Advertisement

ಫ್ರೆಂಚ್ ಓಪನ್‌ ಟೆನಿಸ್‌ : ಸೆರೆನಾಗೆ ಆಘಾತಕಾರಿ ಸೋಲು

12:47 PM Jun 04, 2019 | sudhir |

ಪ್ಯಾರಿಸ್‌: ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದ ಸೆರೆನಾ ವಿಲಿಯಮ್ಸ್‌ ಫ್ರೆಂಚ್ ಓಪನ್‌ ಕೂಟದಲ್ಲಿ ಆಘಾತಕಾರಿ ಸೋಲುಂಡು ನಿರ್ಗಮಿಸಿದ್ದಾರೆ. 3ನೇ ಸುತ್ತಿನ ಮುಖಾಮುಖೀಯಲ್ಲಿ ಅಮೆರಿಕದವರೇ ಆದ ಸೋಫಿಯಾ ಕೆನಿನ್‌ 6-2, 7-5ರಿಂದ ಸೆರೆನಾಗೆ ಸೋಲುಣಿಸಿದರು.

Advertisement

ಫೆಡರರ್‌ ಕ್ವಾ.ಫೈನಲ್ಗೆ

ರೋಜರ್‌ ಫೆಡರರ್‌ 12ನೇ ಸಲ ಫ್ರೆಂಚ್ ಓಪನ್‌ ಕ್ವಾರ್ಟರ್‌ ಫೈನಲ್ ತಲುಪಿದ್ದಾರೆ. ಅವರು ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್‌ ವಿರುದ್ಧ 6-2, 6-3, 6-3 ಅಂತರದ ಜಯ ಸಾಧಿಸಿದರು.

ರೋಹನ್‌ ಬೋಪಣ್ಣ ಔಟ್

ಪುರುಷರ ಡಬಲ್ಸ್ನಲ್ಲಿ ರೋಹನ್‌ ಬೋಪಣ್ಣ-ಮಾರಿಯಸ್‌ ಕಾಪಿಲ್ ಜೋಡಿ 3ನೇ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದೆ. ಸರ್ಬಿಯಾದ ದುಸನ್‌ ಲಾಜೋವಿಕ್‌-ಜಾನ್ಕೊ ತಿಪ್ಸರೆವಿಕ್‌ 6-1, 5-7, 6-7 (8-10) ಅಂತರದಿಂದ ಈ ಪಂದ್ಯ ಗೆದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next