ಶುಕ್ರವಾರದ ವನಿತಾ ಸಿಂಗಲ್ಸ್ ಮುಖಾಮುಖಿಯಲ್ಲಿ ಕೊಕೊ ಗಾಫ್ ಉಕ್ರೇನ್‌ನ ಡಯಾನಾ ಯಾಸ್ಟ್ರಮ್‌ಸ್ಕಾ ವಿರುದ್ಧ 6-2, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು. ಆಸ್ಟ್ರೇಲಿಯನ್ ಓಪನ್ ಸೆಮಿಫೈನಲಿಸ್ಟ್ ಆಗಿರುವ ಯಾಸ್ಟ್ರೆಮ್‌ಸ್ಕಾ ವಿರುದ್ಧ ಮೊದಲ ಸೆಟ್‌ನಲ್ಲಿ ಕೊಕೊ ಗಾಫ್ ಪ್ರಚಂಡ ಆಟ ಪ್ರದರ್ಶಿಸಿದರು. ದ್ವಿತೀಯ ಸೆಟ್‌ನಲ್ಲಿ ಉಕ್ರೇನ್ ಆಟಗಾರ್ತಿ ಒಂದಿಷ್ಟು ಪ್ರತಿ ಹೋರಾಟ ತೋರಿದರಾದರೂ ಗಾಫ್ಗೆ ಸಾಟಿಯಾಗಲಿಲ್ಲ.
Advertisement
2021ರ ಚಾಂಪಿಯನ್ ಹಾಗೂ 2022ರ ರನ್ನರ್ ಅಪ್ ಆಗಿರುವ ಕೊಕೊ ಗಾಫ್ ಅವರ ಮುಂದಿನ ಸುತ್ತಿನ ಎದುರಾಳಿ ಇಟಲಿಯ ಎಲಿಸಾಬೆಟ್ಟಾ ಕೊಕ್ಸಿಯರೆಟ್ಟೊ. ಇನ್ನೊಂದು ಪಂದ್ಯದಲ್ಲಿ ಇವರು ರಷ್ಯದ 17ನೇ ಶ್ರೇಯಾಂಕದ ಆಟಗಾರ್ತಿ ಲುಡ್ಮಿಲಾ ಸಾಮೊÕನೋವಾ ವಿರುದ್ಧ 7-6 (7-4), 6-2ರಿಂದ ಗೆದ್ದು ಬಂದರು.
ಪುರುಷರ ವಿಭಾಗದ 3ನೇ ಸುತ್ತಿನಲ್ಲಿ ಜಾನಿಕ್ ಸಿನ್ನರ್ ರಷ್ಯಾದ ಪಾವೆಲ್ ಕೊಟೋವ್ ಅವರಿಗೆ 6-4, 6-4, 6-4 ಅಂತರದ ಸೋಲುಣಿಸಿದರು.
Related Articles
ಫ್ರೆಂಚ್ ಓಪನ್ ಡಬಲ್ಸ್‌ನಲ್ಲಿ ಭಾರತದ ಎನ್. ಶ್ರೀರಾಮ್ ಬಾಲಾಜಿ ಮೊದಲ ಜಯ ಸಾಧಿಸಿದ್ದಾರೆ. ಮೆಕ್ಸಿಕೋದ ಮಿಗ್ಯುವೆಲ್ ಏಂಜೆಲ್ ರಿಯೆಸ್ ಜತೆಗೂಡಿ ಆಡಿದ ಬಾಲಾಜಿ, ಅಮೆರಿಕದ ರೀಸ್ ಸ್ಟಾಲ್ಡರ್-ನೆದರ್ಲೆಂಡ್ಸ್‌ನ ಸೆಮ್ ವರ್ಬೀಕ್ ವಿರುದ್ಧ 6-3, 6-4 ಅಂತರದ ಜಯ ಸಾಧಿಸಿದರು. ಆದರೆ ಯುಕಿ ಭಾಂಬ್ರಿ-ಫ್ರಾನ್ಸ್‌ನ ಅಲಾºನೊ ಒಲಿವೆಟ್ಟಿ ಜೋಡಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿತು.
Advertisement