Advertisement

ಬಲಿದಾನಗಳ ಉಡುಗೊರೆ ಸ್ವಾತಂತ್ರ್ಯ

11:22 AM Aug 16, 2017 | |

ಕಲಬುರಗಿ: ಭಾರತಕ್ಕೆ ಸುಖಾ ಸುಮ್ಮನೆ ಸ್ವಾತಂತ್ರ್ಯ ದೊರಕಲಿಲ್ಲ. ಅದಕ್ಕಾಗಿ ಸಾವಿರಾರು ಜನ ದೇಶ ಭಕ್ತರ ತ್ಯಾಗ, ಬಲಿದಾನಗಳ ಆಗಿ ಹೋಗಿವೆ. ಅದರಿಂದಾಗಿ ನಮಗೆ ಸ್ವಾತಂತ್ರ್ಯದ ಉಡುಗೊರೆ ದೊರೆತಿದೆ ಎಂದು ಕಾಡಾ ಅಧ್ಯಕ್ಷ ಮಹಾಂತಪ್ಪಾ ಕೆ. ಸಂಗಾವಿ ಹೇಳಿದರು. ಅವರು, ನಗರದ ದರಿಯಾಪುರ ಬಡಾವಣೆಯಲ್ಲಿರುವ ಕಾಡಾ ಕಚೇರಿಯಲ್ಲಿ 71 ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು. ಆ.15 ಕೇವಲ ಸ್ವಾತಂತ್ರ್ಯ ದಿನವಷ್ಟೇ ಅಲ್ಲ, ದೇಶಕ್ಕಾಗಿ ಜೀವತ್ಯಾಗ ಮಾಡಿದವರನ್ನು
ನೆನೆಯುವ ದಿನವೂ ಆಗಿದೆ. ನಾವು ಅಹಿಂಸೆ ಮಾರ್ಗ ಅನುಸರಿಸಿ ಸ್ವಾತಂತ್ರ್ಯ ಪಡೆದಿದ್ದೇವೆ. ಮಹಾತ್ಮಾಗಾಂಧಿ ನೇತೃತ್ವದಲ್ಲಿ ಅನೇಕ ಹೋರಾಟಗಳಾದವು. ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಅಸಹಕಾರ ಅಂದೋಲನ ಮುಂತಾದವುಗಳಿಂದ ಭಾರತದ ಜನಶಕ್ತಿಯನ್ನು ಅರಿತ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು ಎಂದರು. ಆಡಳಿತಾಧಿಕಾರಿ ಚವ್ಹಾಣ ಉನ್ಯಾ
ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ನಡೆದ ಹೋರಾಟದ ಹಾದಿಗಳನ್ನು ಮೆಲುಕು ಹಾಕಿದರು. ಕಾಡಾ ನಿರ್ದೇಶಕರಾದ ದಶರಥ ಬಾಬು ವಂಟಿ, ಮಾರುತಿರಾವ್‌, ದೇವಿಕಾ ಆರ್‌.ಶ್ರೀಕಟ್ಟಿ ರಾಠೊಡ, ಸುರೇಶ ಕಮ್ಮಣ್ಣ, ಕಾರ್ಯನಿರ್ವಾಹಕ ಇಂಜಿನಿಯರಿಂಗ್‌ ಹಾಗೂ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next