Advertisement
ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ‘ಮಂಡೂಕ ಪರಿಣಯ'(ಕಪ್ಪೆ ಮದುವೆ) ನಡೆಸಲು ಸಿದ್ಧತೆ ನಡೆಯುತ್ತಿದೆ.
ಹೆಣ್ಣು ಕಪ್ಪೆಯನ್ನು ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿದೆ. ಹೆಣ್ಣು ಕಪ್ಪೆಗೆ ‘ವರ್ಷಾ’ ಎಂದೂ, ಗಂಡು ಕಪ್ಪೆಗೆ ‘ವರುಣ’ ಎಂದೂ ನಾಮಕರಣ ಮಾಡಲಾಗಿದೆ. ‘ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ’ ಎಂಬ ಒಕ್ಕಣೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿದೆ.
Related Articles
ಕಪ್ಪೆಗಳ ಸಂತತಿ ಕಡಿಮೆಯಾಗಿರುವುದರಿಂದ ನಿತ್ಯಾನಂದ ಒಳಕಾಡು ಅವರು ಕಪ್ಪೆಗಳನ್ನು ತರಲು ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದಾರೆ. ಅನಂತರ ಅವುಗಳನ್ನು ಪ್ರಸಿದ್ಧ ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆಗೊಳಪಡಿಸಿ ಗಂಡು ಯಾವುದು, ಹೆಣ್ಣು ಯಾವುದು ಎಂಬುದನ್ನು ಗುರುತಿಸಿದ್ದಾರೆ.
Advertisement