Advertisement

ನೀವು ಬಾತ್‌ರೂಮ್‌ ಸಿಂಗರಾ, ಇಲ್ಲಿದೆ ಅವಕಾಶ

04:28 PM Jan 21, 2017 | Team Udayavani |

ನಮ್ಮಲ್ಲಿ ಎಷ್ಟೋ ಜನ ಸಿಂಗರ್‌ಗಳು ತಮ್ಮಷ್ಟಕ್ಕೇ ಸಂತೋಷಕ್ಕೆ ಹಾಡಿಕೊಂಡಿರುತ್ತಾರೆ. ಬಾತ್‌ರೂಮ್‌ ಅವರ ಅತ್ಯಂತ ಪ್ರಿಯ ಜಾಗ. ಆದರೆ ಕೆಲವರು ಅಲ್ಲಿ ಹಾಡಿ, ಮನೆಯವರನ್ನೆಲ್ಲಾ ಬೆಚ್ಚಿ ಬೀಳಿಸುತ್ತಿರುತ್ತಾರೆ. ಆದರೆ ಅವರ ಗಾಯನ ಪ್ರತಿಭೆಯನ್ನು ಯಾರೂ ಗುರುತಿಸುವುದಿಲ್ಲ, ಗೌರವಿಸುವುದೂ ಇಲ್ಲ, ತಮಾಷೆ ಮಾಡಿರುತ್ತಾರೆ ಅಷ್ಟೇ. ಅಂಥ ಬಾತ್‌ರೂಮ್‌ ಸಿಂಗರ್‌ಗಳನ್ನು ಗ್ರೇಟ್‌ ಸಿಂಗರ್‌ ಮಾಡೋದಕ್ಕೆ ಇಲ್ಲೊಂದು ಸಂಸ್ಥೆ ದುಡಿಯುತ್ತಿದೆ. ಅದರ ಹೆಸರು-ಮಗ್‌ ಟು ಮೈಕ್‌.

Advertisement

ಈಗ ಈ ಸಂಸ್ಥೆ ವರ್ಕ್‌ಶಾಪ್‌ ನಡೆಸುತ್ತಿದೆ. ಅದೇನೆಂದರೆ ಬಾತ್‌ರೂಮ್‌ ಸಿಂಗರ್ಸ್‌ ವರ್ಕ್‌ಶಾಪ್‌. ಇದು ಇರೋದೇ ಬಾತ್‌ರೂಮ್‌ ಸಿಂಗರ್‌ಗಳಿಗೋಸ್ಕರ. ನೀವು ಈ ವರ್ಕ್‌ಶಾಪ್‌ಗೆ ಹೋಗಿ ದೊಡ್ಡ ಗಾಯಕರಾಗೋಕ್ಕೆ ಅವಕಾಶ ಇದೆ. ನಿಮ್ಮನ್ನು ಸರಿ ದಾರಿಗೆ ಕರೆದೊಯ್ಯುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಈ ಸಂಸ್ಥೆ, ವರ್ಕ್‌ಶಾಪ್‌ನ ಮೊದಲ ಷರತ್ತು ಏನು ಗೊತ್ತಾ? “ದಿನಕ್ಕೊಂದು ಸಲನಾದ್ರೂ ನೀವು ಬಾತ್‌ರೂಮ್‌ನಲ್ಲಿ ನಿಮ್ಮ ಗಾರ್ದಭ ಕಂಠದಿಂದ ಹಾಡು ಹಾಡಿರಬೇಕು!’

ಏನಿದು?

-ವೃತ್ತಿಪರ ಗಾಯಕರೇ ಆಗಲು ನೀವು ಬೆಳೆಸಿಕೊಳ್ಳಬೇಕಾದ ಗುಣಗಳನ್ನ ಇಲ್ಲಿ ಹೇಳಿಕೊಡಲಾಗುತ್ತದೆ.
-ಒಳ್ಳೆ ಗಾಯಕರಾಗಲು ಏನೇನು ಬೇಕೋ ಅದನ್ನೆಲ್ಲಾ ಇಲ್ಲಿ ಕಲಿಸಲಾಗುತ್ತದೆ.
-ಹಾಡೋವಾಗ ಮಾಡೋ ಸಾಮಾನ್ಯ ತಪ್ಪೇನು, ವೇದಿಕೆ ಗಾಯನದ ತಂತ್ರಗಳೇನು, ನಿಮ್ಮ ಧ್ವನಿಗೆ ರೆಕಾರ್ಡಿಂಗ್‌ ಕ್ವಾಲಿಟಿ ಇದೆಯಾ- ಇವನ್ನೆಲ್ಲಾ ಇಲ್ಲಿ ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ.
-ಗಾಯನ ಅಂದ ತಕ್ಷಣ ಹೀಗೇ ಇರಬೇಕು, ಹಾಗೇ ಇರಬೇಕು ಅನ್ನುವ ಮೂಢನಂಬಿಕೆಗಳು ಯಾವುದು, ಅವೆಲ್ಲಾ ಹೇಗೆ ಸುಳ್ಳು ಅಂತ ಇಲ್ಲಿ ಹೇಳಿಕೊಡಲಾಗುತ್ತದೆ.
-ವೇದಿಕೆ ಅಂದರೆ ಕಾಲು ನಡುಗೋರನ್ನ ಕಂಟ್ರೋಲ್‌ಗೆ ತರುವ ಕೆಲಸವನ್ನು ಈ ವರ್ಕ್‌ಶಾಪ್‌ನಲ್ಲಿ ಮಾಡಲಾಗುತ್ತದೆ.

ನೀವೇನು ಮಾಡಬೇಕು?
-ಯಾವುದೇ ಭಾಷೆಯ, ನಿಮ್ಮಿಷ್ಟದ ಹಾಡನ್ನು ಸಿದ್ಧ ಮಾಡಿಕೊಂಡು ಬನ್ನಿ.
-ರೆಕಾರ್ಡಿಂಗ್‌ಗೆ ಅನುಕೂಲವಾಗುವಂತೆ ಹಾಡಿನ ಸಾಹಿತ್ಯ ಬರೆದುಕೊಂಡು ಬನ್ನಿ.
-ನೋಟ್‌ ಮಾಡಿಕೊಳ್ಳೋದಕ್ಕೆ ಪೆನ್ನು, ಪೇಪರ್‌ ತನ್ನಿ.
-ಧ್ವನಿಗೆ ಯಾವುದು ಒಳ್ಳೆಯದೋ ಆ ರೀತಿ ಬಿಸಿ/ತಣ್ಣನೆಯ ನೀರು ತನ್ನಿ

Advertisement

ಯಾವಾಗ?: ಜ. 22, ಭಾನುವಾರ, ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ
ಎಲ್ಲಿ?: ಸ ಸ್ಟುಡಿಯೋ, 232/1, 4ನೇ ಮೇನ್‌, ಬೈರಪ್ಪ ಬ್ಲಾಕ್‌, 2ನೇ ಬ್ಲಾಕ್‌, 4ನೇ ಮೇನ್‌, ತ್ಯಾಗರಾಜನಗರ, ಬಸವನಗುಡಿ
ರಿಜಿಸ್ಟ್ರೇಷನ್‌: ದೂರವಾಣಿ ಸಂಖ್ಯೆ 7899262262 ಅಥವಾ ಇ ಮೇಲ್‌ ವಿಳಾಸ FromMugToMike@gmail.comಮೂಲಕ ರಿಜಿಸ್ಟರ್‌ ಮಾಡಿಕೊಳ್ಳಿ.
 

Advertisement

Udayavani is now on Telegram. Click here to join our channel and stay updated with the latest news.

Next