Advertisement

ಫ್ರೀಡಂ ಸೂತ್ರ

06:25 AM Aug 14, 2017 | |

ದೇಶದ ಸ್ವಾತಂತ್ರ್ಯದ ಬಗ್ಗೆ ನಾವು ಗಂಟೆ ಗಟ್ಟಲೆ ಭಾಷಣ ಬಿಗಿಯುತ್ತೇವೆ. ಆದರೆ ತಿಂಗಳ ಕೊನೆಯಲ್ಲಿ ಮನೆಯ ಖರ್ಚಿಗೆ ಖೋತಾ ಹೊಡೆಯುವ ಸಂಬಳದ ಬಾಬಿನ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಅಂದರೆ ನಮ್ಮ ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಸ್ವೇಚ್ಛೆಯಲ್ಲದಿದ್ದರೂ ಅಗತ್ಯ ವಸ್ತು, ವಸ್ತ್ರ, ನಿತ್ಯೋಪಯೋಗಿ ಸಾಮಗ್ರಿಯನ್ನು ಬೇಕೆನಿಸಿದಾಗ ತೆಗೆದುಕೊಳ್ಳುವಷ್ಟೂ ಶಕ್ತರಲ್ಲದಿದ್ದಾಗ, ನೆರೆಹೊರೆಯೇಕೆ ಮನೆಯಲ್ಲಿಯೇ ಮೌಲ್ಯಕುಸಿಯುತ್ತದೆ.  ಗಳಿಕೆಗನುಗುಣವಾಗಿ ವ್ಯವಸ್ಥಿತ ಯೋಜನೆ ಮಾಡಿದರೆ ಆರ್ಥಿಕ ಸ್ವಾತಂತ್ರ್ಯ ಕಷ್ಟದ ಮಾತಲ್ಲ. ಅದಕ್ಕಾಗಿ ಕೆಲವು ಸೂತ್ರಗಳು ಇಲ್ಲಿವೆ.

Advertisement

ಪ್ರಾಥಮಿಕ ಶಾಲೆ ಮುಗಿಸಿದ ಮಗಳಿಗೆ ರಾಯರು ನೊಟ್‌ ಪುಸ್ತಕಕೊಟ್ಟು ಪ್ರತಿದಿನದ ಖರ್ಚಿನ ಲೆಕ್ಕ ಬರೆಸಲು ಪ್ರಾರಂಭಿಸಿದರು. ಮನೆಯವರು  ಅದೇನ್ರೀ ಅವಳಿಗೆ ಶಾಲೆಯಲ್ಲಿ ಕೊಡುವ ಹೋಂ ವರ್ಕ್‌ ಜೊತೆಗೆ ನಿಮ್ಮದೊಂದು’ ಎಂದು ನಿದಾನವಾಗಿ ಮೂದಲಿಸಿದರು. ರಾಯರು ಮನೆಯಾಕೆ ಕಡೆ ನೋಡಿ ಸುಮ್ಮನಾದರು.

ಪ್ರತಿದಿನ ಲೆಕ್ಕ ಬರೆಯುತ್ತಿದ್ದ ಮಗಳಿಗೆ ತಿಂಗಳ ಮನೆಯ, ಜಮೀನಿನ, ಸಾಲದ, ಆದಾಯದ, ಕೂಲಿ ಆಳುಗಳ ಎಲ್ಲ ಖರ್ಚು ವೆಚ್ಚಗಳು ತಿಳಿದವು. ವಾರ್ಷಿಕ ತಲಾದಾಯ, ಗಳಿಕೆ, ಉಳಿಕೆ, ತೆರಿಗೆ, ವಿಮೆ, ಬ್ಯಾಂಕ್‌ ಸಂಬಂಧಿ ವ್ಯವಹಾರಗಳೂ ಪರಿಚಯವಾದವು. ಈಗ ಮಗಳನ್ನು ಕರೆದ ರಾಯರು ಯಾವುದಕ್ಕೆ ಎಷ್ಟೆಷ್ಟು ಖರ್ಚಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರೆ, ಮುದ್ದು ಮುಖದಿಂದ ಬಂದ ಉತ್ತರಗಳನ್ನು ನೋಡಿ ಮನೆಯವರೆಲ್ಲಾ ದಂಗಾದರು. ಇದೇ ಆರ್ಥಿಕ ಸ್ವಾತಂತ್ರ್ಯದ ಮೊದಲ ಮೆಟ್ಟಿಲು. ನಮ್ಮ ಖರ್ಚು ವೆಚ್ಚವನ್ನು ನಾವೇ ಅರಿಯುವುದು.

ಹೌದು ನಮಗೆಲ್ಲ ಹಣ ಬೇಕು. ಎಷ್ಟು ಬೇಕೆಂಬುದರ ಬಗ್ಗೆ ಅರಿವಿಲ್ಲ. ಪ್ರತಿಬಾರಿಯೂ ಇಂಕ್ರಿಮೆಂಟ…, ಹೌಕುಗಳಾದಾಗಲೂ ಸಂತೋಷ ಪಡುವವರು ನಾವೇ, ತಿಂಗಳ ಕೊನೆಯಲ್ಲಿ ಖರ್ಚು ಹೆಚ್ಚಾಯಿತೆಂದು ಕೈಕೈ ಹಿಸುಕಿಕೊಳ್ಳುವವರೂ ಸಹ ನಾವೇ. ಹೀಗಾಗಿ ತಿಂಗಳ ಪ್ರತಿಯೊಂದು ಖರ್ಚನ್ನು ವಿಂಗಡಿಸಲು ಆಯವ್ಯಯದ ಸಿದ್ದತೆ ಸಹಕಾರಿ.

ಆಯವ್ಯಯ
ಆಯವ್ಯಯ ಪಟ್ಟಿ ಸಿದ್ಧ ಮಾಡಿಕೊಳ್ಳುವಾಗಲೇ ನಮ್ಮ ಸಾಮರ್ಥ್ಯ ನಮಗೆ ತಿಳಿಯುತ್ತದೆ. ಜೊತೆಗೆ ಅನಗತ್ಯ ಖರ್ಚುಗಳು ಎಲ್ಲಿ ಆಗುತ್ತಿವೆ ಎಂಬುದರ ಬಗೆಗೆ ಅರಿವಾಗುತ್ತದೆ. ಅಗತ್ಯವಾದ ಖರ್ಚನಷ್ಟೇ ಮಾಡಿದರೆ ಪ್ರತಿತಿಂಗಳೂ ಉಳಿಕೆ ಸಾಧ್ಯವಾಗುತ್ತದೆ.

Advertisement

ವರ್ಗಗೊಳಿಸಿ: ಆಯವ್ಯಯದಲ್ಲಿ ನೀವು ಪ್ರತಿತಿಂಗಳು ಮಾಡಬೇಕಾದ ಖರ್ಚನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ. ದಿನಂಪ್ರತಿ ಖರ್ಚುಗಳು( ಹಾಲು, ನೀರು, ಹಣ್ಣು- ತರಕಾರಿ, ಆಹಾರ ಪದಾರ್ಥ ಇತ್ಯಾದಿ), ತಿಂಗಳ ಖರ್ಚುಗಳು( ವಿಮಾ ಕಂತು, ಮನೆ ಬಾಡಿಗೆ, ಬಸ್‌ ಪಾಸ…, ಪೋನ್‌ ಬಿಲ…, ಇಂಟರ್ನೆಟ…), ಅನುಕೂಲಿಕ ಖರ್ಚುಗಳು ( ಹಬ್ಬ ಹರಿದಿನದ ಬಟ್ಟೆಬರೆ, ವಡವೆ ಖರೀದಿ ಇತ್ಯಾದಿ) ಆಪತ್‌ ಖರ್ಚುಗಳು( ಆನಾರೋಗ್ಯ ವೇಳೆ ಆದ ಖರ್ಚು ಇತ್ಯಾದಿ) ಅನವಶ್ಯಕ ಖರ್ಚು ( ಹೋಟೆಲ್ಲಿನಲ್ಲಿ ತಿಂದದ್ದು, ಪಿಕ್ಚì ನೋಡಿದ್ದು ಇತ್ಯಾದಿ) ಇದರಲ್ಲಿ ಅನವಶ್ಯಕ ಖರ್ಚನ್ನು ಆಪತ್‌ ಸಮಯಕ್ಕೆ ಉಳಿಸಿದರೆ ಲಾಭ. ಅನುಕೂಲಿಕ ಖರ್ಚನ್ನು ಕೆಲವೊಮ್ಮೆ ಮುಂದೂಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಒಳಿತು.

ಸೀಮಾರೇಖೆ ಇರಲಿ: ಬಜೆಟ್‌ ತಯಾರಿಸಿಕೊಂಡ ಬಳಿಕ ಒಂದು ಆರ್ಥಿಕ ಸೀಮೆಯನ್ನು ನಿರ್ಮಿಸಿಕೊಳ್ಳುವುದು ಒಳಿತು. ಅದರಲ್ಲಿಯೇ ಈ ಎಲ್ಲಾ ಖರ್ಚಿನ ಬಾಬ¤ನ್ನು ನಿರ್ವಹಿಸಿದರೆ ಅನುಕೂಲ. ಜೊತೆಗೆ ಪತಿ ಪತ್ನಿಯರ ಆದಾಯ, ಖರ್ಚು ವೆಚ್ಚದ ಬಗ್ಗೆ ಮಕ್ಕಳಿಗೂ ಅರಿವಿದ್ದರೆ ಅನುಕೂಲ.

ಸಾಲ ಸಲ್ಲದು :
ಜೀವನದ ಕನಸನ್ನು ನನಸಾಗಿಸಿಕೊಳ್ಳಲು ಹೊರಟಾಗ ನಮಗೆ ಮೊದಲು ನಿಲ್ಲುವುದು ಸಾಲ. ಅನಿವಾರ್ಯವಾಗಿಯಾದರೂ ಸಾಲ ಮಾಡುವಂತೆ ಹಿತೈಷಿಗಳು ಪ್ರೇರೇಪಿಸುತ್ತಾರೆ. ಆದರೆ ಸಾಲವಿಲ್ಲದೆ ಬಾಳು ಸಾಗಿಸುವಂತೆ ಮಾಡಿಕೊಳ್ಳುವುದೇ ನಿಜವಾದ ಆರ್ಥಿಕ ಸ್ವಾತಂತ್ರ್ಯ.

ಸಾಲ ಮಾಡಿದೆವೆಂದರೆ ಅದಕ್ಕೆ ಇಎಂಐಗಳನ್ನು ಕಟ್ಟುತ್ತಾ ಹೋಗುತ್ತೇವೆ, ಸಾಲಗಾರ ನಮ್ಮನ್ನು ಬಂಧನದಲ್ಲಿಟ್ಟಿರುವಂತೆ ಭಾಸವಾಗುತ್ತದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಆಪತ್‌ ಧನವನ್ನು ಕೂಡಿಡಬೇಕು. ಮಗಳ ಮದುವೆಗೋ. ಅನಾರೋಗ್ಯ ಕಾರಣದಿಂದಲೋ ಅದು ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ, ಮನೆಗಾಗಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವುದು ಒಳಿತು.

ಇನ್ನೂ ಬ್ಯಾಂಕುಗಳು ಪ್ರತಿದಿನ ಸಾಲ ಸಂಬಂಧಿ ಸಂದೇಶಗಳಿಗೆ ಮಾರುಹೋಗದ ಮನೋಧರ್ಮವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.

ಸಮಯದ ಉಪಯೋಗ
ಟೈಮ್‌ ಈಸ್‌ ಮನಿ ಎಂಬ ಮಾತೊಂದಿದೆ. ಸಮಯದ ಅಳತೆಯಲ್ಲಿಯೇ ದುಡಿಮೆ,ವೆಚ್ಚ ಎಲ್ಲವೂ ನಡೆಯುತ್ತಿರುತ್ತದೆ. ಸಮಯವೂ ಸಹ ಆರ್ಥಿಕ ಸ್ವಾತಂತ್ರ್ಯ ಬಹುಮುಖ್ಯ ದ್ರವ್ಯ. ಜಗತ್ತಿನಾದ್ಯಂತ ಎಲ್ಲರಿಗೂ ದಿನಕ್ಕೆ 24 ಗಂಟೆಗಳೇ ಇರುವುದು. ಆದರೆ ಗಳಿಕೆ ಮಾತ್ರ ವಿಭಿನ್ನ. ಹಾಗಾದರೆ ಹೆಚ್ಚು ಗಳಿಕೆ ಮಾಡಿದವರು ಹೇಗೆ ಸಂಪಾದಿಸಿದರು ಎಂಬುದು ಕಾಡದೇ ಇರದು. ಸಾಮಾನ್ಯವಾಗಿ ಎಲ್ಲರೂ ತಾವು ಗಳಿಕೆ ಮಾಡಿದ ಹಣವನ್ನು ನೇರವಾಗಿ ಖರ್ಚಿಗೆ ಉಪಯೋಗಿಸುತ್ತೇವೆ. ಆದರೆ ಕೆಲವರು ಗಳಿಕೆಯನ್ನು ಆದಾಯ ಮೂಲವನ್ನಾಗಿಸಿಕೊಳ್ಳುತ್ತಾರೆ. ಅದರಿಂದ ಬರುವ ಲಾಭವನ್ನು ಖರ್ಚಿಗೆ ಬಳಸಿಕೊಳ್ಳುತ್ತಾರೆ. ಆಗ ಆದಾಯ ಆದಾಯವಾಗಿಯೇ ಉಳಿಯುತ್ತದೆ. ಉದಾಹರಣೆಗೆ ದೊಡ್ಡ ಮಟ್ಟದ ಆರ್ಡಿ ಕಂತನ್ನು ನೀವು ಕಟ್ಟುವಿರಾದರೆ ಅದರಿಂದ ಬರುವ ತಿಂಗಳ ಬಡ್ಡಿ ನಿಮ್ಮ ಖರ್ಚನ್ನು ಸರಿದೂಗಿಸುತ್ತದೆ. ಕಟ್ಟಿದ ಕಂತು ಆದಾಯವಾಗಿಯೆ ಉಳಿಯುತ್ತದೆ. ಇದೇ ರೀತಿಯಲ್ಲಿಯಲ್ಲೆ ಮೂಚ್ಯುಯಲ್‌ ಫ‌ಂಡ್‌ ಗಳೂ ಸಹ ಲಾಭ ತಂದು ಕೊಡುತ್ತವೆ.

ಭದ್ರತೆ ಮುಖ್ಯ 
ಆರ್ಥಿಕ ಸ್ವಾತಂತ್ರ್ಯದಲ್ಲಿ ಹಣವನ್ನು ನಮ್ಮ ಭದ್ರತೆ ಕಾಯ್ದುಕೊಳ್ಳುವಂತೆ ಮಾಡಿಕೊಳ್ಳುವುದೂ ಸಹ ಮುಖ್ಯ. ಮನೆಯಲ್ಲಿ ಹಣವನ್ನು ಕೂಡಿಟ್ಟರೆ ಮಕ್ಕಳಾದಿಯಾಗಿ ಅದನ್ನು ಅಪಹರಿಸುವ ಭಯವಿರುತ್ತದೆ. ಮೊದಲೇ ಹೇಳಿದಂತೆ ಅದನ್ನು ಆದಾಯ ಮೂಲವಾಗಿಸಿಕೊಂಡರೆ ಸಾಯುವವರೆಗೂ ಅದು ನಮ್ಮನ್ನು ಸಲಹುತ್ತದೆ. ಅಂದರೆ ಪಿಎಫ‌…. ಆì ಡಿ, ಎಫಿx ಮಾಡಿಸಿಕೊಂಡರೆ ಅದರಿಂದ ಉತ್ಪನ್ನವಾಗುವ ಹಣ ಜೀವನದ ಸಂಧ್ಯಾಕಾಲದಲ್ಲಿಯೂ ನಮಗೆ ರಕ್ಷಣೆ ಒದಗಿಸುತ್ತದೆ. ಜೊತೆ ಮಿಮೆ, ಮ್ಯೂಚುಯಲ್‌ ಫ‌ಂಡುಗಳು ನಮ್ಮನ್ನು ನಂಬಿದವರಿಗೂ ಹಿಡಿಗಂಟಾಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಸ್ವಾತಂತ್ರ್ಯ ತಂದು ಕೊಡುತ್ತದೆ.

ನಿವೇಶನ, ಆಸ್ತಿ ಖರೀದಿ, ಚಿನ್ನ, ಬಾಂಡುಗಳ ಮೇಲೆ ಹಣವಿದ್ದಾಗ ಹೂಡಿದರೆ ಮುಂದೊಂದು ದಿನ ದೊಡ್ಡಮಟ್ಟದ ಲಾಭವನ್ನು ಗಳಿಸಿಕೊಡುತ್ತದೆ.

ಚಟವೂ ಬೇಡ, ಲೋಭವೂ ಬೇಡ
ಕೈಯಲ್ಲಿ ಕಾಸಿದ್ದರೆ ಯಾವಾಗ ಖರ್ಚು ಮಾಡೋಣ ಅನ್ನಿಸುವ ಮನೋವೃತ್ತಿಯವರೇ ಬಹಳಷ್ಟು. ಇನ್ನುಕೆಲವರು ಒಂದು ಪಿಡುಗಾಸನ್ನೂ ಖರ್ಚು ಮಾಡಬಾರದೆಂಬ ಜಾಯಮಾನದವರು. ಇವರಿಬ್ಬರಿಂದಲೇ ಆರ್ಥಿಕ ಸ್ವಾತಂತ್ರ್ಯದ ಹರಣ.ಹಣವಿದೆ ಎಂದು ಅಮಲಿಗೆ ಬಿದ್ದು, ಪ್ರತಿದಿನ ಮನೆಯನ್ನು ನಿರ್ವಹಿಸದೆ ಪೋಷಕರಿಗು, ನಂಬಿದವರಿಗೂ ಜೊತೆಗೆ ತಮ್ಮ ಆರೋಗ್ಯಕ್ಕೂ ತೊಂದರೆ ತಂದುಕೊಳ್ಳುವ ಚಟವನ್ನು ನಿಯಂತ್ರಿಸಿ, ಅಲ್ಲದೆ ಅಂತಹ ಸ್ನೇಹಿತರಿದ್ದರೆ ಅವರನ್ನೂ ದೂರವಿಡುವುದು ಒಳ್ಳೆಯದು.

ಇದರಲ್ಲಿ ಸಾಮಾನ್ಯವಲ್ಲದೆ ಐಶಾರಾಮಿಯ ಚಟಕ್ಕೆ ಬಿದ್ದು ವಾಮಮಾರ್ಗದಲ್ಲಿ ಸಾಗುವವರೂ ಉಂಟು ಈ ರೀತಿಯ ನಡವಳಿಕೆ ಬಗ್ಗೆ ಎಚ್ಚರಿಕೆ ಅಗತ್ಯ.

ಎರಡನೇ ಮಾದರಿಯವರೂ ಲೋಭಿಗಳು ಯಾರಿಗೂ ಒಂದು ಪೈಸವನ್ನೂ ಖರ್ಚು ಮಾಡುವುದನ್ನು ಸಹಿಸರು. ತನಗೂ ಖರ್ಚುಮಾಡಿಕೊಳ್ಳರು. ಹಣವರಿವುದೇ ಅನಿವಾರ್ಯ ಖರ್ಚನ್ನು ಮಾಡಲು ಎಂಬುದರ ಬಗ್ಗೆ ಇವರಿಗೆ ಅರಿವಿಲ್ಲ. ತರಿಗೆ ವಂಚನೆ, ಸುಳ್ಳು ಲೆಕ್ಕಾ ಇತ್ಯಾದಿ ಜಾಲದಲ್ಲಿ ಸಿಕ್ಕಿಬಿಳುವವರೂ ಇವರೇ ಹೆಚ್ಚು. ಇಂತಹ ಮನೋವೃತ್ತಿಯಿಂದ ಮನೆಯಲ್ಲಿ ನೆಮ್ಮದಿ ಹಾಳು ನೆಮ್ಮದಿಯೇ ಇಲ್ಲದ ಮೇಲೆ ಆರ್ಥಿಕ ಸ್ವಾತಂತ್ರ್ಯವಾದರೂ ಎಲ್ಲಿ ಸಾಧ್ಯ ನೀವೆ ಹೇಳಿ.

ವಿಮರ್ಶೆ ಮಾಡಿಕೊಳ್ಳಿ 
ಪ್ರತಿದಿನ ಜೀವನದ ಬಗ್ಗೆ ಯೋಚಿಸುವವರು, ಬಾಳಿನ ಸಾಧನೆ, ಗುರಿ, ಉ¨ªೆಶಗಳ ಬಗ್ಗೆಯೂ ಆಲೋಚನೆ ಮಾಡುವ ಅಗತ್ಯವಿದೆ. ಅದಕ್ಕಾಗಿ ವಾರ್ಷಿಕ ಅನುಸೂಚಿಯೊಂದನ್ನು ತಯಾರಿಸಿಕೊಳ್ಳಬೇಕಿದೆ. ಆದಾಯಕ್ಕೆ ಹೇಗೆ ಆಯವ್ಯಯ ವಿದೆಯೋ ಅದೇ ಮಾದರಿ ಗುರಿಸಾಧನೆಗೂ ಅನುಸೂಚಿ ಅಗತ್ಯ. ಇದರಲ್ಲಿ ನಿಮಗೆ ಅಸಾಧ್ಯ ಎನಿಸುವ ವಸ್ತುವಿಷಯಗಳ ಪಟ್ಟಿಯನ್ನು ಮಾಡಿ ಒಂದರ ಬಳಿಕ ಒಂದರಂತೆ ವಿಷಯ ಅಧ್ಯಯನದಿಂದ ಪ್ರಾವೀಣ್ಯತೆ ಸಾಧಿಸಿ. ವರ್ಷದಿಂದ ವರ್ಷಕ್ಕೆ ನಿಮ್ಮಲ್ಲಾದ ಪರಿವರ್ತನೆ, ಔದ್ಯೋಗಿಕ ಬೆಳವಣಿಗೆಯನ್ನು ನೋಡಿ. ಅದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಆದಾಯಕ್ಕೆ ತಕ್ಕನಾದ ಬಂಡವಾಳ ಹೂಡಿಕೆ, ವಿಮೆ, ಉಳಿತಾಯದಿಂದ ಆರ್ಥಿಕ ಬೆಳವಣಿಗೆ ಸಾಧ್ಯ. ಇದೇ ಅಲ್ಲವೇ ಆರ್ಥಿಕ ಸ್ವಾತಂತ್ರ್ಯ.

ಪೈನಾನ್ಸಿಯಲ್‌ ಫಿÅàಡಮ್‌
ಆರ್ಥಿಕ ಸ್ವಾತಂತ್ರ್ಯವೆಂದರೆ ನಮ್ಮ ಬಳಿ ಹೆಚ್ಚು ಹಣವಿರುವುದಲ್ಲ. ನಮ್ಮ ಬಾಳಿನ ಕೆಟ್ಟ ಆರ್ಥಿಕ ಸಂದರ್ಭದಲ್ಲಿಯೂ ನಮ್ಮಲ್ಲಿ ಹಣ ಇರುವಂತೆ ನೋಡಿಕೊಳ್ಳುವುದು. ನೃತ್ಯ ದಂತಕತೆ ಮೈಕಲ್‌ ಜಾಕ್ಸನ…, ಹಿಂದಿ ನಟ ರಾಜೇಶ್‌ ಖನ್ನಾ ತಮ್ಮ ಜೀವನದ ಉತ್ತುಂಗದಲ್ಲಿದ್ದಾಗ ಹಣ, ಹೆಸರು ಎರಡನ್ನೂ ಮಾಡಿದವರು. ಅದರೆ ಅವರ ಬದುಕಿನ ಕೊನೆದಿನಗಳಲ್ಲಿ ದುಡ್ಡಿನ ಕೊರತೆಯನ್ನು ಅನುಭವಿಸಿದ್ದರು.

ಬದಲಾವಣೆ ಒಟ್ಟು ಮೊತ್ತ
ಆರ್ಥಿಕ ಸ್ವಾತಂತ್ರ್ಯದಲ್ಲಿ ಹಣದ ಗಳಿಕೆ ಎಷ್ಟು ಮುಖ್ಯವೋ ಗಳಿಕೆಗಾಗಿ ಬಳಸಿದ ಜ್ಞಾನವೂ ಅಷ್ಟೇ ಮುಖ್ಯ. ಆರ್ಥಿಕ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾ ಈ ಜ್ಞಾನದಿಂದ ಬದುಕಿನಲ್ಲಾದ ಎಲ್ಲ ಬದಲಾವಣೆ ಮತ್ತು ಅಭಿವೃದ್ಧಿಯ ಒಟ್ಟು ಮೊತ್ತವೇ ಆರ್ಥಿಕ ಸ್ವಾತಂತ್ರ್ಯ ಎನ್ನುತ್ತಾರೆ ತಜ್ಞರು

– ಎನ್‌ . ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next