ಪ್ಯಾರಿಸ್: ವಿಶ್ವದ ಮಾಜಿ ನಂ. 1 ಆಟಗಾರ್ತಿ, ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ 8 ವರ್ಷಗಳ ಬಳಿಕ ಫ್ರೆಂಚ್ ಓಪನ್ ಪಂದ್ಯಾವಳಿಯ 4ನೇ ಸುತ್ತು ತಲುಪಿದ್ದಾರೆ. ಅವರು ಕೊನೆಯ ಸಲ ಈ ಗಡಿ ದಾಟಿದ್ದು 2013ರಲ್ಲಿ. ಆದರೆ ತೃತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಕೂಟದಿಂದ ನಿರ್ಗಮಿಸಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಜ್ವೆರೆೇವ್, ನಿಶಿಕೊರಿ ಕೂಡ ನಾಲ್ಕನೇ ಸುತ್ತಿಗೆ ಏರಿದ್ದಾರೆ.
ಶುಕ್ರವಾರದ 3ನೇ ಸುತ್ತಿನ ಮುಖಾಮುಖೀಯಲ್ಲಿ ಅಜರೆಂಕಾ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 6-2, 6-2 ನೇರ ಸೆಟ್‌ಗಳ ಜಯ ಸಾಧಿಸಿದರು.
ಕಳೆದ ಮ್ಯಾಡ್ರಿಡ್ ಕೂಟದ ವೇಳೆ ಬೆನ್ನುನೋವಿಗೆ ಸಿಲುಕಿ ಹಿಂದೆ ಸರಿದಿದ್ದ ಅಜರೆಂಕಾ ಪ್ಯಾರಿಸ್‌ನಲ್ಲಿ ಆಡುವುದೇ ಅನುಮಾನವಿತ್ತು. ಆದರೀಗ ಗೆಲುವಿನ ಓಟ ಬೆಳೆಸಿದ್ದಾರೆ. ಇವರ ಮುಂದಿನ ಎದುರಾಳಿ ರಶ್ಯದ ಅನಾಸ್ತಾಸಿಯಾ ಪಾವ್ಲುಚೆಂಕೋವಾ.
ಸಬಲೆಂಕಾಗೆ ಸೋಲು
ದಿನದ ಇನ್ನೊಂದು ಸ್ಪರ್ಧೆಯಲ್ಲಿ ಪಾವ್ಲುಚೆಂಕೋವಾ 3ನೇ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 4-6, 6-2, 6-0 ಅಂತರ ದಿಂದ ಹಿಮ್ಮೆಟ್ಟಿಸಿದರು.