Advertisement

ಫ್ರೆಂಚ್‌ ಓಪನ್‌ ಟೆನಿಸ್‌: ಕೆರ್ಬರ್‌ಗೆ ಪೊಟಪೋವಾ ಸೋಲಿನೇಟು

11:10 PM May 26, 2019 | Team Udayavani |

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಪಂದ್ಯಾವಳಿ ಮೊದಲ ದಿನವೇ ಭಾರೀ ಏರುಪೇರಿನ ಫ‌ಲಿತಾಂಶವೊಂದನ್ನು ಕಂಡಿದೆ. ರಶ್ಯದ 18ರ ಹರೆಯದ ಆಟಗಾರ್ತಿ ಅನಾಸ್ತಾಸಿಯಾ ಪೊಟಪೋವಾ ಮೊದಲ ಸುತ್ತಿನಲ್ಲೇ ವಿಂಬಲ್ಡನ್‌ ಚಾಂಪಿಯನ್‌ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು ಕೂಟದಿಂದ ಹೊರದಬ್ಬಿದ್ದಾರೆ.

Advertisement

81ನೇ ರ್‍ಯಾಂಕಿಂಗ್‌ನ ಪೊಟ ಪೋವಾ ಫ್ರೆಂಚ್‌ ಓಪನ್‌ನಲ್ಲಿ ಕಣಕ್ಕಿಳಿದದ್ದು ಇದೇ ಮೊದಲು. ಹೀಗಾಗಿ ಇದು ಕನಸಿನ ಆರಂಭ ಎನಿಸಿಕೊಂಡಿತು. ಇನ್ನೊಂದೆಡೆ ಜರ್ಮನಿಯ ಎಡಗೈ ಆಟಗಾರ್ತಿ ಕೆರ್ಬರ್‌ ಫ್ರೆಂಚ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಅನುಭವಿಸಿದ 6ನೇ ಸೋಲು ಇದಾಗಿದೆ.

ಸಿಸಿಪಸ್‌ ದ್ವಿತೀಯ ಸುತ್ತಿಗೆ
ಗ್ರೀಕ್‌ನ ರೈಸಿಂಗ್‌ ಸ್ಟಾರ್‌ ಸ್ಟೆಫ‌ನಸ್‌ ಸಿಸಿಪಸ್‌ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ತನಕ ತಲುಪಿದ ಸಿಸಿಪಸ್‌ ರವಿವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿಮಿಲಿಯನ್‌ ಮಾರ್ಟರರ್‌ ಅವರನ್ನು 6-2, 6-2, 7-6 (7-4) ಅಂತರದಿಂದ ಮಣಿಸಿದರು.

ಪ್ರಜ್ಞೆàಶ್‌ ಪರಾಭವ
ಸಿಸಿಪಸ್‌ ಅವರಿನ್ನು ಬೊಲಿವಿಯಾದ ಹ್ಯೂಗೊ ಡೆಲ್ಲೀನ್‌ ಅವರನ್ನು ಎದುರಿಸಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಅವರು ಭಾರತದ ಪ್ರಜ್ಞೆàಶ್‌ ಗುಣೇಶ್ವರ್‌ ವಿರುದ್ಧ 6-1, 6-3, 6-1ರಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next