Advertisement

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು,ಶುಭಾಂಕರ್‌ ಮುನ್ನಡೆ

12:00 AM Oct 23, 2019 | Team Udayavani |

ಪ್ಯಾರಿಸ್‌: ಭರವಸೆಯ ಶಟ್ಲರ್‌ ಪಿ. ವಿ ಸಿಂಧು ಅವರು ಸುಲಭ ಜಯದೊಂದಿಗೆ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಮುನ್ನಡೆದಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಕೆನಡದ ಮಿಚೆಲಿ ಲೀ ಅವರನ್ನು 21-15, 21-13 ಗೇಮ್‌ಗಳಿಂದ ಉರುಳಿಸಿದರು.

Advertisement

ಭಾರತದ ಶುಭಾಂಕರ್‌ ದೇ ಕೂಡ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ಅವರನ್ನು ಮೂರು ಸೆಟ್‌ಗಳ ಮ್ಯಾರಥಾನ್‌ ಕಾದಾಟದಲ್ಲಿ ಕೆಡಹಿದ ಶುಭಾಂಕರ್‌ ದ್ವಿತೀಯ ಸುತ್ತಿಗೆ ತಲುಪಿದ್ದಾರೆ. ವಿಶ್ವದ 17ನೇ ರ್‍ಯಾಂಕಿನ ಸುಗಿಯಾರ್ಟೊ ಅವರನ್ನು 15-21, 21-14, 21-17 ಗೇಮ್‌ಗಳಿಂದ ಶುಭಾಂಕರ್‌ ಉರುಳಿಸಿದರು. ಈ ಹೋರಾಟ ಒಂದು ತಾಸು ಮತ್ತು 18 ನಿಮಿಷಗಳವರೆಗೆ ಸಾಗಿತ್ತು.

ಮಾಜಿ ಮೂರನೇ ರ್‍ಯಾಂಕಿನ ಆಟಗಾರರಾಗಿದ್ದ ಸುಗಿಯಾರ್ಟೊ ಅವರನ್ನು ಶುಭಾಂಕರ್‌ ಈ ವರ್ಷ ಎರಡನೇ ಬಾರಿ ಸೋಲಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಶುಭಾಂಕರ್‌ 14-21, 22-20, 21-11 ಗೇಮ್‌ಗಳಿಂದ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next