Advertisement

ವಯಸ್ಸಾಗಿದೆ ಅಂತ ಅನಿಸುತ್ತಿಲ್ಲ: ನಡಾಲ್‌

06:00 AM Jun 06, 2018 | |

ಪ್ಯಾರಿಸ್‌: ಅವೆಯಂಗಳದ ರಾಜ ಸ್ಪೇನ್‌ನ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಬೆನ್ನಲ್ಲೇ ನಿವೃತ್ತಿ ಸೂಚನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಹಠಾತ್‌ ಪ್ರತಿಕ್ರಿಯೆಯಿಂದ ನಡಾಲ್‌ ಅಭಿಮಾನಿಗಳು ಸಂತಸಗೊಂಡಿದ್ದಾರೆ.

Advertisement

32 ವರ್ಷದ ನಡಾಲ್‌ ಈ ಹಿಂದೆ ನಿವೃತ್ತಿ ಸೂಚನೆಯನ್ನು ನೀಡಿದ್ದರು. ಇದರಿಂದ ಅವರ ಅಭಿಮಾನಿಗಳು ಬೇಸರಕ್ಕೆ ಒಳಗಾಗಿದ್ದರು. ಆದರೆ ಪ್ರಸ್ತುತ ಸಾಗುತ್ತಿರುವ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಬೆನ್ನಲ್ಲೇ ಪ್ರತಿಕ್ರಿಯಿಸಿ, “ನನಗೆ ತುಂಬಾ ವಯಸ್ಸಾಗಿದೆ ಎಂದು ಅನಿಸುತ್ತಿಲ್ಲ. ನಿರಂತರವಾದ ಪ್ರಯತ್ನದಿಂದ ಇಲ್ಲಿ ತನಕ ಬಂದಿದ್ದೇನೆ. ನನ್ನ ಪ್ರಯತ್ನಗಳ ಬಗ್ಗೆ ನನಗೆ ಖುಷಿಯಿದೆ. ಪ್ರತಿ ದಿನದ ಪಂದ್ಯವೂ ನನಗೆ ಹೊಸ ಅನುಭವ ನೀಡುತ್ತಿದೆ. ಮುಂದೆ ಕೂಡ ಇದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ’ ಎಂದು ಅವರು ತಿಳಿಸಿದ್ದಾರೆ. 

ಜರ್ಮನಿಯ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ ಅವರನ್ನು 6-3, 6-2, 7-6 (7-4) ಸೆಟ್‌ಗಳಿಂದ ಕೆಡಹಿದ ನಡಾಲ್‌ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಇದು ಅವರ ಟೆನಿಸ್‌ ಬಾಳ್ವೆಯ 900ನೇ ಪಂದ್ಯ ಗೆಲುವು ಆಗಿದೆ. ಅಂತಿಮ ಎಂಟರ ಸುತ್ತಿಗೇ ತಲುಪಿದ ನಡಾಲ್‌ ಜೊಕೋವಿಕ್‌ ಸಾಧನೆಯನ್ನು ಸರಿಗಟ್ಟಿದರು. ಜೊಕೋವಿಕ್‌ ಇಲ್ಲಿ 12ನೇ ಬಾರಿ ಅಂತಿಮ ಎಂಟರ ಸುತ್ತಿಗೆ ತಲುಪಿದ್ದಾರೆ. 

ನಡಾಲ್‌ 1 ಸಲ ಆಸ್ಟ್ರೇಲಿಯನ್‌ ಓಪನ್‌, 10 ಸಲ ಫ್ರೆಂಚ್‌ ಓಪನ್‌, 2 ಬಾರಿ ವಿಂಬಲ್ಡನ್‌ ಹಾಗೂ 3 ಬಾರಿ ಯುಎಸ್‌ ಓಪನ್‌ ಸಿಂಗಲ್ಸ್‌ ಕಿರೀಟ ಗೆದ್ದಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಸತತ 37 ಸೆಟ್‌ ಗೆದ್ದಿರುವ ನಡಾಲ್‌ ಬೊರ್ನ್ ಬೋರ್ಗ್‌ ಅವರ ದಾಖಲೆ ಅಳಿಸಿ ಹಾಕಲು ಇನ್ನು 4 ಸೆಟ್‌ ಗೆಲ್ಲಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next