Advertisement
ಇನ್ನೊಂದು ಜೀವಿಯ ಹಸಿವು ಹಾಗೂ ದಾಹ ನೀಗಿಸುವ ಮನಸ್ಸುವುಳ್ಳ ವ್ಯಕ್ತಿಗಳು,ವ್ಯಕ್ತಿತ್ವಗಳು,ಸಂಘ ಸಂಸ್ಥೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಇಲ್ಲೊಬ್ಬರು ಪ್ರಾಣಿ- ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸವನ್ನು ಕಳೆದ 10 ವರ್ಷದಿಂದ ಮಾಡುತ್ತಾ ಬರುತ್ತಿದ್ದಾರೆ ಅವರೇ ಆಂಧ್ರದ ಕಡಪದ ನಿವಾಸಿ ಶೇಕ್ ಬಾಷಾ ಮೊಹಿಯುದ್ದೀನ್.
Related Articles
Advertisement
ಮೊಹಿಯುದ್ದೀನ್ ಗೆ ಈ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರತಿವಾರ ಪ್ರಾಣಿಗಳ ಜತೆ ಒಡನಾಟ ಹೆಚ್ಚುತ್ತದೆ. ರಸ್ತೆ ಬದಿ ಬಿಡಾಡಿ ಹಸುಗಳಿಗೆ ಹುಲ್ಲು, ಹಣ್ಣನ್ನು ನೀಡಲು ಶುರು ಮಾಡುತ್ತಾರೆ. ಪ್ರಾಣಿ – ಪಕ್ಷಿಗಳಿಗಾಗಿ ಭಾನುವಾರದ ದಿನ ಮುಂಜಾನೆ ಬೇಗ ಎದ್ದು ಮಾರುಕಟ್ಟೆಗೆ ಹೋಗಿ ತರಕಾರಿ, ಹಣ್ಣು ಹಂಪಲನ್ನು ತಂದು ಭಕರಪೇಟೆ, ಸಿದ್ದವತಂ, ಅಟ್ಲೂರ್, ರಾಪುರು, ರಾಮಪುರಂ, ಗ್ವಾವಾಲಾ ಚೆರುವು ಘಾಟ್ ನ ಅರಣ್ಯ ಪ್ರದೇಶಕ್ಕೆ ಹೋಗಿ ಅವುಗಳನ್ನು ತನ್ನ ಪ್ರೀತಿಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಾರೆ.
ಹಸುಗಳು, ಕೋತಿಗಳು, ಜಿಂಕೆ, ಅಳಿಲುಗಳು, ನಾಯಿಗಳು, ಬೆಕ್ಕುಗಳು, ಪಾರಿವಾಳಗಳು, ಗಿಳಿಗಳು, ಕಾಗೆಗಳು, ಗುಬ್ಬಚ್ಚಿಗಳಿಗೆ ಮೊಹಿಯುದ್ದೀನ್ ಅವರು ಸ್ನೇಹಿತ. ಪ್ರತಿ ಸಂಡೇಯೂ ಅವರ ಭೇಟಿಗೆ ಪ್ರಾಣಿ-ಪಕ್ಷಿಗಳು ಕಾಯುತ್ತಾ ಇರುತ್ತವೆ.
ಜಿಮ್ ಸೆಂಟರ್ ನ್ನು ನಿಭಾಯಿಸಿಕೊಂಡಿರುವ ಮೊಹಿಯುದ್ದೀನ್ ಅವರಿಗೆ ಕುಟುಂಬದ ಸಹಕಾರ ಈ ಕೆಲಸಕ್ಕಿದೆಯಂತೆ. ಲಾಕ್ ಡೌನ್ ಹಾಗೂ ಕೋವಿಡ್ ಸಂದರ್ಭದಲ್ಲಿಯೂ, ಚಳಿ,ಮಳೆ ಎನ್ನದೇ ಇದುವರೆಗೂ, ಕಳೆದ 10 ವರ್ಷಗಳಿಂದ ಮೊಹಿಯುದ್ದೀನ್ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಲು ಮರೆತಿಲ್ಲ. ಪೊಲೀಸರು ಕೂಡ ಇವರ ಸೇವೆಗೆ ಕೈಜೋಡಿಸಿ ಲಾಕ್ ಡೌನ್ ಸಮಯದಲ್ಲಿ ಸಹಕರಿಸಿದ್ದಾರೆ.
-ಸುಹಾನ್ ಶೇಕ್