Advertisement

ಫ್ರೆಂಚ್‌ ಓಪನ್‌: ಸಾತ್ವಿಕ್‌-ಚಿರಾಗ್‌ ಪರಾಭವ

10:55 AM Oct 29, 2018 | |

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಬಹುತೇಕ ಅಂತ್ಯವಾಗಿತ್ತು. ಇದೀಗ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌- ಚಿರಾಗ್‌ ಶೆಟ್ಟಿ ಕೂಡ ಸೋಲುವ ಮೂಲಕ ಉಳಿದಿದ್ದ ಕನಸೂ ಭಗ್ನಗೊಂಡಿದೆ.

Advertisement

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌- ಚಿರಾಗ್‌ ಶೆಟ್ಟಿ ಇಂಡೋನೇಶ್ಯದ ಕೆವಿನ್‌ ಸಂಜಯ-ಮಾರ್ಕಸ್‌ ಗಿಡೆಯೊನ್‌ ವಿರುದ್ಧ 12-21, 24-26 ಅಂತರದ ಸೋಲನುಭವಿಸಿದರು. ಮೊದಲ ಗೇಮ್‌ನಲ್ಲಿ ಭಾರತೀಯ ಜೋಡಿ 12-21 ಅಂತರದಿಂದ ಹಿನ್ನಡೆ ಕಂಡಿತ್ತು.

ಆದರೆ 2ನೇ ಗೇಮ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಗೇಮ್‌ ವಶಪಡಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟಿತು.ಇದಕ್ಕೂ ಮೊದಲು ಸಿಂಗಲ್ಸ್‌ ಕ್ವಾ. ಫೈನಲ್‌ನಲ್ಲಿ ಸೈನಾ, ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್‌ ಸೋಲುಂಡು ಕೂಟದಿಂದ ಹೊರಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next