ಪ್ಯಾರಿಸ್: ರೋಜರ್ ಫೆಡರರ್ ಶುಕ್ರವಾರ ಹೊಸ ಇತಿಹಾಸ ಬರೆದರು. 400 ಗ್ರ್ಯಾನ್‌ಸ್ಲಾಮ್ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಟೆನಿಸಿಗನಾಗಿ ಮೂಡಿಬಂದರು. 3ನೇ ಸುತ್ತಿನ ಪಂದ್ಯದಲ್ಲಿ ಪಾಸ್ಪರ್ ರೂಡ್ ಅವರನ್ನು 6-3, 6-1, 7-6 (10-8)ರಿಂದ ಮಣಿಸಿ ಇದನ್ನು ಸ್ಮರಣೀಯಗೊಳಿಸಿದರು.
ವನಿತಾ ಸಿಂಗಲ್ಸ್ನಲ್ಲಿ ದ್ವಿತೀಯ ಶ್ರೇಯಾಂಕದ ಕ್ಯಾರೋಲಿನಾ ಪ್ಲಿಸ್ಕೋವಾ ಆಟ ಮುಗಿದಿದೆ. ಅವರನ್ನು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ 6-3, 6-3 ಅಂತರದಿಂದ ಮಣಿಸಿದರು.
ಸ್ಪೇನಿನ ಗಾರ್ಬಿನ್ ಮುಗುರುಜಾ ಕೂಡ 4ನೇ ಸುತ್ತಿಗೆ ಏರಿದ್ದಾರೆ. ಅವರು ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-3 ಅಂತರದ ಜಯ ಸಾಧಿಸಿದರು.
ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ ತೀವ್ರ ಹೋರಾಟದ ಬಳಿಕ ಎಲಿಸ್ ಮಾರ್ಟೆನ್ಸ್ ಅವರನ್ನು 6-7 (3), 6-4, 11-9ರಿಂದ ಪರಾಭವಗೊಳಿಸಿ 4ನೇ ಸುತ್ತಿಗೇರಿದರು.
ಡೆಲ್ ಪೊಟ್ರೊ 5 ಸೆಟ್ ಹೋರಾಟ
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ತೀವ್ರ ಪೈಪೋಟಿ ಯೊಡ್ಡಿದ ಜಪಾನಿನ ಯೊಶಿಹಿಟೊ ನಿಶಿಯೋಕಾ ವಿರುದ್ಧ 5 ಸೆಟ್‌ಗಳ ಕಾದಾಟ ನಡೆಸಿ ಜಯಿಸಿದ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ 3ನೇ ಸುತ್ತು ಪ್ರವೇಶಿಸಿದ್ದಾರೆ