Advertisement

ಪದೇ ಪದೇ ಸರಣಿ ಅಪಘಾತ: ಸುಗಮ ಸಂಚಾರಕ್ಕೆ ಸಂಕಷ್ಟ

10:07 AM May 12, 2022 | Team Udayavani |

ಮೂಲ್ಕಿ: ಇಲ್ಲಿನ ಮೂಲ್ಕಿಯ ಚಿತ್ರಾಪು ಕಡೆಯಿಂದ ಬಂದು ಕಾರ್ನಾಡು ಕಡೆಗೆ ತೆರಳುವ ಬೈಪಾಸ್‌ ರಸ್ತೆ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪರ್ಕಿಸುವಲ್ಲಿ ಪದೇ ಪದೇ ಸರಣಿ ಅಪಘಾತಗಳು ಸಂಭ ವಿಸುತ್ತಿದ್ದು, ಸಂಬಂಧಪಟ್ಟವರು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಜರಗಿಸಬೇಕಿದೆ.

Advertisement

ಇಲ್ಲಿಯ ಚಿತ್ರಾಪು ರಸ್ತೆಯಿಂದ ಬರುವ ವಾಹನಗಳು ಕಾರ್ನಾಡಿನ ಕಡೆಗೆ ಸಂಚರಿಸಬೇಕಾದರೆ ರಾಷ್ಟ್ರೀಯ ಹೆದ್ದಾರಿ 66ರನ್ನು ಅಡ್ಡದಾಟಿ ತೆರಳಬೇಕಿದೆ. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಚಿತ್ರಾ ಪು ಮತ್ತು ಕಾರ್ನಾಡಿನ ಕಡೆಗೆ ತೆರಳುವ ವಾಹನಗಳ ಮಧ್ಯೆ ಅಪಘಾತ ಸಂಭವಿಸು ತ್ತಿರುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಲ್ಲಿ 15ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಇಲ್ಲಿ ಹಿಂದೆ ಹೆದ್ದಾರಿಗೆ ಬ್ಯಾರಿಕೇಡರ್‌ಗಳನ್ನು ಅಳವಡಿಸಲಾಗುತ್ತಿತ್ತು. ಈಗ ಅದನ್ನು ಕಾರಣಾಂತರಗಳಿಂದ ತೆಗೆಯಲಾಗಿದೆ. ಇಲ್ಲಿಯ ಸಮಸ್ಯೆ ಬಗ್ಗೆ ಮೂಲ್ಕಿ ನಗರ ಪಂ. ಹಾಗೂ ಸರಕಾರದ ಚುನಾಯಿತ ಪ್ರತಿ ನಿಧಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರಗಿಸಬೇಕೀದೆ. ಈ ಪ್ರದೇಶದ ವಾಹನ ಸಂಚಾರ ನಿಯಮದಲ್ಲಿ ಕೆಲವೊಂದು ಬದಲಾವಣೆ ಅಗತ್ಯವಾಗಿದ್ದು, ಈ ಬಗ್ಗೆ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಹಾಗೂ ಸಾರ್ವಜನಿಕರು ಸಭೆ ನಡೆಸುವ ಮೂಲಕ ಚರ್ಚಿಸಿ ಅಗತ್ಯ ವ್ಯಸ್ಥೆಯ ಬಗ್ಗೆ ಚಿಂತಸಬೇಕಿದೆ.

ಇಲಾಖೆಗೆ ಪತ್ರ ಬರೆಯಲಾಗಿದೆ

ಇಲ್ಲಿಯ ಸಮಸ್ಯೆಗಳು ಮುಖ್ಯವಾಗಿ ಹೆದ್ದಾರಿಯ ಇಲಾಖೆಗೆ ಸಂಬಂಧಿಸಿದ್ದು, ಜತೆಗೆ ಪೊಲೀಸ್‌ ಇಲಾಖೆ ಕೂಡ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುವಂತೆ ನ. ಪಂ.ಸಾಮಾನ್ಯ ಸಭೆಗಳಲ್ಲಿ ಚರ್ಚಿಸಲಾಗಿತ್ತು. ಈ ವಿಷಯವಾಗಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಅಪಘಾತದಿಂದ ಜೀವ ಹಾನಿ ಆದಾಗೆಲ್ಲ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗುತ್ತಿದೆ. ಇಲ್ಲಿಯ ಜಂಕ್ಷನ್‌ ಅತ್ಯಂತ ಆತಂಕಕಾರಿ ಸ್ಥಿತಿಯಲ್ಲಿದೆ. ಮತ್ತೆ ಸಂಬಂಧಿಸಿದ ಇಲಾಖೆಗೆ ಸಮಸ್ಯೆಯ ಬಗ್ಗೆ ತಿಳಿಸಲಾಗುವುದು. – ಪಿ. ಚಂದ್ರಾ ಪೂಜಾರಿ, ಮುಖ್ಯಾಧಿಕಾರಿ, .ಪಂ.ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next