Advertisement

French Open ಬ್ಯಾಡ್ಮಿಂಟನ್‌: ಕೆ. ಶ್ರೀಕಾಂತ್‌ ಜಯ

12:01 AM Mar 07, 2024 | Team Udayavani |

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್‌ ಚೈನೀಸ್‌ ತೈಪೆಯ ಪ್ರಬಲ ಎದುರಾಳಿ ಚೌ ಟೀನ್‌ ಚೆನ್‌ ಅವರನ್ನು ಮಣಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. ಗೆಲುವಿನ ಅಂತರ 21-15, 20-22, 21-8. ಇದು ಚೆನ್‌ ವಿರುದ್ಧ ಆಡಿದ 7 ಪಂದ್ಯಗಳಲ್ಲಿ ಶ್ರೀಕಾಂತ್‌ ಸಾಧಿಸಿದ 3ನೇ ಜಯ. ಇವರ ಮುಂದಿನ ಎದುರಾಳಿ ಚೀನದ ಲು ಗುವಾಂಗ್‌ ಝು. ಇವರು ಭಾರತದ ಮತ್ತೋರ್ವ ಆಟಗಾರ ಎಚ್‌.ಎಸ್‌. ಪ್ರಣಯ್‌ ವಿರುದ್ಧ 21-17, 21-17 ಅಂತರದ ಜಯ ಸಾಧಿಸಿದರು. ಮೊದಲ ದಿನದ ಆಟದಲ್ಲಿ ಲಕ್ಷ್ಯ ಸೇನ್‌ ಜಯ ಗಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next