Advertisement
ಇಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಆದುದರಿಂದ ಟೆನಿಸ್ ಅಭಿಮಾನಿಗಳು ವಿಶೇಷ ಕುತೂಹಲ ಇರಿಸಿಕೊಂಡಿದ್ದರು. ಮೊದಲ ಸೆಟ್ ಅನ್ನು ಸುಲಭದಲ್ಲಿ ವಶಪಡಿಸಿಕೊಂಡ ಕ್ರೆಜಿಕೋವಾ, ದ್ವಿತೀಯ ಸೆಟ್‌ನಲ್ಲಿ ಇದೇ ರಭಸ ತೋರುವಲ್ಲಿ ವಿಫಲರಾದರು. ಪಾವ್ಲುಚೆಂಕೋವಾ ತಿರುಗಿ ಬಿದ್ದರು. ತೃತೀಯ ಸೆಟ್ ಹೆಚ್ಚು ಫೈಟ್ ಕಂಡೀತೆಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿ ಕ್ರೆಜಿಕೋವಾ ಮುಂದೆ ರಶ್ಯನ್ನಳ ಆಟ ಸಾಗಲಿಲ್ಲ. ಬರೋಬ್ಬರಿ 40 ವರ್ಷಗಳ ಬಳಿಕ ಜೆಕ್ ಆಟಗಾರ್ತಿಯೊಬ್ಬರು ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಆಗಿ ಮೂಡಿಬಂದ ಕ್ಷಣಕ್ಕೆ ಕ್ರೆಜಿಕೋವಾ ಸಾಕ್ಷಿಯಾದರು.
ಕ್ರೆಜಿಕೋವಾ ರವಿವಾರ ವನಿತಾ ಡಬಲ್ಸ್ ಫೈನಲ್‌ನಲ್ಲೂ ಸೆಣಸಲಿದ್ದಾರೆ. ಇಲ್ಲಿ ಅವರ ಜತೆಗಾರ್ತಿ ಕ್ಯಾಥರಿನಾ ಸಿನಿಯಕೋವಾ. ಈ ಜೋಡಿಯ ಎದುರಾಳಿ ಪೋಲೆಂಡ್‌ನ ಐಗಾ ಸ್ವಿಯಾಟೆಕ್-ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್. ಕ್ರೆಜಿಕೋವಾ ಇದಕ್ಕೂ ಮೊದಲು 2018ರಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ವನಿತಾ ಡಬಲ್ಸ್ ಪ್ರಶಸ್ತಿ ಎತ್ತಿದ್ದರು. ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧನೆಗೈದ ಹಿರಿಮೆಯೂ ಇವರ ಪಾಲಿಗಿದೆ (2019, 2020, 2021).