Advertisement

New laws: “ಜುಲೈ 1ರಿಂದ ಐಪಿಸಿ ಕಾಯ್ದೆ ಇರಲ್ಲ, ಬದಲಿಗೆ ಬಿಎನ್‌ಎಸ್‌ ಕಾಯ್ದೆ ಜಾರಿ’

11:00 AM May 29, 2024 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಗಳ ಪ್ರಕಾರ ಹಳೇ ಪ್ರಕರಣ ಅಥವಾ ಶಿಕ್ಷೆ ಪ್ರಮಾಣ ಕಡಿಮೆ ಇರುವ ಪ್ರಕರಣಗಳಲ್ಲಿ ಏಕಾಏಕಿ ಎಫ್ಐಆರ್‌ ದಾಖಲಿಸಲು ಅವಕಾಶ ಇಲ್ಲ. ದೂರು ಸ್ವೀಕರಿಸಿ ಮಾಹಿತಿ ಕಲೆಹಾಕಲು 14 ದಿನಗಳ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಮೇಲ್ನೋಟಕ್ಕೆ ಕೃತ್ಯ ಸಾಬೀತಾದರೆ ಮಾತ್ರ ಎಫ್ ಐಆರ್‌ ದಾಖಲಿಸಬಹುದಾಗಿದೆ ಎಂದು ಹೈಕೋರ್ಟ್‌ ವಕೀಲ ಆರ್‌.ಎಂ.ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ನಗರ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ ಪೊಲೀಸರು ಹಾಗೂ ಅಪರಾಧ ವರದಿಗಾರರಿಗಾಗಿ ಮಂಗಳವಾರ ಆಯೋಜಿಸಿದ್ದ “ಮೂರು ಹೊಸ ಕಾನೂನುಗಳ ಪರಿಚಯ’ ವಿಶೇಷ ಕಾರ್ಯಾಗಾರದಲ್ಲಿ ಅವರು ವಿಷಯ ಮಂಡಿಸಿದರು. ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ 3 ಹೊಸ ಕಾನೂನು ಜಾರಿಗೊಳಿಸಿದ್ದು,ಜುಲೈ 1ರಿಂದ ದೇಶಾದ್ಯಂತ ಅನುಷ್ಠಾನಗೊಳ್ಳಲಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಜಾರಿ ಯಾಗುತ್ತಿದೆ. ಅದರ ಜತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯೂ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಹೊಸ ಕಾಯ್ದೆಗಳ ಪ್ರಕಾರ ದೂರುದಾರರ ಜತೆಯಲ್ಲಿ ಆರೋಪಿಗೂ ಕೃತ್ಯದ ಬಗ್ಗೆ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಕೃತ್ಯ ನಡೆದರೆ, ಠಾಣೆ ಮಿತಿ ಇಲ್ಲದೇ ಸಮೀಪದ ಠಾಣೆಗೆ ದೂರು ಕೊಡಲು ಹೊಸ ಕಾಯ್ದೆ ಅವಕಾಶ ನೀಡಿದೆ. ಹಾಗೆಯೇ ತನಿಖೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡುವುದನ್ನುಕಡ್ಡಾಯ ಗೊಳಿಸಲಾಗಿದೆ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ, ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಲಯ ಗಳಿಗೂ ಮಿತಿ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

358ಕ್ಕೆ ಇಳಿಕೆ: ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಸುಬ್ರಮಣ್ಯ ಗೌಡಪ್ಪ ನಗರ ಮಾತನಾಡಿ, ಐಪಿಸಿಯಲ್ಲಿ 511 ಸೆಕ್ಷನ್‌ಗಳಿವೆ. ಬಿಎನ್‌ಎಸ್‌ನಲ್ಲಿ ಸೆಕ್ಷನ್‌ಗಳನ್ನು 358ಕ್ಕೆ ಇಳಿಸಲಾಗಿದೆ. ಆದರೆ, ಯಾವುದೇ ಹಳೇ ಅಂಶವನ್ನು ಕೈಬಿಟ್ಟಿಲ್ಲ. ಕೆಲ ಮಾರ್ಪಾಡು ಮಾತ್ರ ಮಾಡಲಾಗಿದೆ. ಆದರೆ, ಹೊಸ ಕಾಯ್ದೆಯ ಕೆಲ ಸೆಕ್ಷನ್‌ಗಳಲ್ಲಿ ಅಸ್ಪಷ್ಟತೆ ಇದ್ದು, ಅವುಗಳ ಪರಿಶೀಲನೆ ನಡೆಯಬೇಕಿದೆ ಎಂದು ತಿಳಿಸಿದರು.

Advertisement

ಕಾರ್ಯಾಗಾರದಲ್ಲಿ ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೆ.ಎಂ. ಮಲ್ಲಿಕಾರ್ಜು ನಯ್ಯ, ಸಹ ಪ್ರಾಧ್ಯಾಪಕ ಡಾ. ಮಧುಸೂದನ್‌ ಜಿ., ಸಿಸಿಬಿ ಡಿಸಿಪಿ ಶ್ರೀನಿವಾಸ್‌ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next