Advertisement

ಫ್ರೆಂಚ್‌ ಓಪನ್‌: ಜೊಕೋ-ಸಿಸಿಪಸ್‌: ಯಾರಿಗೆ ಒಲಿದೀತು ಪ್ಯಾರಿಸ್‌?

11:55 PM Jun 12, 2021 | Team Udayavani |

ಪ್ಯಾರಿಸ್‌: ಕೆಲವು ಕ್ರೀಡಾಪಟುಗಳು ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರು ಗೆದ್ದರೆ ಅದೊಂದು ಮಾಮೂಲು ಸಂಗತಿ, ಆದರೆ ಮುಗ್ಗರಿಸಿ ಬಿದ್ದರೆ ಅದು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆ. ಚರ್ಚೆ, ವಿಶ್ಲೇಷಣೆಗೆ ಗ್ರಾಸವೊದಗಿಸುವ ವಿಷಯ. ಇದಕ್ಕೆ ತಾಜಾ ಉದಾಹರಣೆ ರಫೆಲ್‌ ನಡಾಲ್‌!

Advertisement

ಫ್ರೆಂಚ್‌ ಓಪನ್‌, ರೊಲ್ಯಾಂಡ್‌ ಗ್ಯಾರೋಸ್‌, ಆವೆಯಂಗಳ… ಎಂದೊಡನೆ ಅಲ್ಲಿ ಅಚ್ಚೊತ್ತುವ ಚಿತ್ರ ರಫೆಲ್‌ ನಡಾಲ್‌ ಅವರದು. ಪ್ಯಾರಿಸ್‌ನ ಈ ಅಂಕಣದಲ್ಲಿ ನಡಾಲ್‌ ಸಾಧನೆ-ಚರಿತ್ರೆ ಅಸಾಮಾನ್ಯ, ಅನುಪಮ. ಶುಕ್ರವಾರ ರಾತ್ರಿ ಅವರು ಮತ್ತೋರ್ವ ದೈತ್ಯ ಟೆನಿಸಿಗ, ವಿಶ್ವದ ನಂ.1 ಖ್ಯಾತಿಯ ಜೊಕೋವಿಕ್‌ ವಿರುದ್ಧ ಸೆಣಸು ವಾಗಲೂ ಫೇವರಿಟ್‌ ಆಟಗಾರನಾಗಿಯೇ ಗೋಚರಿಸಿªರು.

ಮೊದಲ ಸೆಟ್‌ ವಶಪಡಿಸಿ
ಕೊಂಡಾಗಲಂತೂ ನಡಾಲ್‌ ಫೈನಲ್‌ ಪ್ರವೇಶ ಪಕ್ಕಾ ಎಂಬ ಸಂದೇಶವೊಂದು ರವಾನೆ ಯಾಗತೊ ಡಗಿತು. ಆದರೆ ಮುಂದೆ ಸಂಭವಿಸಿದ್ದೇ ಬೇರೆ.

ಜೊಕೋ ಒಮ್ಮೆಲೇ ಜಬರ್ದಸ್ತ್ ಪ್ರದರ್ಶ ನದೊಂದಿಗೆ ತಿರುಗಿ ಬಿದ್ದರು. ನಡಾಲ್‌ ಜಾರುತ್ತ ಹೋದರು. ಮುಂದಿನ ಮೂರೂ ಸೆಟ್‌ಗಳನ್ನು ವಶಪಡಿಸಿಕೊಂಡ ಜೊಕೋವಿಕ್‌ ಫೈನಲ್‌ಗ‌ೂ ಮೊದಲೇ ಇತಿಹಾಸ ಬರೆದರು! ಜೊಕೋ ಗೆಲುವಿನ ಅಂತರ 3-6, 6-3, 7-6 (7-4), 6-2. ಈ ಪಂದ್ಯವನ್ನು 5ನೇ ಸೆಟ್‌ವರೆಗೂ ವಿಸ್ತರಿಸಲಾಗದ ಮಟ್ಟಕ್ಕೆ ನಡಾಲ್‌ ಕುಸಿದು ಹೋದದ್ದು ನಂಬಲಾಗದ ಸಂಗತಿ. ಮೊದಲ ಸೆಟ್‌ ಗೆದ್ದ ಬಳಿಕ ಅವರು ಕಾಲುನೋವಿಗೆ ಸಿಲುಕಿದ್ದೂ ಸೋಲಿಗೊಂದು ಕಾರಣ ಇರಬಹುದು.

2005ರಲ್ಲಿ ಫ್ರೆಂಚ್‌ ಓಪನ್‌ ಆಡಲಾರಂಭಿಸಿದ ಬಳಿಕ ನಡಾಲ್‌ ಅನುಭವಿಸಿದ ಕೇವಲ 3ನೇ ಸೋಲು ಇದಾಗಿದೆ. ಹಾಗೆಯೇ ಜೊಕೋವಿಕ್‌ ಪ್ಯಾರಿಸ್‌ನಲ್ಲಿ ಕಾಣುತ್ತಿರುವ ಕೇವಲ 5ನೇ ಫೈನಲ್‌. ಗೆದ್ದದ್ದು ಒಮ್ಮೆ ಮಾತ್ರ, 2016ರಲ್ಲಿ. ಅಂದು ಬ್ರಿಟನ್ನಿನ ಆ್ಯಂಡಿ ಮರ್ರೆ ಆವರನ್ನು 3-6, 6-1, 6-2, 6-4ರಿಂದ ಹಿಮ್ಮೆಟ್ಟಿಸಿದ್ದರು.

Advertisement

ಸಿಸಿಪಸ್‌ ಎದುರಾಳಿ
ರವಿವಾರ ಸಂಜೆ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಜೊಕೋವಿಕ್‌ ಎದುರಾಳಿಯಾಗಿ ಕಣಕ್ಕಿಳಿಯುವವರು ಗ್ರೀಕ್‌ನ ಸ್ಟೆಫ‌ನೋಸ್‌ ಸಿಸಿಪಸ್‌. ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಜೊಕೋಗೆ 29ನೇ ಫೈನಲ್‌. ಆದರೆ ಫ‌ಲಿತಾಂಶ ಏನೂ ಆಗಬಹುದು,

ನಡಾಲ್‌-ಜೊಕೋ ಪಂದ್ಯದಂತೆ!
ಇಲ್ಲಿ ಸಿಸಿಪಸ್‌ ಗೆದ್ದರೆ ಇತಿಹಾಸವೊಂದು ನಿರ್ಮಾಣವಾಗುತ್ತದೆ. ಜೊಕೋ ಗೆದ್ದರೆ ಎಲ್ಲ 4 ಗ್ರ್ಯಾನ್‌ಸ್ಲಾಮ್‌ ಟ್ರೋಫಿಗಳನ್ನು ಎರಡು ಹಾಗೂ ಹೆಚ್ಚು ಸಲ ಎತ್ತಿದ ಕೇವಲ 3ನೇ ಟೆನಿಸಿಗನೆನಿಸುತ್ತಾರೆ. ಉಳಿದಿಬ್ಬರೆಂದರೆ ರಾಡ್‌ ಲೆವರ್‌ ಮತ್ತು ರಾಯ್‌ ಎಮರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next