Advertisement

ಕೋವಿಡ್‌-19 ವಿರುದ್ಧ ಹೋರಾಟಕ್ಕೆ ತಂತ್ರಜ್ಞಾನದ ಬಲ

06:25 PM Jun 02, 2020 | Sriram |

ಕೋವಿಡ್‌-19ದೊಂದಿಗೆ ಬದುಕುವುದನ್ನು ಕಲಿತ ನಮಗೆ ಎಲ್ಲ ನಡೆಗಳಲ್ಲಿ ನಾವು ಮುಂಜಾಗ್ರತೆ ವಹಿಸಲು ಮುಂದಾಗಿದ್ದೇವೆ. ಮುಖಕ್ಕೆ ಮಾಸ್ಕ್ ಇಲ್ಲದೇ ಹೊರಗಡೆ ಬರುವುದಿಲ್ಲ, ಸ್ಯಾನಿಟೈಸರ್‌ ಹಚ್ಚದೇ ಏನೂ ಸ್ಪರ್ಶಿಸುವುದಿಲ್ಲ, ಎಲ್ಲಿಯೂ ಗುಂಪುಗೂಡುವುದಿಲ್ಲ. ಆತ್ಮೀಯರನ್ನು ದೂರದಿಂದಲೇ ಮಾತನಾಡಿಸಿ, ಕುಶಲ ಕ್ಷೇಮ ವಿಚಾರಿಸುತ್ತೇವೆ. ಇದು ಸದ್ಯದ ಬದುಕಿನ ಭಾಗವಾಗಿದೆ.

Advertisement

ಕೋವಿಡ್‌-19 ದಿನಗಳ ಮುಂಜಾಗ್ರತೆ ಮತ್ತು ಆರೋಗ್ಯ ದೃಷ್ಟಿಯಿಂದ ಹಲವಾರು ಉತ್ಪನ್ನಗಳು ಪರಿಚಯವಾದವು. ಇದು ಕೋವಿಡ್‌-19 ವಿರುದ್ಧ ಒಂದು ಹೊಸ ಮಾರುಕಟ್ಟೆ ಆರಂಭಕ್ಕೆ ಕಾರಣವಾಯಿತು. ಇದರಲ್ಲಿ ಕರ್ನಾಟಕದ ಓರ್ವ ಸ್ಟಾರ್ಟಾಪ್‌ ಉದ್ಯಮಿ ಆರಂಭಿಸಿದ ಗೂಡುಒಲೆಯೊಂದು ಈಗ ಜಗತ್‌ಪ್ರಸಿದ್ಧವಾಗಿದೆ. ಅಲ್ಲದೇ ಕೊರೊನಾ ವಿರುದ್ಧ ಹೋರಾಟಕ್ಕೆ ಇದು ಯಂತ್ರ ಪ್ರೇರಿತ ಕೋವಿಡ್‌-19 ವಾರಿಯರ್ಸ್‌ ಆಗಿದೇ ಎಂದು ಹೇಳಬಹುದು.

ಯಾವುದು ಅದು?
ಇಂಡಿಯಾದ ನ್ಯಾನೊ ಟೆಕ್ನಾಲಜಿ ಸ್ಟಾರ್ಟಾಪ್‌ ಕಂಪೆನಿಯೊಂದು “ಕೊರೊನಾಒವೆನ್‌’ ಎಂಬ ಗೂಡು ಒಲೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೋವಿಡ್‌-19 ವೈರಸ್‌ನಿಂದ ನಮಗೆ ಹರಡದಂತೆ ಸುಕ್ಷರತೆಯಿಂದಿರಲೂ ಇದು ಸಹಾಯಕ.

ಕರ್ನಾಟಕ ಉದ್ಯಮಿಯ ಅನ್ವೇಷಣೆ
ಕರ್ನಾಟಕದ ಮೂಲದ ಉದ್ಯಮಿಯಾಗಿರುವ ಅಕ್ಷಯ್‌ ಎಂಬುವವರು ಈ ಗೂಡುಒಲೆ ಯಂತ್ರವನ್ನು ಅನ್ವೇಷಿಸಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?
ಅಕ್ಷಯ್‌ ಅವರು ಕೊರೊನಾ ಗೂಡುಒಲೆಯನ್ನು ಅಲ್ಟ್ರಾವೈಲೆಟ್‌ ಜೆರ್ಮಿಸಿಡಲ್‌ ಇರಿಟೇಶನ್‌ (ನೇರಳಾತೀತ ರೋಗಾಣು ವಿಕಿರಣ) ಎಂಬ ತಂತ್ರಜ್ಞಾನವನ್ನು ಬಳಸಿ ಆರಂಭಿಸಿದ್ದಾರೆ. ನಾವು ಹೊರಗಡೆಯ ಅಂಗಡಿ, ಮಾಲ್‌ ಅಥವಾ ಸಂತೆಗಳಿಂದ ತರಕಾರಿ, ಸಾಮಾನುಗಳನ್ನು ತಂದರೆ ಈ ಗೂಡು ಒಲೆಯಲ್ಲಿ 10 ನಿಮಿಷ ಇಟ್ಟರೆ ಸಾಕು,ಆಗ ಅದು ಈ ಯುಜಿಐ ಎಂಬ ತಂತ್ರಜ್ಞಾನವೂ ಕೋವಿಡ್‌-19 ವೈರಸ್‌ ಇದ್ದರೆ ಅದನ್ನು ನಿವಾರಿಸಿ, ಶುದ್ಧೀಕರಿಸುತ್ತದೆ.

Advertisement

ಈ ಗೂಡುಒಲೆಯನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದ್ದು ಸಂಪೂರ್ಣ ಸ್ಯಾನಿಟೈಜಶೇನ್‌ ಕೊಠಡಿಯಾಗಿದೆ. ಇಲ್ಲಿ ಮಲ್ಟಿ ಫೋಕಲ್‌ ಯುವಿ ಸಿ ಎಂಬ ವಿಕಿರಣಗಳು ಯಾವುದೇ ಸೋಂಕುಗಳನ್ನು ನಿವಾರಿಸಿ ಶುದ್ಧೀಕರಿಸುತ್ತದೆ.

ವ್ಯಾಪಕ ಬಳಕೆ!
ಕೋವಿಡ್‌-19 ನಿವಾರಕ ಈ ಗೂಡು ಒಲೆಯೂ ಈಗಾಗಲೇ ದೇಶದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಮನೆ, ಅಂಗಡಿ, ಪೊಲೀಸ್‌ ಸ್ಟೇಶನ್‌, ಅಂಚೆ ಕಚೇರಿ, ಆಸ್ಪತ್ರೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.

ಸಾಗರದಾಚೆಗೂ ಗೂಡುಒಲೆಯು ಯಶಸ್ಸು!
ಅಕ್ಷಯ್‌ ಅವರು ಅನ್ವೇಶಿಸಿರುವ ಕೋವಿಡ್‌-19 ಗೂಡುಒಲೆಯೂ ಇದು ಕೇವಲ ಭಾರತ ಮಾತ್ರವಲ್ಲ ಸಾಗರಾದಾಚೆಗೂ ಕೂಡ ಭರ್ಜರಿಯಾಗಿ ಯಶಸ್ವಿಯಾಗಿದೆ. ಈ ಗೂಡು ಒಲೆಯನ್ನು ಫ್ರಾನ್ಸ್‌ ಪ್ರಧಾನಿ ಇಮ್ಯಾನ್ಯುವೆಲ್‌ ಮ್ಯಾಕ್ರಾನ್‌ ಅವರು ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉತ್ಪನ್ನ ಈಗ ಪ್ರಸಿದ್ಧಿಯಾಗಿದೆ.

-ಶಿವಸ್ಥಾವರ ಮಠ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next