Advertisement

French Open: ಪ್ರಶಸ್ತಿ ಮುಡಿಗೇರಿಸಿಕೊಂಡ ಚಿರಾಗ್‌-ಸಾತ್ವಿಕ್‌

12:02 AM Mar 11, 2024 | Team Udayavani |

ಪ್ಯಾರಿಸ್‌: ವಿಶ್ವದ ನಂ.1 ಜೋಡಿಯಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ “ಫ್ರೆಂಚ್‌ ಓಪನ್‌’ ಬ್ಯಾಡ್ಮಿಂಟನ್‌ ಭಾನುವಾರ ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

ಭಾರತದ ಅಗ್ರ ಶ್ರೇಯಾಂಕದ ಆಟಗಾರ ಫೈನಲ್‌ನಲ್ಲಿ ಚೈನೀಸ್ ತೈಪೆಯ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ವಿರುದ್ಧ ನೇರ ಗೇಮ್‌ಗಳ ಜಯ ದಾಖಲಿಸಿದರು. ಈ ಹಿಂದೆ 2022 ರಲ್ಲಿ ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್-ಚಿರಾಗ್ ಭಾನುವಾರ 21-11, 21-17 ಅಂತರದಲ್ಲಿ ಗೆದ್ದು ಪಂದ್ಯಾವಳಿಯಲ್ಲಿ ಎರಡನೇ ಫೈನಲ್‌ ಗೆದ್ದ ಸಾಧನೆ ಮಾಡಿದರು.

ಇವರಿಬ್ಬರು ಮೊದಲ ಗೇಮ್‌ನಲ್ಲಿ ಬೆವರು ಸುರಿಸದೇ ಗೆದ್ದರೆ, ಎರಡನೇ ಸೆಟ್ ನಲ್ಲಿ ಕಠಿಣ ಹೋರಾಟ ನಡೆಸಿದರು. ಆದರೆ ಭಾರತದ ಜೋಡಿ ಎರಡನೇ ಗೇಮ್‌ನಲ್ಲೂ ಗೆಲುವು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next