Advertisement

ಇಂದಿನಿಂದ ಫ್ರೆಂಚ್‌ ಓಪನ್‌: ಇತಿಹಾಸದತ್ತ ಜೊಕೋ

09:43 AM May 26, 2019 | keerthan |

ಪ್ಯಾರಿಸ್‌: ಆವೆಯಂಗಳದ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್‌ ಕೂಟವಾದ ಫ್ರೆಂಚ್‌ ಓಪನ್‌ ರವಿವಾರದಿಂದ ಮೊದಲ್ಗೊಳ್ಳಲಿದೆ. ಲಂಡನ್‌ನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಕ್ಷಣಗಣನೆಯಾದರೆ, ಪಕ್ಕದ ಪ್ಯಾರಿಸ್‌ನಲ್ಲಿ ರ್ಯಾಕೆಟ್‌ ಸಮರ!

Advertisement

ಜೊಕೋಗೆ ಮಹತ್ವದ ಕೂಟ
ಇದು ವಿಶ್ವದ ಖ್ಯಾತ ಟೆನಿಸಿಗ ನೊವಾಕ್‌ ಜೊಕೋವಿಕ್‌ ಪಾಲಿಗೆ ಅತ್ಯಂತ ಮಹತ್ವದ ಕೂಟವಾಗಲಿದೆ. ಅವರೀಗ ಸತತ 2ನೇ ಸಲ ನಾಲ್ಕೂ ಗ್ರ್ಯಾನ್‌ಸ್ಲಾಮ್‌ ಗೆಲ್ಲುವ ಹಾದಿಯಲ್ಲಿದ್ದಾರೆ. ಈ ಸಲದ ಫ್ರೆಂಚ್‌ ಓಪನ್‌ ಗೆದ್ದರೆ ಈ ಸಾಧನೆಗೈದ ವಿಶ್ವದ ಕೇವಲ ದ್ವಿತೀಯ ಟೆನಿಸಿಗನಾಗಲಿದ್ದಾರೆ.

ನೊವಾಕ್‌ ಜೊಕೋವಿಕ್‌ ಮೊದಲ ಸಲ 2016ರಲ್ಲಿ ಈ ಸಾಧನೆಗೈದಿದ್ದರು. ಅಂದು ಫ್ರೆಂಚ್‌ ಓಪನ್‌ ಗೆಲ್ಲುವ ಮೂಲಕ “ಜೊಕೋ ಸ್ಲಾéಮ್‌’ನ ಮೊದಲ ಆವೃತ್ತ ಪೂರೈಸಿದ್ದರು. ಈಗ 2018ರಲ್ಲಿ ವಿಂಬಲ್ಡನ್‌, ಯುಎಸ್‌ ಓಪನ್‌ ಜತೆಗೆ ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟ್ರೋಫಿಗಳ ಮೇಲೂ ಜೊಕೋ ಹಕ್ಕು ಚಲಾಯಿಸಿದ್ದಾರೆ. ಇದಕ್ಕೂ ಮುನ್ನ ರಾಡ್‌ ಲ್ಯಾವರ್‌ (1962 ಮತ್ತು 1969) ಈ ಸಾಧನೆ ಮಾಡಿದ್ದರು.

ನಡಾಲ್‌ ಸವಾಲು
ಜೊಕೋವಿಕ್‌ ಅವರ ಫ್ರೆಂಚ್‌ ಗೆಲುವಿಗೆ ರಫೆಲ್‌ ನಡಾಲ್‌ ಮತ್ತು ರೋಜರ್‌ ಫೆಡರರ್‌ ದೊಡ್ಡ ತಡೆಯಾಗಿ ನಿಂತಿದ್ದಾರೆ. ಬುಧವಾರವಷ್ಟೇ 32ರ ಹರೆಯಕ್ಕೆ ಕಾಲಿಟ್ಟ ಜೊಕೋವಿಕ್‌, ಕಳೆದ ಇಟಾಲಿಯನ್‌ ಓಪನ್‌ ಫೈನಲ್‌ನಲ್ಲಿ ನಡಾಲ್‌ಗೆ ಸೋತಿದ್ದರು. ಹೇಳಿ ಕೇಳಿ ನಡಾಲ್‌ “ಕ್ಲೇ ಕೋರ್ಟ್‌ ಕಿಂಗ್‌’. ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಅವರ ಸಾಧನೆ ಅಮೋಘ ಮಟ್ಟದಲ್ಲಿದೆ. ಜೊಕೋವಿಕ್‌ಗೆ ಕಂಟಕವಾಗಿ ಕಾಡುವುದರಲ್ಲಿ ಅನುಮಾನವಿಲ್ಲ.

ಇನ್ನೊಂದೆಡೆ ರೋಜರ್‌ ಫೆಡರರ್‌ 2015ರ ಬಳಿಕ ಮೊದಲ ಸಲ ಇಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಮುಂದಿನ ವಿಂಬಲ್ಡನ್‌ ಕೂಟದತ್ತ ಗಮನ ಹರಿಸುವುದು ಅವರ ಉದ್ದೇಶ.

Advertisement
Advertisement

Udayavani is now on Telegram. Click here to join our channel and stay updated with the latest news.

Next