ಪ್ಯಾರಿಸ್: ಫ್ರೆಂಚ್ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತೀಯ ಆಟಗಾರರು ಗೆಲುವಿನೊಂದಿಗೆ ಮುಂದೆ ಹೆಜ್ಜೆ ಇಟ್ಟಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್, ಎಚ್.ಎಸ್. ಪ್ರಣಯ್ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಕೂಟದಿಂದ ಹೊರಬಿದ್ದಿದ್ದಾರೆ.
ಸೈನಾ 21-14, 11-21, 21-10 ಅಂಕಗಳ ಅಂತರದಿಂದ ಡೆನ್ಮಾರ್ಕ್‌ನ ಲಿನೆ ಹೊಜ್‌ಮಾರ್ಕ್ ಅವರನ್ನು ಪರಾಭವಗೊಳಿಸಿದರು. ಮುಂದೆ ಇವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು ಎದು ರಿಸಲಿದ್ದಾರೆ. ಸಿಂಧು 21-19, 21-18 ಗೇಮ್‌ಗಳ ಅಂತರದಿಂದ ಸ್ಪೇನ್‌ನ ಬಿಟ್ರಿಜ್ ಅವರನ್ನು ಮಣಿ ಸಿದರು. ಮುಂದಿನ ಸುತ್ತಿನ ಎದುರಾಳಿ ಜಪಾನ್‌ನ ಸಯಾಕಿ.
ಶ್ರೀಕಾಂತ್ ಜರ್ಮನಿಯ ಫ್ಯಾಬಿ ಯಾನ್ ಅವರನ್ನು ಸೋಲಿಸಿದರೆ, ಪ್ರಣಯ್ 21-15, 21-17 ಅಂತರದಿಂದ ದ. ಕೊರಿಯಾದ ಲೀ ಹ್ಯುನ್ ಅವರನ್ನು ಉರುಳಿಸಿದರು. ಅಶ್ವಿನಿ-ಸಿಕ್ಕಿ ರೆಡ್ಡಿ ಜೋಡಿ 21-12, 21-12 ಅಂತರದಿಂದ ಇಂಗ್ಲೆಂಡ್‌ನ
ಜೆನ್ನಿ-ವಿಕ್ಟೋರಿಯಾ ವಿರುದ್ಧ ಗೆಲುವು ಸಾಧಿಸಿದರು.