Advertisement
ಎರಡು ಸೆಟ್‌ಗಳ ಕಠಿನ ಹೋರಾಟದಲ್ಲಿ ಸಕ್ಕಾರಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಕೈಯಲ್ಲಿ 7-6 (7-5), 7-6 (7-4) ಸೆಟ್‌ಗಳಿಂದ ಸೋಲನ್ನು ಕಂಡರು. ಇಲ್ಲಿ ಸತತ ಮೂರನೇ ಬಾರಿ ಮೂರನೇ ಸುತ್ತಿಗೇರಿರುವ ಮುಚೋವಾ ಮುಂದಿನ ಸುತ್ತಿನಲ್ಲಿ ಅಮೆರಿಕದ 27ನೇ ಶ್ರೇಯಾಂಕದ ಅಮಂಡಾ ಅನಿಸಿಮೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.
ಯುಎಸ್ ಚಾಂಪಿಯನ್ ಆಗಿರುವ 19ರ ಹರೆಯದ ರಾಡುಕಾನು ಚೊಚjಲ ಬಾರಿ ಫ್ರೆಂಚ್ ಓಪನ್‌ನಲ್ಲಿ ಆಡು ತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಜೆಕ್‌ನ ಲಿಂಡಾ ನೊಸ್ಕೋವಾ ಅವರನ್ನು ಕೆಡಹಿದ್ದ ಅವರು ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದರು. ಎರಡು ತಾಸುಗಳ ಕಠಿನ ಹೋರಾಟದಲ್ಲಿ ಅವರು ಬೆಲಾರೂಸ್‌ನ ಅಲಿಯಾಕ್ಸಾಂಡ್ರಾ ಸ್ಯಾಸ್ನೊವಿಚ್ ಕೈಯಲ್ಲಿ 6-3, 1-6, 1-6 ಸೆಟ್‌ಗಳಿಂದ ಸೋತರು. ಆಕ್ರಮಣಕಾರಿಯಾಗಿ ಆಡಿದ ಸ್ಯಾಸ್ನೊವಿಚ್ 45 ವಿಜಯಿ ಹೊಡೆತಗಳನ್ನು ಹೊಡೆದಿದ್ದರು. ಅಜರೆಂಕಾ, ಗಾಫ್ ಮುನ್ನಡೆ
15ನೇ ಶ್ರೇಯಾಂಕದ ವಿಕ್ಟೋರಿಯಾ ಅಜರೆಂಕಾ 34ರ ಹೆರೆಯದ ಜರ್ಮನಿಯ ಆಂದ್ರೇಯಾ ಪೆಟ್ಕೊವಿಕ್ ಅವರನ್ನು 6-1, 7-6 (7-3) ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಹದಿಹರೆಯದ ಕೊಕೊ ಗಾಫ್ ಬೆಲ್ಜಿಯಂನ ಅಲಿಸನ್ ವಾನ್ ಯುತ್ವಾಂಕ್ ಅವರನ್ನು ಸೋಲಿಸಿ ಮೂರನೇ ಸುತ್ತು ತಲುಪಿದ್ದಾರೆ.
Related Articles
Advertisement
ರಾಮ್‌ಕುಮಾರ್‌ಗೆ ಮೊದಲ ಗೆಲುವುಪ್ಯಾರಿಸ್: ಭಾರತದ ಟೆನಿಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅವರು ಗ್ರ್ಯಾನ್ ಸ್ಲಾಮ್ ಕೂಟದ ಮುಖ್ಯ ಡ್ರಾದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಖುಷಿಯನ್ನು ಸಂಭ್ರಮಿಸಿದ್ದಾರೆ. ರಾಮ್‌ಕುಮಾರ್ ಮತ್ತು ಅಮೆರಿಕದ ಜತೆಗಾರ ಹಂಟರ್ ರೀಸ್ ಅವರು ಜರ್ಮನಿಯ ಡೇನಿಯಲ್ ಆಲ್ಟ್ಮೈರ್ ಮತ್ತು ಆಸ್ಕರ್ ಒಟ್ಟೆ ಅವರನ್ನು ಸೋಲಿಸಿ ಫ್ರೆಂಚ್ ಓಪನ್ ಕೂಟದ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ. ಸಿಂಗಲ್ಸ್ ಮುಖ್ಯ ಡ್ರಾಕ್ಕೆ ಪ್ರವೇಶಿಸಲು ಬಹಳಷ್ಟು ಪರಿಶ್ರಮ ಪಟ್ಟಿದ್ದ ರಾಮ್‌ಕುಮಾರ್ ಇದರಲ್ಲಿ ಯಶಸ್ಸು ಪಡೆದಿರಲಿಲ್ಲ. ಇದೀಗ ಡಬಲ್ಸ್‌ನಲ್ಲಿ ರೀಸ್ ಜತೆ ಆಡುತ್ತಿರುವ ಅವರು 7-6 (4), 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ. ತನ್ನ ಜತೆಗಾರ ರೋಹನ್ ಬೋಪಣ್ಣ ಜತೆಗೂಡಿ ಅಡಿಲೇಡ್‌ನಲ್ಲಿ ನಡೆದ ಎಟಿಪಿ ಟೂರ ಪ್ರಶಸ್ತಿ ಜಯಿಸಿದ್ದ ರಾಮ್‌ಕುಮಾರ್ ಡಬಲ್ಸ್‌ನಲ್ಲಿ ತನ್ನ ರ್‍ಯಾಂಕಿಂಗನ್ನು ಉತ್ತಮಪಡಿಸಿಕೊಂಡಿದ್ದರು. 27ರ ಹರೆಯದ ರಾಮ್‌ಕುಮಾರ್ ಇದೀಗ ನೂರರ ಒಳಗಿನ ರ್‍ಯಾಂಕಿಂಗ್ ಹೊಂದಿದ್ದಾರೆ. ರೋಹನ್ ಬೋಪಣ್ಣ ಮತ್ತು ಅವರ ಡಚ್ ಜತೆಗಾರ ಮಿಡ್ಡೆಲ್‌ಕೂಪ್ ಅವರು ಸ್ಥಳೀಯ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಗುಯೆಮಾರ್ಡ್ ವಯೇನ್‌ಬರ್ಗ್ ಮತ್ತುಲುಕಾ ವಾನ್ ಅಸಚೆ ಅವರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.