Advertisement
ಚೀಫ್ ಆಪರೇಟಿಂಗ್ ಆಫೀಸರ್ (ಸಿಓಓ) ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಪರಿಹಾರ ಏರಿಕೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿರುವುದನ್ನು ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.
Related Articles
Advertisement
“ಪ್ರವೀಣ್ ಬಗ್ಗೆ ನನಗೆ ತುಂಬಾ ಒಲುಮೆ ಇದೆ. ಆತನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ಇನ್‌ಫೋಸಿಸ್‌ನಲ್ಲಿ ನಾನಿರುವಷ್ಟು ಕಾಲವೂ ಆತನನ್ನು ಬೆಳೆಸಿದ್ದೆ. ಆದರೆ ಅನಂತರ ಆತನನ್ನು ಬದಿಗೆ ಒತ್ತಲಾಯಿತು. 2013ರಲ್ಲಿ ನಾನು ಇನ್‌ಫೋಸಿಸ್ ಗೆ ಮರಳಿದಾಗ ಆತ ಕಂಪೆನಿಯ ಕಾರ್ಯಕಾರಿ ಮಂಡಳಿಯಲ್ಲಿಯೂ ಇರಲಿಲ್ಲ. ಬಳಿಕ ಆತನನ್ನು ಮಂಡಳಿಗೆ ಸೇರಿಸಿಕೊಳ್ಳಲಾಯಿತು; ವಿಶಾಲ್ ಸಿಕ್ಕಾ ಅವರನ್ನು ಕಂಪೆನಿಯ ಸಿಇಓ ಹುದ್ದೆಗೆ ನೇಮಕ ಮಾಡಿಕೊಂಡಾಗ ಪ್ರವೀಣ್ ಅವರನ್ನು ಸಿಓಓ ಹುದ್ದೆಗೆ ಏರಿಸಲಾಯಿತು. ಹಾಗಿರುವಾಗ ಆತನಿಗೆ ಈಗ ಶೇ.60-70ರಷ್ಟು ಪರಿಹಾರ ಏರಿಸಿರುವ ಬಗೆಗಿನ ನನ್ನ ಆಕ್ಷೇಪಕ್ಕೂ ವೈಯಕ್ತಿಕವಾಗಿ ಪ್ರವೀಣ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಮೂರ್ತಿ ಹೇಳಿದ್ದಾರೆ.