Advertisement

ಇಂದಿನಿಂದ ಚುನಾವಣಾ ಅಖಾಡಕ್ಕೆ ಮುಖ್ಯಮಂತ್ರಿ

07:05 AM Mar 31, 2017 | |

ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯ ಕಣ ರಂಗೇರಿದ್ದರೂ, ಬಜೆಟ್‌ ಅಧಿವೇಶನ
ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶುಕ್ರವಾರದಿಂದ ಏಪ್ರಿಲ್‌ 7ರ ವರೆಗೂ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.

Advertisement

ಚುನಾವಣೆ ಮುಗಿಯುವವರೆಗೂ ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಲಿರುವ ಸಿದ್ದರಾಮಯ್ಯ, ಶುಕ್ರವಾರ ನಂಜನಗೂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದಲೇ ಪ್ರಚಾರ ಕಾರ್ಯ ಆರಂಭಿಸಲಿರುವ ಅವರು, ಗೋಳೂರು, ಚಿನ್ನದ ಹುಂಡಿ, ವೀರದೇವರ ಪುರ, ಬದನವಾಳು, ದೇವನೂರು, ಚಿಕ್ಕ ಕವಲಂದೆ, ದೊಡ್ಡ ಕವಲಂದೆ, ನೇರಳೆ, ಹೆಡತಲೆ, ಹೆಮ್ಮರಗಾಲ, ಬಡಗಯ್ಯನ ಹುಂಡಿ, ಮಲ್ಲಹಳ್ಳಿ, ತರದಲೆ, ಕೂಡ್ಲಾಪುರ, ಹಣಸನಾಳು, ಕುರಹಟ್ಟಿ, ಸಿಂಧುವಳ್ಳಿ ಉಪ್ಪಿನಹಳ್ಳಿ ಹಾಗೂ ಹೊರಳವಾಡಿ ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ನಂಜನಗೂಡು ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಹಣ ಪಡೆದು ಬಿಜೆಪಿಗೆ ಮತ ಹಾಕಿ ಎಂಬ ಈಶ್ವರಪ್ಪ ಅವರ ಹೇಳಿಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ. ಅವರ ವಿರುದ್ಧ ಜನರನ್ನು ಪ್ರಚೋದನೆ ಮಾಡಿದ ಪ್ರಕರಣ
ದಾಖಲಿಸಬೇಕಾಗುತ್ತದೆ. ನಿರಂತರವಾಗಿ ಈ ರೀತಿಯ ಅಸಂಬದ್ದ ಹೇಳಿಕೆಗಳನ್ನು ಈಶ್ವರಪ್ಪ ನೀಡುತ್ತಲೇ ಬಂದಿದ್ದಾರೆ. 

ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next