಲಿ ವಿಧೇಯಕ ಮಂಡಿಸಿ ಅಂಗೀಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next