Advertisement

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

10:18 PM Oct 06, 2022 | Team Udayavani |

ಸ್ಟಾಕ್‌ಹೋಮ್‌: ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ ಅವರು ಸಾಹಿತ್ಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

82 ವರ್ಷದ ಆ್ಯನಿ ಎರ್ನಾಕ್ಸ್‌ 20 ಪುಸ್ತಕಗಳನ್ನು ಬರೆದಿದ್ದಾರೆ. ಇವರು 2014ರ ನಂತರ ಸಾಹಿತ್ಯದಲ್ಲಿ ನೊಬೆಲ್‌ ಪಡೆದ ಮೊದಲ ಫ್ರೆಂಚ್‌ ಲೇಖಕರಾಗಿದ್ದಾರೆ. ಎರ್ನಾಕ್ಸ್‌ ಆತ್ಮಚರಿತ್ರೆ ಬರೆಯುವುದರಲ್ಲಿ ಸಿದ್ಧಹಸ್ತರು.ಎರ್ನಾಕ್ಸ್‌ ಅವರ ಪುಸ್ತಕಗಳಲ್ಲಿ ಹೆಚ್ಚಿನವು ತುಂಬಾ ಚಿಕ್ಕದಾಗಿದೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳು ಮತ್ತು ಸುತ್ತಲಿರುವವರ ಜೀವನ ಆಧರಿಸಿ ಸಾಹಿತ್ಯವನ್ನು ರಚಿಸಿದ್ದಾರೆ. ಅಲ್ಲದೆ, ಲೈಂಗಿಕ ಸಂಗತಿಗಳು, ಗರ್ಭಪಾತ, ಅನಾರೋಗ್ಯ ಮತ್ತು ತಮ್ಮ ಪೋಷಕರ ಸಾವಿನ ಕುರಿತ ಚಿತ್ರಣವನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಸ್ಟಿಡೀಶ್‌ ಅಕಾಡೆಮಿ ತಿಳಿಸಿದೆ.

ಇದುವರೆಗೆ 119 ಮಂದಿಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಸಂದಾಯವಾಗಿದೆ. ಈ ಪೈಕಿ ಆ್ಯನಿ ಎರ್ನಾಕ್ಸ್‌ ಈ ಉನ್ನತ ಪ್ರಶಸ್ತಿಗೆ ಭಾಜನರಾಗುತ್ತಿರುವ 17ನೇ ಮಹಿಳೆಯಾಗಿದ್ದಾರೆ. ಬಹುನಿರೀಕ್ಷಿತ ನೊಬೆಲ್‌ ಶಾಂತಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next