Advertisement

BHU; ಕೊವ್ಯಾಕ್ಸಿನ್‌ನಿಂದ ಶೇ. 33 ಜನರಿಗೆ ಅಡ್ಡಪರಿಣಾಮ

02:02 AM May 18, 2024 | Team Udayavani |

ಹೊಸದಿಲ್ಲಿ: ಭಾರತ ಬಯೊಟೆಕ್‌ ಕಂಪೆನಿಯ ಕೊವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಆರೋಗ್ಯದಲ್ಲಿ ವಿವಿಧ ಅಡ್ಡ ಪರಿಣಾಮಗಳು ಸಂಭವಿಸಿವೆ ಎಂದು ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್‌ಯು) ಸಂಶೋಧನ ವರದಿ ತಿಳಿಸಿದೆ. ನಡೆಸಲಾದ ಸಮೀಕ್ಷೆಯಲ್ಲಿ 635 ಮಕ್ಕಳು ಹಾಗೂ 291 ವಯಸ್ಕರು ಭಾಗವಹಿಸಿದ್ದರು. ದತ್ತಾಂಶಗಳ ಅನುಸಾರ ಶೇ. 33 ಜನರಿಗೆ ಕೊವ್ಯಾಕ್ಸಿನ್‌ ಲಸಿಕೆಯಿಂದ ಆರೋಗ್ಯದಲ್ಲಿ ಅಡ್ಡಪರಿಣಾಮ ಕಂಡು ಬಂದಿದೆ. ಹೃದಯ, ಚರ್ಮ, ನರ, ಸ್ನಾಯುಗಳಿಗೆ ಸಂಬಂಧಿಸಿದಂತೆ ಅಸ್ವಸ್ಥತೆ ಉಂಟಾಗಿದೆ. ಶೇ.4.6 ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next