Advertisement

ಸ್ನೇಹವೆಂಬ ಭಾಗ್ಯ

08:20 PM Sep 12, 2019 | mahesh |

ಎಲ್ಲೋ ಹುಟ್ಟಿ ಎಲ್ಲೋ ಬೆಳೆದವರ ನಡುವೆ ಎಲ್ಲೋ ಜೊತೆಯಾದ ಸ್ನೇಹವು ಕರುಳ ಬಳ್ಳಿಯಷ್ಟೆ ನಿಕಟವಾಗಿ ಬದುಕಿಗೆ ಬಂದುಬಿಡುತ್ತದೆ. ಬಾಲ್ಯದಲ್ಲಿ ನಾವು ಸ್ನೇಹಿತರೊಂದಿಗೆ ಸೇರಿ ಚಿನ್ನಿದಾಂಡು ಕುಂಟೇಬಿಲ್ಲೆ ಆಡಿದವರು, ತರಗತಿಯಲ್ಲಿ ತಮಾಷೆ ಮಾಡುತ್ತ ಜೊತೆಯಾಗಿದ್ದವರು, ಹಾಸ್ಟೆಲಿನಲ್ಲಿ ರೂಮು ಹಂಚಿಕೊಂಡು ಎಲ್ಲರೂ ನಮ್ಮವರೇ ಎಂದು ಭಾವಿಸಿ ಕಷ್ಟ-ಸುಖವನ್ನು ಹಂಚಿಕೊಂಡವರು, ಕೆಲಸಕ್ಕೆ ತೆರಳಿದಾಗ ಪರಿಚಯವಾದವರು, ಎಲ್ಲೋ ಬಸ್‌ನಲ್ಲಿ ಭೇಟಿ ಆದವರು, ಹಾಗೆ ಮೊಬೈಲ್‌ ಮಾತುಗಳಲ್ಲಿ ನೋಡದೆ ಇದ್ದರೂ ಪರಿಚಯವಾದವರು ಹೀಗೆ ಗುರುತು-ಪರಿಚಯ ಇಲ್ಲದವರನ್ನು ಕೂಡ ತುಂಬ ಹತ್ತಿರದವರಾಗಿ ಮಾಡುವುದೇ ಸ್ನೇಹ. ಜಾತಿ, ನೀತಿ ಏನನ್ನೂ ನೋಡದೆ ನಾವು ಒಂದೇ ಎಂದು ನೋಡುವ ಮತ್ತು ಸೇರಿಸುವ ಸಂಬಂಧವೆಂದರೆ ಅದು ಸ್ನೇಹವೊಂದೆ.

Advertisement

ಕೆಲವರು ಹೇಳುತ್ತಾರೆ “ನಮ್ಮ ಅಪ್ಪ-ಅಮ್ಮ ನಮ್ಮನ್ನು ಫ್ರೆಂಡ್‌ ತರಹ ಟ್ರೀಟ್‌ ಮಾಡ್ತಾರೆ. ನಮಗೂ ಅವರು ಫ್ರೆಂಡ್ಸ್‌ ಇದ್ದ ಹಾಗೆ ಅಂತ ಎಷ್ಟೋ ಜನ ಹೇಳುತ್ತಾರೆ. ಆದರೆ, ನಿಜ ಹೇಳಬೇಕೆಂದರೆ ನಾವು ಅವರನ್ನು ಫ್ರೆಂಡ್ಸ್‌ ಎಂದು ಭಾವಿಸಿದರೂ ಕೂಡ ಎಲ್ಲಾ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳುವುದಿಲ್ಲ. ನಿಜವಾದ ಮಾತು ಏನೆಂದರೆ ನಾವು ಅಪ್ಪ-ಅಮ್ಮನಿಗೂ ಹೇಳಲಾಗದಂಥ‌ ಕೆಲವು ವಿಷಯಗಳನ್ನು ನಮ್ಮ ಆಪ್ತ ಗೆಳೆಯ-ಗೆಳತಿ ಹತ್ತಿರ ಹೇಳಿಕೊಳ್ಳುತ್ತೇವೆ. “ಫ್ರೆಂಡ್‌ಶಿಪ್‌ ಡೇ’ ಎಂದು ಕೈಗೊಂದು ಬ್ಯಾಂಡ್‌ ಕಟ್ಟಿ ಬೆನ್ನ ಹಿಂದೆಯೇ ಚೂರಿ ಹಾಕುವ ಸ್ನೇಹಿತರೂ ಇದ್ದಾರೆ. ಹಾಗೆಯೇ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರೂ ಇದ್ದಾರೆ. ನಮ್ಮ ಬದುಕಿನಲ್ಲಿ ಕಷ್ಟದ ಸಮಯದಲ್ಲಿ ಕೈಹಿಡಿದವರು ನಿಜವಾದ ಸ್ನೇಹಿತನಾಗಿರುತ್ತಾರೆ. ವ್ಯಕ್ತಿತ್ವಗಳು ಬೇರೆ ಬೇರೆಯೇ ಇರಬಹುದು. ಆದರೆ, ಸ್ನೇಹ ಯಾವತ್ತಿಗೂ ಒಂದೇ. ಸ್ನೇಹದಲ್ಲಿ ಜಗಳಗಳು ಬರುವುದು ಸಹಜ. ಆದರೆ, ಆ ಜಗಳದಿಂದ ಒಂದು ಉತ್ತಮವಾದ ಸಂಬಂಧ ಕಳೆದುಕೊಳ್ಳಬಾರದು. ಅವರೇ ಬಂದು ಮಾತನಾಡಿಸಬೇಕು ಎಂದು ಸಿಟ್ಟಿನಿಂದ ಇದ್ದರೆ ಸ್ನೇಹ ಕಣ್ಣ ಮುಂದೆಯೇ ಸತ್ತು ಹೋಗುತ್ತದೆ. ಕೆಲವರು ಎಷ್ಟೋ ವರ್ಷಗಳಿಂದ ಸ್ನೇಹಿತರಾಗಿ ನಂತರ ಯಾರೋ ಏನೋ ತಪ್ಪು ತಿಳುವಳಿಕೆ ನೀಡಿ ಅವರನ್ನು ಬೇರೆ ಮಾಡುವ ಪ್ರಯತ್ನ ಮಾಡುತ್ತಾರೆ. ಕೆಲವರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ.

ಫ್ರೆಂಡ್‌ಶಿಪ್‌ ಡೇ ದಿನ ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟಿ ಸ್ನೇಹ ಮಾಡಿದರೆ ಅದು ಉತ್ತಮ ಸ್ನೇಹ ಆಗುವುದಿಲ್ಲ. ಅದು ಸ್ನೇಹಕ್ಕೆ ನಿಜವಾಗಿಯೂ ಕೊಡುವ ಬೆಲೆಯಲ್ಲ. ಒಂದು ಉತ್ತಮ ಸ್ನೇಹವನ್ನು ಕೊನೆವರೆಗೆ ಉಳಿಸಿಕೊಳ್ಳಬೇಕುಎನ್ನುವುದೇ ಸ್ನೇಹಕ್ಕೆ ಕೊಡುವ ಬೆಲೆಯಾಗಿರುತ್ತದೆ. ಸ್ನೇಹಿತರೆಂದರೆ ಕೇವಲ ಸಂತೋಷ, ನಲಿವು ಇವುಗಳಿಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ದುಃಖ-ನೋವು ಇವುಗಳನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರೇ ನಿಜವಾದ ಸ್ನೇಹಿತರು. ಸ್ನೇಹಿತರಾದ ಮೇಲೆ ತಾನು ಮೊದಲು ನೀನು ಮೊದಲು ಅನ್ನೋ ಮಾತು ಬರಬಾರದು. ಏನೇ ತೊಂದರೆ ಆದರೂ ಒಬ್ಬರನ್ನು ಒಬ್ಬರು ಯಾವತ್ತೂ ಬಿಟ್ಟುಕೊಡಬಾರದು. ಅವರೇ ನಿಜವಾದ ಸ್ನೇಹಿತರಾಗುತ್ತಾರೆ.

ಪೂಜಾ
ಪ್ರಥಮ ಬಿ. ಎ.
ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ
ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next