Advertisement

ಫ್ರಾನ್ಸ್‌ : ಸುರಕ್ಷಿತ ಯೋಜನೆಗೆ ಪ್ರಾಶಸ್ತ್ಯ

04:01 PM Apr 29, 2020 | sudhir |

ಫ್ರಾನ್ಸ್‌ : ಫ್ರಾನ್ಸ್‌ ದೇಶವೂ ಲಾಕ್‌ಡೌನ್‌ ಅನಂತರದ ಯೋಜನೆಗಳನ್ನು ರೂಪಿಸತೊಡಗಿದೆ. ಈ ಸಂಬಂಧ ಸಂಸತ್ತಿಗೆ ಹೇಳಿಕೆ ನೀಡಿರುವ ಪ್ರಧಾನಿ ಎಡೋರ್ಡ್‌ ಫಿಲಿಪ್ಪಿ, ಶಾಲೆಗಳು, ರೆಸ್ಟೋರೆಂಟ್‌ಗಳು, ಎಲ್ಲ ಬಗೆಯ ವ್ಯವಹಾರಗಳು, ಗ್ರಂಥಾಲಯಗಳು, ಕಡಲ ತೀರಗಳು-ಎಲ್ಲವನ್ನೂ ಮುಚ್ಚುವ ಸ್ಥಿತಿ ಯುದ್ಧದ ಸಂದರ್ಭದಲ್ಲು ಬಂದಿರಲಿಲ್ಲ. ಈ ಹಿಂದೆ ಸಾಂಕ್ರಾಮಿಕ ರೋಗಗಳು ಬಾಧಿಸಿದಾಗಲೂ ಇಂಥ ಸ್ಥಿತಿ ಒದಗಿರಲಿಲ್ಲ. ಆದ ಕಾರಣ ಇದೊಂದು ವಿಚಿತ್ರ ಸ್ಥಿತಿ ಎಂದು ಹೇಳಿದ್ದಾರೆ.

Advertisement

ವೈರಸ್‌ ಎದುರು ಸೆಣಸಲು ಲಾಕ್‌ಡೌನ್‌ ಒಂದು ಅತ್ಯಂತ ಪರಿಣಾಮಕಾರಿ ತಂತ್ರವೆನ್ನುವುದು ನಿಜ. ಆದರೆ ದೇಶ ಇನ್ನಷ್ಟು ದಿನ ಇದೇ ಸ್ಥಿತಿಯಲ್ಲಿ ಮುಂದುವರಿಯಲಾಗದು ಎಂದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಸಿಗುವುದು ಕಷ್ಟ. ಹಾಗಾಗಿ ವೈರಸ್‌ನೊಂದಿಗೆ ಬದುಕುವುದನ್ನು ಕಲಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದ ಹೊರ ಬರಲು ಅತ್ಯಂತ ಸುರಕ್ಷಿತ ಯೋಜನೆಯನ್ನು ರೂಪಿಸಲಾಗುತ್ತಿದೆ. ಜನರ ಆರೋಗ್ಯವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ದೇಶದ ಆರ್ಥಿಕ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡೇ ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next