Advertisement

ಮನೆಯಲ್ಲೇ ಏಷ್ಯಾ, ಆಫ್ರಿಕಾ 

06:10 AM Jan 29, 2018 | Harsha Rao |

ನವದೆಹಲಿ: ಏಷ್ಯಾ, ಅಮೆರಿಕ, ಆಫ್ರಿಕಾ ಇದು ಖಂಡಗಳ ಹೆಸರು. ಸಮಾಜ ವಿಜ್ಞಾನದಲ್ಲಿ ಬರುವ ಈ ಹೆಸರುಗಳು ಮನುಷ್ಯನಿಗೆ ಇದ್ದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಲು ಸಾಧ್ಯವೇ? ಒಡಿಶಾದ ಕುಟುಂಬದ ಸದಸ್ಯರಿಗೆ ಇಂಥ ಹೆಸರುಗಳಿವೆ. “ಹೌದು. ಏಷ್ಯಾ ಕುಮಾರ್‌ ಎನ್ನುವುದೇ ನನ್ನ ಹೆಸರು’ ಹೀಗೆನ್ನುತ್ತಾರೆ ಏಷ್ಯಾ ಕುಮಾರ್‌. ಒಂದು ವೇಳೆ ನಂಬದೇ ಇದ್ದರೆ ಶರ್ಟ್‌ ಜೇಬಿನಿಂದ ಆಧಾರ್‌ ಕಾರ್ಡ್‌ ತೆಗೆದು ತೋರಿಸುತ್ತಾರೆ. ಅಂದ ಹಾಗೆ ಇದು ಅಡ್ಡಹೆಸರು ಅಲ್ಲವೇ ಅಲ್ಲ. ಇಷ್ಟು ಮಾತ್ರವಲ್ಲ ಅವರ ಸಹೋದರಾದ ಆಫ್ರಿಕಾ ಕುಮಾರ್‌ ಮುಂಬೈನಲ್ಲಿ, ಜಪಾನ್‌ ಕುಮಾರ್‌ ಚಂಡೀಗಡ, ರಷ್ಯಾ ಕುಮಾರ್‌ ನವದೆಹಲಿಯಲ್ಲಿ ನೆಲೆಸಿದ್ದಾರೆ. ಭಾರತ್‌ ಕುಮಾರ್‌ ಎಂಬುವರು ಒಡಿಶಾದಲ್ಲಿನ ಅವರ ಸ್ವಗ್ರಾಮದಲ್ಲಿ ನೆಲೆಸಿದ್ದಾರೆ. ಮತ್ತೂಬ್ಬ ಸಹೋದರ ಅಮೆರಿಕ ಕುಮಾರ್‌ 2002ನೇ ಇಸ್ವಿಯಲ್ಲಿ ಅಸುನೀಗಿದ್ದಾರೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಇಂಥ ಹೆಸರು ಬರಲೂ ಕಾರಣವಿದೆ. ಹುಟ್ಟೂರಲ್ಲಿ ಅವರ ತಂದೆ ಟೈಲರ್‌ ಆಗಿದ್ದರು. ಅವರಿಗೆ ವಿದೇಶ ಸುತ್ತುವ ಆಸೆ ಇದ್ದಿತ್ತು. ಆದರೆ ಅದನ್ನು ಪೂರೈಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ಮಕ್ಕಳಿಗೆ ದೇಶ ಮತ್ತು ಖಂಡದ ಹೆಸರುಗಳನ್ನು ಇರಿಸಿದರು ಎಂದು ಏಷ್ಯಾ ಕುಮಾರ್‌ ನೆನಪಿಸಿಕೊಂಡರು. ಬ್ಯಾಂಕ್‌ನ‌ಲ್ಲಿ ಕೆಲಸ ಮಾಡುವ ಏಷ್ಯಾಗೆ ಲ್ಯಾಂಡ್‌ಲೈನ್‌ಗೆ ಕರೆ ಬಂದಿತ್ತು. ಆಗ ಅವರು ಇಲ್ಲದೇ ಇದ್ದುದರಿಂದ ಸಹೋದ್ಯೋಗಿ ಕರೆ ಸ್ವೀಕರಿಸಿದ್ದರು. ನಂತರ ಬಂದ ಏಷ್ಯಾಗೆ ಸಹೋದ್ಯೋಗಿ, “ಯಾರೋ ಆಫ್ರಿಕಾದಿಂದ ನಿಮಗೆ ಕಾಲ್‌ ಮಾಡಿದ್ದರು’ ಎಂದಾಗ ಏಷ್ಯಾ ಕುಮಾರ್‌, “ಆಫ್ರಿಕಾ, ನನ್ನ ಸಹೋದರ. ಅವನಿಂದ ಕರೆ ಬಂದಿದ್ದರಬಹುದು’ ಎಂದರಂತೆ.

Advertisement

Udayavani is now on Telegram. Click here to join our channel and stay updated with the latest news.

Next