ನವದೆಹಲಿ: ದೆಹಲಿಯ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರ ಮೊಬೈಲ್ ಫೋನನ್ನು ಕಳ್ಳಲು ಎಗರಿಸಿದ್ದಾರೆ.
ದೀಪಾವಳಿಯ ಹಿನ್ನೆಲೆಯಲ್ಲಿ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರು ಅಕ್ಟೋಬರ್ 20 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಹಳೆಯ ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಶಾಪಿಂಗ್‌ಗೆ ತೆರಳಿದ್ದರು. ಈ ವೇಳೆ ಜನನಿಬಿಡ ಪ್ರದೇಶವಾಗಿರುವ ಮಾರುಕಟ್ಟೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ತಕ್ಷಣವೇ ಫೋನ್ ಕಳವಾಗಿರುವ ಕುರಿತು ಮ್ಯಾಥೌ ಅವರು ದೂರು ಸಲ್ಲಿಸಿದ್ದರು.
ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರ ಬಳಿಯಿಂದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿಯ ಚಾಂದಿನಿ ಚೌಕ್ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ಪ್ರದೇಶವಾಗಿದೆ. ಭಾರತ ಮತ್ತು ವಿದೇಶಗಳಿಂದ ದೆಹಲಿಗೆ ಭೇಟಿ ನೀಡಲು ಬರುವ ಜನರು ಖಂಡಿತವಾಗಿಯೂ ಚಾಂದಿನಿ ಚೌಕಕ್ಕೆ ಭೇಟಿ ನೀಡುತ್ತಾರೆ. ಬಟ್ಟೆಗಳ ಜೊತೆಗೆ ಆಹಾರ ಪದಾರ್ಥಗಳಿಗೂ ಈ ಮಾರುಕಟ್ಟೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಪ್ರದೇಶ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅಲ್ಲದೆ ಇಲ್ಲಿ ಕಳ್ಳಕಾಕರ ಹಾವಳಿಯೂ ಹೆಚ್ಚಾಗಿದೆ.
ಇದನ್ನೂ ಓದಿ: Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…