Advertisement

ಫ್ರೆಂಡ್‌ಶಿಪ್‌ ಕಂಡಿಷನ್ಸ್‌ ಅಪ್ಲೈ

09:54 PM Jul 02, 2019 | mahesh |

ಎಲ್ಲ ಸ್ನೇಹಿತರೂ ನಂಬಿಕೆಗೆ ಅನರ್ಹರು ಅಂತಲ್ಲ. ನಮ್ಮ ಗೆಳೆತನಕ್ಕೆ ಮೋಸ ಮಾಡದೆ, ದ್ರೋಹ ಬಗೆಯದೆ ನಮ್ಮವರಾಗೇ ಉಳಿಯುವವರೂ ಖಂಡಿತ ಇರುತ್ತಾರೆ. ಆದರೆ, ಸ್ನೇಹಿತರ ಆಯ್ಕೆಯಲ್ಲಿ ಎಚ್ಚರ ತಪ್ಪಿದರೆ ನೋವು ಕಟ್ಟಿಟ್ಟ ಬುತ್ತಿ.

Advertisement

ಗೆಳೆತನ ಕೊನೆತನಕ (ಫ್ರೆಂಡ್‌ಶಿಪ್‌ ಫಾರೆವರ್‌) ಎನ್ನುವ ಮಾತು ಎಲ್ಲ ಕಾಲಕ್ಕೂ, ಎಲ್ಲ ಸಂದರ್ಭಕ್ಕೂ ಅನ್ವಯವಾಗದು. ಹೆಣ್ಣುಮಕ್ಕಳು ಈ ಮಾತನ್ನು ಅರ್ಥ ಮಾಡಿಕೊಳ್ಳಲೇಬೇಕು. ಯಾಕಂದ್ರೆ, ಗೆಳೆತನವನ್ನು ಅತಿಯಾಗಿ ನಂಬಿ, ಮನಸ್ಸಿಗೆ ನೋವು ಮಾಡಿಕೊಳ್ಳುವುದರಲ್ಲಿ ಹೆಣ್ಮಕ್ಕಳೇ ಮುಂದಿರುವುದು

ಗೆಳತಿಯೊಬ್ಬಳು ನಮಗೆ ತುಂಬಾ ಆಪ್ತಳಾಗುತ್ತಾಳೆ. ಅವಳೊಂದಿಗೆ ಮಾತಾಡಿದರೆ ಅದೇನೊ ಸಮಾಧಾನ, ಒಟ್ಟಿಗೇ ಕೂತು ಎಲ್ಲ ವಿಷಯ- ವಿಚಾರಗಳ ವಿಮರ್ಶೆ ನಡೆಸಲೇಬೇಕು, ನಾವು ಸಂತೋಷಪಟ್ಟಾಗ ಅವಳ ಸಂಭ್ರಮ, ದುಃಖವಾದಾಗ ಅವಳ ಸಾಂತ್ವನ…ಒಟ್ಟಿನಲ್ಲಿ, ನಮ್ಮ ಮನದ ಅಂತರಾಳ ಅವಳ ಮುಂದೆ ತೆರೆದಿಟ್ಟ ಪುಸ್ತಕದಂತೆ. ಅಷ್ಟೊಂದು ನಂಬಿಕೆ, ವಿಶ್ವಾಸ ಅವಳಲ್ಲಿ .ಅವಳೂ ಹಾಗೇ, ಸ್ನೇಹ ಎನ್ನುವ ಮಾತಿಗೆ ಅನ್ವರ್ಥದಂತೆ ಇರುತ್ತಾಳೆ.

ಹೀಗಿದ್ದವಳು, ಇದ್ದಕ್ಕಿದ್ದಂತೆ ನಮ್ಮೊಂದಿಗೆ ಮಾತು ಕಡಿಮೆ ಮಾಡುತ್ತಾಳೆ. ಕಂಡರೂ ಕಾಣದಂತೆ ಮುಖ ಮರೆಸಿಕೊಳ್ಳುತ್ತಾಳೆ. ನಮ್ಮ ನೋವು-ನಲಿವಿಗೆ ಅವಳ ಸ್ಪಂದನೆ ಯಾಂತ್ರಿಕ ಅನಿಸುತ್ತದೆ. ದಿನಕಳೆದಂತೆ, ನಿನ್ನೊಂದಿಗೆ ನಂಗೆ ಮಾತೇ ಬೇಡ ಎನ್ನುವ ಭಾವ, ಅವಳ ಮುಖದಲ್ಲಿ ಸ್ಪಷ್ಟವಾಗಿ ಕಾಣತೊಡಗುತ್ತದೆ. ಎದುರಿಗೆ ಸಿಕ್ಕಾಗ ಮಾತ್ರ ಹಾಯ್‌- ಬಾಯ್‌ ಎನ್ನು ವ ಅವಳ ಮಾತುಗಳು ಯಕ್ಷಪ್ರಶ್ನೆಯಾಗಿ ಕಾಡತೊಡಗುತ್ತವೆ. ಈಕೆ ನನ್ನ ಆತ್ಮೀಯ ಸ್ನೇಹಿತೆ. ಇವಳು ಯಾವತ್ತೂ ನನ್ನಿಂದ ದೂರವಾಗುವುದಿಲ್ಲ. ನಮ್ಮ ಗೆಳೆತನ ಯಾವತ್ತೂ ಹೀಗೆಯೇ ಇರುತ್ತದೆ ಎಂದುಕೊಂಡ ಮನಸ್ಸಿಗೆ ದೊಡ್ಡ ಘಾಸಿಯಾಗುತ್ತದೆ.

ಯಾವ ಕಾರಣವನ್ನೂ ನೀಡದೆ ಗೆಳೆತನದ ಕೊಂಡಿ ಕಳಚಿಕೊಂಡ ಆಕೆ, ಎಲ್ಲರೆದುರೇ ನಮ್ಮನ್ನು ಆಡಿಕೊಂಡು, ನಗೆಪಾಟಲಿಗೆ ಗುರಿಯಾಗುವಂತೆ ಮಾಡುತ್ತಾಳೆ. ಹಿಂದೆ ಅವಳೊಂದಿಗೆ ಹಂಚಿಕೊಂಡ ನಮ್ಮ ವೈಯಕ್ತಿಕ ವಿಚಾರಗಳು, ಸುಖ ದುಃಖಗಳು, ನೋವು-ನಲಿವುಗಳು, ಅಂತರಾಳದ ಆಗು-ಹೋಗುಗಳು ಆಕೆಗೆ ಬೇರೆಯವರೊಂದಿಗೆ ಹರಡಲು ಅವಲಕ್ಕಿ-ಚಿತ್ರಾನ್ನಗಳಾಗಿ ಬಿಡುತ್ತವೆ. ನಮ್ಮ ಜೊತೆ ಇ¨ªಾಗ ಅನುಕಂಪ ತೋರಿಸುವ ಗೆಳತಿ, ಇತರರೊಂದಿಗಿ¨ªಾಗ ಬೇರೆಯದೇ ರೀತಿ ವರ್ತಿಸುತ್ತಾಳೆ. ನಮ್ಮೆಲ್ಲ ಭಾವನೆಗಳು ಬೇರೆಯವರಿಗೆ ಹರಟುವ ವಸ್ತುವಾಗುತ್ತದೆ. ನೋವುಣ್ಣುವ ಸರದಿ ಮಾತ್ರ ನಮ್ಮದಾಗುತ್ತದೆ. ಅದಕ್ಕೇ ಹೇಳಿದ್ದು; ಸ್ನೇಹ ಮತ್ತು ಸ್ನೇಹಿತರು ಶಾಶ್ವತವಾಗಿ ಜೊತೆಗುಳಿಯುವುದಿಲ್ಲ.

Advertisement

ನಮ್ಮ ಎಚ್ಚರ ನಮ್ಮದು
ಎಲ್ಲ ಸ್ನೇಹಿತರೂ ನಂಬಿಕೆಗೆ ಅನರ್ಹರು ಅಂತಲ್ಲ. ನಮ್ಮ ಗೆಳೆತನಕ್ಕೆ ಮೋಸ ಮಾಡದೆ, ದ್ರೋಹ ಬಗೆಯದೆ ನಮ್ಮವರಾಗೇ ಉಳಿಯುವವರೂ ಖಂಡಿತ ಇರುತ್ತಾರೆ. ಆದರೆ, ಸ್ನೇಹಿತರ ಆಯ್ಕೆಯಲ್ಲಿ ಎಚ್ಚರ ತಪ್ಪಿದರೆ ನೋವು ಕಟ್ಟಿಟ್ಟ ಬುತ್ತಿ. ಹಾಗಾಗಿ, ಸ್ನೇಹದ ವಿಷಯದಲ್ಲಿ ಎಡವದಂತೆ ಎಚ್ಚರವಹಿಸಿ
1. ಗೆಳೆತನದಲ್ಲಿ ನಂಬಿಕೆ, ವಿಶ್ವಾಸಕ್ಕೆ ಪ್ರಮುಖ ಪಾತ್ರ. ಸ್ನೇಹಿತರ ನಂಬಿಕೆ ಕಳೆದುಕೊಳ್ಳುವ ಕೆಲಸ ಮಾಡಬೇಡಿ
2. ಸ್ನೇಹಿತರು ಒಳ್ಳೆಯವರೋ ಕೆಟ್ಟವರೋ, ತಪ್ಪು ಅವರಧ್ದೋ ನಮ್ಮದೋ, ನಾವಿಷ್ಟವಾದೆವೋ, ಇಲ್ಲವೋ ಎಂಬ ಜಿಜ್ಞಾಸೆಗಿಂತ, ನಮ್ಮ ಬದುಕಿನೊಳಗೆ ಅವರ ಪಾತ್ರ ಎಷ್ಟು ಅಗತ್ಯವಿದೆಯೋ, ಅದನ್ನರಿತು ಮುಂದುವರಿದರೆ ಉತ್ತಮ.
3. ಯಾರನ್ನೂ ಅತಿಯಾಗಿ ಹಚ್ಚಿಕೊಂಡು, ಅವಳಿಲ್ಲದಿದ್ದರೆ ನಾನಿಲ್ಲ ಅನ್ನಬೇಡಿ.
4. ಅತೀ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವುದು, ಹಣದ ವ್ಯವಹಾರ ಮಾಡುವುದು ಒಳ್ಳೆಯದಲ್ಲ.
5. ಸ್ನೇಹಿತರೊಂದಿಗಿನ ಚರ್ಚೆ ಸಕಾರಾತ್ಮಕವಾಗಿರಲಿ. ಅನಗತ್ಯ ಮಾತು, ಮೂರನೆಯವರನ್ನು ದೂರುವುದು, ನಿಂದಿಸುವುದು, ಗಾಸಿಪ್‌ ಮಾಡುವುದು ಸಲ್ಲ.
6. ನಮ್ಮ ನಮ್ಮ ಅಂತರಾಳದ ಭಾವನೆಗಳು ನಮಗೆ ಸೀಮಿತ. ಈ ಮಾತು ನಮಗೂ, ಸ್ನೇಹಿತರಿಗೂ ಅನ್ವಯಿಸುತ್ತದೆ. ಬೇಸರವಾಗುವಂಥ ವಿಷಯಗಳನ್ನು ಕೆದಕಲು ಹೋಗಬೇಡಿ.
ಸ್ನೇಹ ಬಾಂಧವ್ಯ ಪರಿಧಿಯೊಳಗಿದ್ದರೆ ಚಂದ. ಚೌಕಟ್ಟನ್ನು ದಾಟಿ, ಬಂಧವನ್ನು ಬಂಧನವಾಗಿಸಬೇಡಿ.

ಸುಮಂಗಲಾ ಸತೀಶ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next