Advertisement

“ಫ್ರೆಂಚ್‌ ಓಪನ್‌ ಈ ವರ್ಷ ನಡೆಯಲಿದೆ’

01:59 AM Jun 04, 2020 | Sriram |

ಪ್ಯಾರಿಸ್‌: ಕೋವಿಡ್‌-19 ಕಾರಣದಿಂದ ಮುಂದೂಡಲ್ಪಟ್ಟ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಈ ವರ್ಷ ನಡೆಯುತ್ತದೆ ಎಂಬ ಖಾತ್ರಿಯೊಂದು ಲಭಿಸಿದೆ. ಫ್ರೆಂಚ್‌ ಓಪನ್‌ ಟೆನಿಸ್‌ ಫೆಡರೇಶನ್‌ ಅಧ್ಯಕ್ಷ ಬರ್ನಾರ್ಡ್‌ ಗಿಡಿಸೆಲ್ಲಿ ಇಂಥದೊಂದು ಭರವಸೆ ನೀಡಿದ್ದಾರೆ.

Advertisement

ಆವೆ ಅಂಗಳದಲ್ಲಿ ಸಾಗುವ ವರ್ಷದ ಈ ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಮೇ 24ರಿಂದ ಜೂ. 7ರ ತನಕ ನಡೆಯಬೇಕಿತ್ತು. ಆದರೀಗ ಸೆ. 20ರ ತನಕ ಮುಂದೂಡಲ್ಪಟ್ಟಿದೆ.

“ಫ್ರೆಂಚ್‌ ಓಪನ್‌ ರದ್ದಾಗುವುದಿಲ್ಲ, ಈ ವರ್ಷ ನಡೆಯುತ್ತದೆ ಎಂಬುದಾಗಿ ನಾನು ಟೆನಿಸಿಗ ಗೇಲ್‌ ಮಾನ್‌ಫಿಲ್ಸ್‌ಗೆ ಖಾತ್ರಿಪಡಿಸಿದ್ದೇನೆ’ ಎಂದು ಕಾರ್ಯಕ್ರಮವೊಂದರಲ್ಲಿ ಗಿಡಿಸೆಲ್ಲಿ ಹೇಳಿದ್ದಾರೆ. “ಈ ಪಂದ್ಯಾವಳಿಯನ್ನು ಗರಿಷ್ಠ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸುವುದು ನಮ್ಮ ಯೋಜನೆ. ಆದರೆ ಈ ಸಂದರ್ಭದಲ್ಲಿ ಸರಕಾರ ಹಾಗೂ ಆರೋಗ್ಯ ವಿಭಾಗದ ಸುರಕ್ಷಾ ವಿಧಾನವನ್ನು ಪಾಲಿಸಬೇಕಾಗುತ್ತದೆ’ ಎಂದು ಗಿಡಿಸೆಲ್ಲಿ ಹೇಳಿದರು. ಕೋವಿಡ್‌-19 ಹಾವಳಿಯಿಂದ ಸದ್ಯ ರದ್ದುಗೊಂಡ ಏಕೈಕ ಗ್ರ್ಯಾನ್‌ಸ್ಲಾಮ್‌ ಕೂಟವೆಂದರೆ ವಿಂಬಲ್ಡನ್‌.

Advertisement

Udayavani is now on Telegram. Click here to join our channel and stay updated with the latest news.

Next