Advertisement

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಪಿ.ವಿ. ಸಿಂಧು ಪರಾಭವ

12:15 AM Oct 27, 2019 | Sriram |

ಪ್ಯಾರಿಸ್‌: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು “ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಿಂದ ನಿರ್ಗಮಿಸಿದ್ದಾರೆ.

Advertisement

ವಿಶ್ವದ 6ನೇ ಶ್ರೇಯಾಂಕಿತೆ ಸಿಂಧು ಶುಕ್ರವಾರ ತಡರಾತ್ರಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಠಿನ ಹೋರಾಟದ ಹೊರತಾಗಿಯೂ ಚೈನೀಸ್‌ ತೈಪೆೆಯ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್‌ ವಿರುದ್ಧ 16 21, 26 24, 17 21 ಅಂತರದಲ್ಲಿ ಸೋಲು ಅನುಭವಿಸಿದರು. ಇವರಿಬ್ಬರ ಸುದೀರ್ಘ‌ ಹೋರಾಟ ಒಂದು ಗಂಟೆ, 15 ನಿಮಿಷಗಳ ಕಾಲ ಸಾಗಿತು.

ಎರಡನೇ ಮತ್ತು ಅಂತಿಮ ಗೇಮ್‌ನಲ್ಲಿ ಸಿಂಧು ಯಿಂಗ್‌ ನಡುವೆ ಪ್ರಬಲ ಹೋರಾಟವೇ ನಡೆದಿತ್ತು. ಇಬ್ಬರೂ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದರು. ಆದರೆ ಅದೃಷ್ಟ ಚೈನೀಸ್‌ ತೈಪೆ ಆಟಗಾರ್ತಿಯ ಕೈ ಹಿಡಿಯಿತು. ಇದಕ್ಕೂ ಮುನ್ನ ಭಾರತದ ಮತ್ತೋರ್ವ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ ಕೂಡ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next