Advertisement
ಮೊದಲ ಹಾಗೂ ಕೊನೆಯ ಸೆಟ್‌ಗಳನ್ನು ಟೈ ಬ್ರೇಕರ್‌ಗೆ ಎಳೆತಂದದ್ದು 182ನೇ ರ್‍ಯಾಂಕಿಂಗ್ ಆಟಗಾರ ಸಫಿಯುಲಿನ್ ಅವರ ಅಮೋಘ ಸಾಧನೆ ಎನಿಸಿತು. ಜ್ವೆರೇವ್ ಗೆಲುವಿನ ಅಂತರ 7-6 (7 -4), 6-3, 7-6 (7-1).
ಆದರೆ ಸ್ಪೇನಿನ 11ನೇ ಶ್ರೇಯಾಂಕದ ರಾಬರ್ಟೊ ಬೌಟಿಸ್ಟ ಅಗುಟ್ ಅವರ ಆಟ ಎರಡನೇ ಸುತ್ತಿಗೇ ಕೊನೆಗೊಂಡಿತು. ಅವರನ್ನು ಸ್ವಿಸ್ ಟೆನಿಸಿಗ ಹೆನ್ರಿ ಲ್ಯಾಕೊÕàನೆನ್ 6-2, 2-6, 6-3, 6-2 ಅಂತರದಿಂದ ಪರಾಭವಗೊಳಿಸಿದರು. ವನಿತಾ ಸಿಂಗಲ್ಸ್
ವನಿತಾ ಸಿಂಗಲ್ಸ್‌ನಲ್ಲಿ ಜೆಕ್ ಆಟಗಾರ್ತಿ ಮಾರ್ಕೆಟಾ ವೋಂಡೌÅಸೋವಾ ದ್ವಿತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಫ್ರಾನ್ಸ್‌ನ ಹಾರ್ಮನಿ ಟಾನ್ ವಿರುದ್ಧ ಅವರು 6-1, 6-3 ಅಂತರದ ಮೇಲುಗೈ ಸಾಧಿಸಿದರು.
Related Articles
ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಕಾಲಿನ ಗಾಯದಿಂದಾಗಿ ಫ್ರೆಂಚ್ ಓಪನ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
Advertisement
ಕ್ವಿಟೋವಾ ಸುದ್ದಿಗೋಷ್ಠಿ ವೇಳೆ ಆಯತಪ್ಪಿ ಬಿದ್ದು ಕಾಲಿನ ಗಾಯಕ್ಕೆ ಸಿಲುಕ್ಕಿದ್ದೊಂದು ಅಚ್ಚರಿ ಹಾಗೂ ಆಘಾತಕಾರಿ ಸಂಗತಿ ಎನಿಸಿತು. “ಎಂಐಆರ್ ಸ್ಕ್ಯಾನ್ ವರದಿ ಪ್ರತಿಕೂಲವಾಗಿದೆ. ಹೀಗಾಗಿ ತಂಡದೊಂದಿಗೆ ಚರ್ಚೆ ನಡೆಸಿ ನಾನು ಕಠಿನ ನಿರ್ಧಾರ ತೆಗೆದುಕೊಂಡಿದ್ದೇನೆ. ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ಕ್ವಿಟೋವಾ ತಿಳಿಸಿದ್ದಾರೆ.
ಇದರೊಂದಿಗೆ ಸತತ ಎರಡು ದಿನ ಇಬ್ಬರು ಪ್ರಮುಖ ಆಟಗಾರ್ತಿಯರು ಕೂಟದಿಂದ ಹಿಂದೆ ಸರಿದಂತಾಯಿತು. ನವೋಮಿ ಒಸಾಕ ಸಂಘಟಕರೊಂದಿಗೆ ಜಿದ್ದಿಗೆ ಬಿದ್ದು ಬಾಯ್ಕಟ್ ಮಾಡಿದ್ದರು.