ಪ್ಯಾರಿಸ್: ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ಗೆ 2ನೇ ಜೋಡಿಯೂ ಸಿದ್ಧಗೊಂಡಿದೆ. ಬ್ರಝಿಲ್‌ನ ಹದ್ದಾದ್ ಮಯಾ ಮತ್ತು ಹಾಲಿ ಚಾಂಪಿಯನ್ ಖ್ಯಾತಿಯ ಪೋಲೆಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಪರಸ್ಪರ ಮುಖಾ ಮುಖೀಯಾಗಲಿದ್ದಾರೆ. ಗುರುವಾರದ ಇನ್ನೊಂದು ಸೆಮಿ ಸಮರ ಅರಿನಾ ಸಬಲೆಂಕಾ- ಕ್ಯಾರೋಲಿನಾ ಮುಕೊವಾ ನಡುವೆ ಸಾಗಲಿದೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ದಲ್ಲಿ ಹದ್ದಾದ್ ಮಯ 3-6, 7-6 (7-5), 6-1 ಅಂತರದಿಂದ ಟ್ಯುನೀ ಶಿಯಾದ ಓನ್ಸ್ ಜೆಬ್ಯುರ್ ಆಟವನ್ನು ಮುಗಿಸಿದರು. ಇದರೊಂದಿಗೆ ಬ್ರಝಿಲ್ ಆಟಗಾರ್ತಿಯೊಬ್ಬರು ಮೊದಲ ಸಲ ರೊಲ್ಯಾಂಡ್ ಗ್ಯಾರೋಸ್ ಸೆಮಿಪೈನಲ್ ತಲುಪಿ ದಂತಾಯಿತು. ಹಾಗೆಯೇ 55 ವರ್ಷಗಳ ಬಳಿಕ ಬ್ರಝಿಲ್ ಆಟಗಾರ್ತಿ ಪ್ರಥಮ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್‌ಗೆ ಏರಿದ ನಿದರ್ಶನವೂ ಇದಾ ಗಿದೆ. 1968ರ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಮರಿಯಾ ಬ್ಯುನೊ ಈ ಸಾಧನೆಗೈದಿದ್ದರು.
ಕಳೆದ ವರ್ಷದ ವಿಂಬ ಲ್ಡನ್ ಮತ್ತು ಯುಎಸ್ ಓಪನ್ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆಗಿದ್ದ ಓನ್ಸ್ ಜೆಬ್ಯುರ್, ಎಪ್ರಿಲ್‌ನಲ್ಲಿ ನಡೆದ ಸ್ಟಟ್‌ಗಾರ್ಟ್ ಟೂರ್ನಿಯಲ್ಲಿ ಹದ್ದಾದ್ ಮಯಾ ಅವರನ್ನು ಮಣಿಸಿದ್ದರು. ಪ್ಯಾರಿಸ್‌ನಲ್ಲೂ ನೆಚ್ಚಿನ ಆಟಗಾರ್ತಿಯಾಗಿದ್ದರು. ಮೊದಲ ಸೆಟ್ ಸುಲಭದಲ್ಲಿ ವಶ ಪಡಿಸಿಕೊಂಡರು. ದ್ವಿತೀಯ ಸೆಟ್ ಇನ್ನೇನು ತನ್ನ ಕೈವಶವಾಯಿತು ಎನ್ನುವಾಗಲೇ ಹದ್ದಾದ್ ಮಯಾಗೆ ಅದೃಷ್ಟ ಖುಲಾಯಿಸಿತು. ಇದನ್ನು ಟೈ-ಬ್ರೇಕರ್‌ನಲ್ಲಿ ವಶಪಡಿಸಿ ಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಪ್ರತಿರೋಧ ಒಡ್ಡಲು ಜೆಬ್ಯುರ್‌ಗೆ ಸಾಧ್ಯವಾಗಲೇ ಇಲ್ಲ.
2022ರ ಫೈನಲ್ ಮ್ಯಾಚ್!
ಇಗಾ ಸ್ವಿಯಾಟೆಕ್ ಮತ್ತು ಅಮೆ ರಿಕದ ಕೊಕೊ ಗಾಫ್ ನಡುವಿನ ದ್ವಿತೀಯ ಕ್ವಾರ್ಟರ್ ಫೈನಲ್ ಕಳೆದ ವರ್ಷದ ಫೈನಲ್ ಪಂದ್ಯದ ಪುನರಾವರ್ತನೆ ಆಗಿತ್ತು. ಎರಡರಲ್ಲೂ ಸ್ವಿಯಾಟೆಕ್ ಅವರೇ ಗೆದ್ದು ಬಂದರು. ಸೇಡು ತೀರಿಸಿ ಮುನ್ನಡೆಯುವ ಯೋಜನೆಯಲ್ಲಿದ್ದ ಗಾಫ್ ಅವರ ಗ್ರಾಫ್ ಮತ್ತೆ ಕೆಳಗಿಳಿಯಿತು. ಸ್ವಿಯಾಟೆಕ್ 6-4, 6-2 ಅಂತರದ ಸುಲಭ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಗಾಫ್ ವಿರುದ್ಧ ಆಡಿದ ಏಳೂ ಪಂದ್ಯಗಳಲ್ಲಿ ಸ್ವಿಯಾಟೆಕ್ ಜಯ ಸಾಧಿಸಿದಂತಾಯಿತು. ಈ 7 ಪಂದ್ಯಗಳಲ್ಲಿ ಗಾಫ್ಗೆ ಒಂದೂ ಸೆಟ್ ಗೆಲ್ಲಲಾಗಲಿಲ್ಲ ಎಂಬುದನ್ನೂ ಇಲ್ಲಿ ಉಲ್ಲೇಖೀಸಬೇಕಾಗುತ್ತದೆ.
Related Articles
“ಸ್ಟೆಪ್ ಬೈ ಸ್ಟೆಪ್, ಎನದರ್ ಸೆಮಿ ಫೈನಲ್, ಥ್ಯಾಂಕ್ಯೂ ಪ್ಯಾರಿಸ್” ಎಂದು ಸ್ವಿಯಾಟೆಕ್ ಪೋಸ್ಟ್ ಮಾಡಿದ್ದಾರೆ.