Advertisement
1. ಭೂಮಿಯ ಕಕ್ಷೆ ಬದಲಾವಣೆ2023ರಲ್ಲಿ ಭೂಮಿಯ ಕಕ್ಷೆ ಬದಲಾಗುತ್ತದೆ. ಬ್ರಹ್ಮಾಂಡದಲ್ಲಿ ಭೂಮಿಯ ಚಲನೆಯಲ್ಲಿ ಸ್ವಲ್ಪ ಹೆಚ್ಚು-ಕಮ್ಮಿಯಾದರೂ ದೊಡ್ಡ ಮಟ್ಟದ ಬದಲಾವಣೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಬಾಬಾ ವಂಗಾ. ಭೂಮಿಯೇನಾದರೂ ಸೂರ್ಯನನ್ನು ಸಮೀಪಿಸಿದರೆ, ವಿಕಿರಣಗಳ ಪ್ರಮಾಣ ಹೆಚ್ಚಳವಾಗಿ, ತಾಪಮಾನ ವಿಪರೀತ ಏರಲಿದೆ. ಒಂದು ವೇಳೆ, ಭೂಮಿಯು ಸೂರ್ಯನಿಂದ ಹಿಂದಕ್ಕೆ ಸರಿದರೆ, ನಾವು ಹಿಮಯುಗಕ್ಕೆ ಬಿದ್ದು, ಕತ್ತಲ ಅವಧಿಯು ಹೆಚ್ಚಲಿದೆ.
ಜಗತ್ತು ಹಿಂದೆಂದೂ ಕಂಡಿರದಂಥ ಸೌರ ಸುನಾಮಿಯು 2023ರಲ್ಲಿ ಸಂಭವಿಸಲಿದೆ ಎಂದೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಸೂರ್ಯನಿಂದ ಹೊರಬರುವ ಜ್ವಾಲೆಗಳು ಕೋಟಿಗಟ್ಟಲೆ ಅಣುಬಾಂಬ್‌ಗಳಷ್ಟು ಬಲಿಷ್ಠವಾಗಿರುತ್ತವೆ. ಮುಂದಿನ ವರ್ಷ ಸಂಭವಿಸುವ ಸೌರ ಸುನಾಮಿಯು ತಂತ್ರಜ್ಞಾನಗಳಿಗೆ ಹಾನಿ ಉಂಟುಮಾಡಲಿದೆ ಮತ್ತು ವಿದ್ಯುತ್ ಅಭಾವ, ಸಂವಹನ ವೈಫಲ್ಯಗಳಿಗೂ ಕಾರಣವಾಗಲಿದೆಯಂತೆ. 3. ಜೈವಿಕ ಅಸ್ತ್ರಗಳು
“ಬೃಹತ್ ದೇಶ’ವೊಂದು ಜನರ ಮೇಲೆ ಜೈವಿಕ ಅಸ್ತ್ರವನ್ನು ಪ್ರಯೋಗಿಸಲಿದೆ. ಪರಿಣಾಮವಾಗಿ, ಸಾವಿರಾರು ಜೀವಗಳು ಬಲಿಯಾಗಲಿವೆ. ಈಗಾಗಲೇ ವಿಶ್ವಸಂಸ್ಥೆಯು ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ನಿಷೇಧ ಹೇರಿದೆ. ಆದರೂ, ಅನೇಕ ದೇಶಗಳು ರಹಸ್ಯವಾಗಿ ಇಂಥ ಪ್ರಯೋಗಗಳನ್ನು ನಡೆಸುತ್ತಲೇ ಇವೆ.
Related Articles
2023ರಲ್ಲಿ ಪರಮಾಣು ವಿದ್ಯುತ್ ಸ್ಥಾವರವೊಂದು ಸ್ಫೋಟಗೊಳ್ಳಲಿದೆ ಎಂದಿದ್ದಾರೆ ಬಾಬಾ ವಂಗಾ. ಈಗಾಗಲೇ ರಷ್ಯಾವು ಉಕ್ರೇನ್‌ಗೆ “ಅಣ್ವಸ್ತ್ರ ಪ್ರಯೋಗದ ಬ್ಲ್ಯಾಕ್‌ಮೇಲ್ ‘ ಮಾಡುತ್ತಿರುವ ಕಾರಣ, ಕೀವ್‌ನಲ್ಲೇ ಈ ಸ್ಫೋಟ ಸಂಭವಿಸಬಹುದೇ ಎಂಬ ಅನುಮಾನ ಮೂಡಿದೆ.
Advertisement
5. ಲ್ಯಾಬ್ ಶಿಶುಗಳುನೈಸರ್ಗಿಕ ಜನನಗಳ ಸಂಖ್ಯೆ ಕಡಿಮೆಯಾಗಿ, ಮನುಷ್ಯರೆಲ್ಲ ಪ್ರಯೋಗಾಲಯಗಳಲ್ಲೇ ಸೃಷ್ಟಿಯಾಗುವಂತ ಸ್ಥಿತಿ ನಿರ್ಮಾಣವಾಗಲಿದೆ. ಯಾರು ಹುಟ್ಟಬೇಕು ಎಂಬುದನ್ನು ವಿಶ್ವನಾಯಕರು ಮತ್ತು ವೈದ್ಯಕೀಯ ತಜ್ಞರೇ ನಿರ್ಧರಿಸುವಂತಾಗುತ್ತದೆ. ಯಾರಿವರು ಬಾಬಾ ವಂಗಾ?
1911ರಲ್ಲಿ ಬಲ್ಗೇರಿಯಾದಲ್ಲಿ ಹುಟ್ಟಿದ ಬಾಬಾ ವಂಗಾ ಅವರು ತಮ್ಮ 12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡರು. ಅಂದಿನಿಂದ ಅವರಿಗೆ, ಭವಿಷ್ಯವಾಣಿ ನುಡಿಯುವಂಥ ಅತೀಂದ್ರಿಯ ಶಕ್ತಿ ಬಂತೆಂದು ಹೇಳಲಾಗಿದೆ. “ನಾಸ್ಟ್ರಾಡಾಮಸ್ ಆಫ್ ದಿ ಬಾಲ್ಕನ್ಸ್’ ಎಂದೇ ಕರೆಯಲ್ಪಡುವ ಅವರು 1996ರಲ್ಲಿ ಕೊನೆಯುಸಿರೆಳೆದರು. ಆದರೆ, 5079ನೇ ಇಸವಿಯವರೆಗಿನ ಭವಿಷ್ಯವಾಣಿಯನ್ನು ಅವರು ಬರೆದು ಹೋಗಿದ್ದಾರೆ. 5079ರಲ್ಲಿ ಈ ಜಗತ್ತು ಅಂತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರು ನುಡಿದಿರುವ ಭವಿಷ್ಯ ಶೇ.85ರಷ್ಟು ನಿಜವಾಗಿದೆ ಎಂದು ಅಂದಾಜಿಸಲಾಗಿದೆ.