Advertisement

ಶಿಕ್ಷಣದಿಂದ ಸಮಾಜ ಅಭಿವೃದ್ಧಿ

12:56 PM Sep 02, 2019 | Suhan S |

ಕೊಪ್ಪಳ: ಯಾವುದೇ ಒಂದು ಸಮಾಜದ ಅಭಿವೃದ್ಧಿ ಶಿಕ್ಷಣದಲ್ಲಿ ಅಡಗಿದೆ. ಬಣಜಿಗ ಸಮಾಜ ಕಾಯಕ ಬಂಧು ಸಮಾಜವಾಗಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕೆಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ನಗರದ ಮಹಾವೀರ ಕಲ್ಯಾಣ ಮಂಟದಲ್ಲಿ ತಾಲೂಕು ಬಣಜಿಗ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಮಾವೇಶದಲ್ಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಣಜಿಗ ಸಮಾಜ ಕಾಯಕವೇ ಕೆೈಲಾಸ ಎಂದು ಬಸವಣ್ಣನ ತತ್ವದಡಿ ಜೀವನ ನಡೆಸಿದೆ. ಇಲ್ಲಿನ ಜನತೆ ಅರ್ಥಶಾಸ್ತ್ರದಂತೆ ಲೆಕ್ಕಾಚಾರ, ಚಾಣಿಕ್ಯನ ನೀತಿಯಂತೆ ಕೆಲಸ ಮಾಡುತ್ತಿದ್ದಾರೆ. ಸಮಾಜವು ತಕ್ಕಡಿಯಲ್ಲಿ ಹೇಗೆ ಲೆಕ್ಕಾಚಾರ ಮಾಡುವರೋ ಅದೇ ರೀತಿ ನ್ಯಾಯಯುತವಾಗಿ ಜೀವನ ನಡೆಸಿ ಇತರರಿಗೆ ಮಾದರಿಯಾಗಿದೆ. ಕರ್ನಾಟಕ ರಾಜ್ಯಕ್ಕೆ ಬಣಜಿಗ ಸಮಾಜವು 7 ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ಹೊಂದಿದೆ. ವಿಜಯ ಸಂಕೇಶ್ವರ ಅವರಂತ ವ್ಯಕ್ತಿ ಇಂದು ಬಹು ದೊಡ್ಡ ಉದ್ಯಮ ಸ್ಥಾಪನೆ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇವರೊಟ್ಟಿಗೆ ಹಲವು ಮುಖಂಡರು ಉದ್ಯಮದಲ್ಲಿ ತಮ್ಮ ಜೀವನ ಕಂಡುಕೊಂಡಿದ್ದಾರೆ. ಬಡ ಕುಟುಂಬಕ್ಕೆ ಉದ್ಯೋಗ ನೀಡಿ ಅವರ ಜೀವನಕ್ಕೂ ದಾರಿಯಾಗಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಣಜಿಗ ಸಮಾಜ ಕಾಯಕವೇ ಕೆೈಲಾಸ ಎಂದು ನಂಬಿ ಕೆಲಸ ಮಾಡುವ ಸಮಾಜವಾಗಿದೆ. ಬಸವಣ್ಣನ ತತ್ವ ಆದರ್ಶದಲ್ಲಿ ಬದುಕಿದ ಸಮಾಜವಾಗಿದೆ. ಇಲ್ಲಿಯೂ ಬಡವರು ತುಂಬ ಜನ ಇದ್ದಾರೆ. ಶ್ರೀಮಂತರು ಸಮಾಜದ ಬಡ ಮಕ್ಕಳಿಗೆ ನೆರವಾಗಿ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಅವರನ್ನು ಮೇಲೆತ್ತುವ ಕೆಲಸ ಎಲ್ಲರಿಂದ ನಡೆಯಬೇಕು. ಜೊತೆಗೆ ಒಕ್ಕಟ್ಟಿನಿಂದ ಕೆಲಸ ಮಾಡಿದರೆ ಸಮಾಜ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಬಣಜಿಗ ಸಮಾಜವು ಬಸವಣ್ಣನ ಆದರ್ಶಗಳಂತೆ ನಡೆದು ಜೀವನ ನಡೆಸುತ್ತಿದೆ. ಇಲ್ಲಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವುದು ಮುಖ್ಯ. ಹಾಗಾಗಿ ಸಮಾಜದ ಮುಖಂಡರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅಭಿವೃದ್ಧಿಯತ್ತ ಸಾಗುವಂತೆ ಕರೆ ನೀಡಿದರು. ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಡಾ| ಶಿವಬಸಪ್ಪ ಹೆಸರೂರು ಮಾತನಾಡಿದರು. ಶ್ರೀಶೈಲ ಅಂಗಡಿ, ಶಿವಬಸಪ್ಪ, ರುದ್ರಣ್ಣ ಹೊಸಕೇರಿ, ಪ್ರೇಮಕ್ಕ ಅಂಗಡಿ, ಅಂದಣ್ಣ ಜವಳಿ, ವಿಶ್ವನಾಥ ಬಳೊಳ್ಳಿ, ರೇಣುಕಾ ಪಾಟೀಲ, ವೀರಣ್ಣ ಬುಳ್ಳಾ, ರಾಜಶೇಖರ ಅಂಗಡಿ, ಮಂಜುನಾಥ ಅಂಗಡಿ, ಅಪರ್ಣಾ ಬಳ್ಳೊಳ್ಳಿ, ಚನ್ನಬಸಪ್ಪ ಬಳ್ಳೊಳ್ಳಿ, ಶೇಖರಪ್ಪ, ಎಸ್‌.ಎಸ್‌. ಪಟ್ಟಣಶೆಟ್ಟರ್‌, ಬಸಟ್ಟೆಪ್ಪ, ವಿರೇಶ ಚಿನಿವಾರ, ಶರಣ ಬಸವರಾಜ, ರಾಜೇಶ ವಾಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next