Advertisement

ನೃತ್ಯದಿಂದ ವ್ಯಾಯಾಮ

11:46 PM Nov 25, 2019 | Sriram |

ಮನಸ್ಸು ಖುಷಿಯನ್ನು ಅನುಭವಿಸಿದಾಗ ಒಂದೆರಡು ಹೆಜ್ಜೆ ಹಾಕಿ ನೃತ್ಯ ಮಾಡಬೇಕು ಎನಿಸುವುದು. ನೃತ್ಯವನ್ನು ಮಾಡುವುದರಿಂದ ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಹಿತವಾದ ಅನುಭವ. ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುವುದು. ಅವು ತನ್ನಿಂದ ತಾನೇ ಕ್ರಿಯಾಶೀಲತೆಯನ್ನು ಪಡೆದುಕೊಂಡು ಸಂತೋಷವನ್ನು ಅನುಭವಿಸುತ್ತವೆ. ಮಾನಸಿಕವಾಗಿ ಹೆಚ್ಚಿನ ಆನಂದ ದೊರೆಯುವುದು. ಕೆಲವು ಅಧ್ಯಯನಗಳ ಪ್ರಕಾರ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡವು ಇಳಿಮುಖವಾಗುವುದು. ಅಲ್ಲದೆ ಚೈತನ್ಯಶೀಲ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ಹಾಗಾಗಿ ನೃತ್ಯ ರೂಪದ ವ್ಯಾಯಾಮ ವಿದೇಶದಲ್ಲಿ ಹೆಚ್ಚು ಜನಪ್ರಿಯ ಪಡೆದಿದ್ದು, ನಮ್ಮ ದೇಶದಲ್ಲಿ ಇನ್ನಷ್ಟೆ ಸದಭಿರುಚಿ ಮೂಡಬೇಕಾಗಿದೆ.

Advertisement

ಜಿಮ್‌ಗಿಂತಲೂ ಹೆಚ್ಚು ಪ್ರಭಾವಿ
ಕೆಲವು ಸಂಶೋಧನೆ ಅಧ್ಯಯನಗಳ ಪ್ರಕಾರ, ವ್ಯಾಯಾಮ ಹಾಗೂ ಜಿಮ್‌ಗಳಿಗಿಂತ ನೃತ್ಯ ಮಾಡುವುದರ ಮೂಲಕ ಬಹುಬೇಗ ಕ್ಯಾಲೊರಿಯನ್ನು ಕರಗಿಸಬಹುದು. ನೃತ್ಯವನ್ನು ಸಾಮಾನ್ಯವಾಗಿ ಮನೋರಂಜನೆ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ನೃತ್ಯ ಅದ್ಭುತವಾದ ಫಿಟ್‌ನೆಸ್‌ ಚಟುವಟಿಕೆಯಾಗಿದೆ. ಮನೆಯಲ್ಲೂ ನೃತ್ಯದ ಮೂಲಕ ದೇಹದ ಕ್ಯಾಲೊರಿಯನ್ನು ಇಳಿಸಬಹುದು.

ಕ್ಯಾಲೊರಿ ತಿಳಿವಳಿಕೆ ಅಗತ್ಯ
ಕೇವಲ ನೃತ್ಯ ಮಾಡುವುದೊಂದೇ ಗುರಿಯಾಗದೆ ಅದರೊಂದಿಗೆ ಕ್ಯಾಲೊರಿ ಬಗ್ಗೆಯೂ ಜ್ಞಾನ ಇರಬೇಕು. ಇಲ್ಲವಾದರೆ ದೇಹದಲ್ಲಿ ಕ್ಯಾಲೊರಿಯ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ. 1 ಕಿಲೋ ಕೊಬ್ಬನ್ನು ಕಳೆದುಕೊಳ್ಳಬೇಕು ಎಂದರೆ ವಾರದಲ್ಲಿ 3,500ರಷ್ಟು ಕಡಿಮೆ ಕ್ಯಾಲೊರಿಯನ್ನು ಹೊಂದಬೇಕು. ಹಾಗೇ ಪ್ರತಿದಿನ ಒಂದು ಗಂಟೆ ಕಾಲ ಮಧ್ಯಮ ತೀವ್ರತೆಯ ನೃತ್ಯ ಮಾಡಬೇಕು. ಆಗ 10 ರಿಂದ 11 ದಿನಗಳ ಒಳಗೆ 1 ಕಿಲೋ

ತೂಕ ಕಳೆದುಕೊಳ್ಳಬಹುದು.
ಕನಿಷ್ಠ ಒಂದು ಗಂಟೆ ಅಭ್ಯಾಸ
ನೃತ್ಯದಿಂದ ದೇಹದ ತೂಕ ಇಳಿಸಲು ಬಯಸುತ್ತೀರಿ ಎಂದಾದರೆ ಕ್ಯಾಲೊರಿ ಕೊರತೆಯನ್ನು ಸೃಷ್ಟಿಸಿಕೊಳ್ಳಲು ಸಾಕಷ್ಟು, ಕನಿಷ್ಠ ಒಂದು ಗಂಟೆ ನೃತ್ಯವನ್ನು ಮಾಡಬೇಕು. ಒಂದು ಪೌಂಡ್‌ ಕೊಬ್ಬನ್ನು ಕರಗಿಸಬೇಕಿದ್ದರೆ ಸುಮಾರು 3500 ರಷ್ಟು ಕ್ಯಾಲೊರಿ ಕೊರತೆಯನ್ನು ನೀವು ನಿರ್ವಹಿಸಬೇಕು. 125 ಪೌಂಡ್‌ ಹೊಂದಿರುವವರು ದಿನಕ್ಕೆ ಒಂದು ಗಂಟೆ ಕಾಲ ನೃತ್ಯ ಮಾಡುವುದರಿಂದ ಪ್ರತಿ 10-11 ದಿನಗಳಿಗೊಮ್ಮೆ 1 ಕೆ.ಜಿ. ತೂಕವನ್ನು ಇಳಿಸಬಹುದು. ನೃತ್ಯದ ತೀವ್ರತೆಯನ್ನು ಹೆಚ್ಚಿಸುತ್ತಾ ಹೋದಂತೆ ಹೆಚ್ಚಿನ ಶಕ್ತಿಯನ್ನು ವ್ಯಯಿಸಲು ಸಾಧ್ಯವಾಗುತ್ತದೆ. ಸಾಕಷ್ಟು ವ್ಯಾಯಾಮದಿಂದ ದೇಹದ ಕ್ಯಾಲೊರಿಯ ಮೇಲೆ ನೇರ ಪರಿಣಾಮ ಉಂಟಾಗುವುದು.

- ಕಾರ್ತಿಕ್‌ ಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next