Advertisement
ಈ ಭತ್ತೆ ಹಂಚಿಕೆ ಎಲ್ಲ ರಾಜ್ಯ ಪಾಲರಿಗೆ ಸಮಾನವಾಗಿಲ್ಲ ಎಂಬುದು ಗಮನಾರ್ಹ. ಈ ಬಗ್ಗೆ ಇಲಾಖೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಅತಿ ಹೆಚ್ಚು ಭತ್ತೆ ಸಿಕ್ಕಿರುವುದು ಪಶ್ಚಿಮ ಬಂಗಾಲ ರಾಜ್ಯ ಪಾಲರಿಗೆ. ಅವರಿಗೆ ಪ್ರವಾಸ, ಆತಿಥ್ಯ, ಮನೋರಂಜನೆಗಾಗಿ ವಾರ್ಷಿಕ 1.80 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ಪಶ್ಚಿಮ ಬಂಗಾಲದ ರಾಜ್ಯಪಾಲರಿಗೆ 2 ರಾಜ ಭವನ ಇರುವುದರಿಂದ (ಕೋಲ್ಕತಾ, ಡಾರ್ಜಿ ಲಿಂಗ್ ), ಈ ಎರಡರ ಪೀಠೊಪಕರಣಗಳ ಆಧುನೀಕರಣಕ್ಕಾಗಿ 80 ಲಕ್ಷ ರೂ, ಈ ರಾಜ ಭವನಗಳ ನಿರ್ವಹಣೆಗೆ 72 ಲಕ್ಷ ರೂ. ನಿಗದಿಗೊಳಿಸಲಾಗಿದೆ. ಹೀಗೆ, ಒಂದಕ್ಕಿಂತ ಹೆಚ್ಚು ರಾಜಭವನಗಳಿರುವ ರಾಜ್ಯಪಾಲರಿಗೆ ದೊಡ್ಡ ಮೊತ್ತದ ಭತ್ತೆ ಸಿಗಲಿದೆ. ಆಯಾ ರಾಜ್ಯಪಾಲರ ವೇತನ, ಭತ್ತೆಗಳನ್ನು ಸಂಬಂಧ ಪಟ್ಟ ರಾಜ್ಯ ಸರಕಾರಗಳೇ ಭರಿಸಲಿವೆ.
ಪರಿಷ್ಕೃತ ಭತ್ತೆಯ ಪ್ರಕಾರ, ಕರ್ನಾಟಕದ ರಾಜ್ಯ ಪಾಲರು ಪ್ರವಾಸ, ಆತಿಥ್ಯ ಹಾಗೂ ಮನೋರಂಜನೆ ಭತ್ತೆ ರೂಪವಾಗಿ ವಾರ್ಷಿಕ 1.05 ಕೋಟಿ ರೂ. ಪಡೆಯಲಿದ್ದಾರೆ. ಬೆಂಗಳೂರಿನಲ್ಲಿರುವ ರಾಜ್ಯ ಪಾಲರ ಅಧಿಕೃತ ನಿವಾಸವಾದ “ರಾಜಭವನ’ದ ಪೀಠೊಪಕರಣಗಳಿಗಾಗಿ ವಾರ್ಷಿಕ 6.5 ಲಕ್ಷ . ಹಾಗೂ ನಿರ್ವಹಣೆಗಾಗಿ 38.2 ಲಕ್ಷ ರೂ. ಸಿಗಲಿದೆ.