ಪ್ಯಾರಿಸ್: ಕೋವಿಡ್-19 ಕಾರಣದಿಂದ ಸೆಪ್ಟಂಬರ್ ತಿಂಗಳಿಗೆ ಮುಂದೂಡಲ್ಪಟ್ಟಿರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದ ಪಂದ್ಯಗಳಿಗೆ ಶೇ. 60ರಷ್ಟು ವೀಕ್ಷಕರಿಗೆ ಪ್ರವೇಶಾವಕಾಶ ನೀಡಲು ಸಂಘಟ ಕರು ನಿರ್ಧರಿಸಿದ್ದಾರೆ. ಫ್ರೆಂಚ್ ಫೆಡ ರೇಶನ್ ಅಧ್ಯಕ್ಷ ಬರ್ನಾರ್ಡ್ ಗಿಡಿಸೆಲ್ಲಿ ಈ ವಿಷಯ ತಿಳಿಸಿದರು.
“ಕೂಟದ ಪ್ರಧಾನ ಕೋರ್ಟ್‌ಗಳಲ್ಲಿ 4 ಮಂದಿಗೆ ಒಟ್ಟಿಗೇ ಕುಳಿತುಕೊಳ್ಳಲು ಅವಕಾಶವಿದ್ದು, ಬಳಿಕ ಒಂದು ಆಸನ ವನ್ನು ಖಾಲಿ ಬಿಡಬೇಕು. ಹಾಗೆಯೇ ಉಳಿದ ಕೋರ್ಟ್‌ಗಳಲ್ಲಿ ಇಬ್ಬರು ಕುಳಿತ ಬಳಿಕ ಒಂದು ಆಸನವನ್ನು ಖಾಲಿ ಬಿಡಲಾಗುತ್ತದೆ.
ಇದರಿಂದ ಆರಂಭಿಕ ಹಂತದ ಪಂದ್ಯಗಳಲ್ಲಿ ಸುಮಾರು 20 ಸಾವಿರ ವೀಕ್ಷಕರು, ಫೈನಲ್ ವೇಳೆ 10 ಸಾವಿರ ವೀಕ್ಷಕರಿಗೆ ಅವಕಾಶ ಲಭಿಸುತ್ತದೆ. ಇದೆಲ್ಲವೂ ಫ್ರಾನ್ಸ್ ಸರಕಾರದ ಪರಿಷ್ಕೃತ ಸಾಮಾಜಿಕ ಅಂತರ ನಿಯಮಕ್ಕೆ ಅನುಗುಣವಾಗಿದೆ’ ಎಂದು ಗಿಡಿಸೆಲ್ಲಿ ಮಾಹಿತಿಯಿತ್ತರು.
ಕೂಟದ ವೇಳೆ ವೀಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾ ಗಿದೆ. ಆಟಗಾರರಿಗೆ ಮತ್ತು ಸಿಬಂದಿಗೆ ಕೋವಿಡ್-19 ಮಾರ್ಗಸೂಚಿಯನ್ನು ಇನ್ನಷ್ಟೇ ರೂಪಿ ಸಬೇಕಿದೆ.
ಮೇ-ಜೂನ್ ತಿಂಗಳಲ್ಲಿ ನಡೆಯ ಬೇಕಿದ್ದ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಸೆ. 27ರಿಂದ ಆರಂಭವಾಗಲಿದೆ.
ಇದಕ್ಕೂ ಮೊದಲು ಆ. 31ರಿಂದ ಸೆ. 13ರ ತನಕ ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ನಡೆಯಲಿದೆ. ಇದಕ್ಕೆ ವೀಕ್ಷಕರನ್ನು ನಿರ್ಬಂಧಿಸಲಾಗಿದೆ.