Advertisement

ಮಧ್ಯರಾತ್ರಿಯಿಂದಲೇ ಸರಕು ಸಾಗಣೆದಾರರ ಮುಷ್ಕರ ಆರಂಭ

07:02 AM Mar 31, 2017 | |

ಬೆಂಗಳೂರು: ಕೇಂದ್ರ ಸರ್ಕಾರವು ಸರಕು ಸಾಗಣೆ ವಾಹನಗಳಿಗೆ ಮೂರನೇ ವ್ಯಕ್ತಿ ವಿಮಾ ಮೊತ್ತವನ್ನು ಶೇ.40ರಷ್ಟು ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಸರಕು ಸಾಗಣೆದಾರರು ಗುರುವಾರ ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.

Advertisement

ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ನೇತೃತ್ವದಲ್ಲಿ ಲಾರಿ ಮಾಲೀಕರು ಗುರುವಾರ
ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭಿಸಿದ್ದರೆ, ಚನ್ನಾರೆಡ್ಡಿ ನೇತೃತ್ವದ ಅಖೀಲ ಭಾರತ ಸರಕು ಸಾಗಣೆ ವಾಹನ ಮಾಲೀಕರ
ಸಂಘ ಶುಕ್ರವಾರ ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಿದೆ. ದಕ್ಷಿಣ ಭಾರತದ ಸರಕು ಸಾಗಣೆದಾರರು ಮುಷ್ಕರ ಆರಂಭಿಸಿರುವುದರಿಂದ ಉತ್ತರ ಭಾರತದ ವಾಹನಗಳು ರಾಜ್ಯ ಪ್ರವೇಶಿಸಲು ಅಡ್ಡಿಯಾಗುವ ಹಿನ್ನೆಲೆಯಲ್ಲಿ ಸರಕು ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರವು ವಾಹನಗಳಿಗೆ ಮೂರನೇ ವ್ಯಕ್ತಿ ವಿಮಾ ಶುಲ್ಕವನ್ನು ಶೇ.40ರಷ್ಟು ಹೆಚ್ಚಳ ಮಾಡಿರುವುದನ್ನು ವಿರೋಧಿಸಿ
ಸರಕು ಸಾಗಣೆದಾರರು ಮುಷ್ಕರಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಪಟ್ಟಂತೆ
ಏ.10ರೊಳಗೆ ಸ್ಪಂದಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆದಾರರು ಕೇಂದ್ರ
ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next