Advertisement
ತಾಲೂಕಿನ ಬಾಸಗೋಡ ಸೂರ್ವೆ ಗ್ರಾಮದ ಬೊಮ್ಮಯ್ಯ ಹಾಗೂ ಸಾವಿತ್ರಿ ದಂಪತಿ ಹಿರಿಯ ಮಗನಾಗಿರುವ ವೆಂಕಣ್ಣ ನಾಯಕರು ಕೃಷಿ ಕುಟುಂಬದಲ್ಲಿ ಬೆಳೆದು ಬಂದವರು. ಶಾಲೆ ಕಲಿತದ್ದು ಮೂರನೇ ತರಗತಿಯಾದರೂ ಅಪಾರ ಜ್ಞಾನ ಸಂಪಾದಿಸಿದವರು. ಬಾಲ್ಯದಿಂದಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ತಮ್ಮಲ್ಲಿ ಅಳವಡಿಸಿಕೊಂಡು ತಮ್ಮೂರಿನ ಹಿರಿಯರ ಹೋರಾಟದತ್ತ ಆಕರ್ಷಿತರಾಗಿದ್ದ ಇವರು ಸೂರ್ವೆಯಲ್ಲಿ ಹಿರಿಯರೊಂದಿಗೆ ಗಾಂಧೀಜಿ ಹೋರಾಟದ ಕರೆಗೆ ಓಗೊಟ್ಟಿದ್ದರು.
Related Articles
Advertisement
ತಾಮ್ರ ಫಲಕ ಪಡೆದ ಸೂಲಪ್ಪ ಹರಿಕಾಂತ
ಅಂಕೋಲಾ: ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಹಲವು ನಾಯಕರ ಪೈಕಿ ದಿ| ಸೂಲಪ್ಪ ಬೊಮ್ಮಯ್ಯ ಹರಿಕಾಂತ ತ್ಯಾಗ, ಸಮರ್ಪಣಾ ಭಾವನೆ, ರಾಷ್ಟ್ರ ರಕ್ಷಣೆಗೆ ಮುಂದಾ ಗಿದ್ದವರಲ್ಲಿ ಇವರು ಕೂಡ ಒಬ್ಬರು.
1921ರಲ್ಲಿ ಜನಿಸಿದ ಇವರಿಗೆ ರಾಷ್ಟ್ರಾಭಿಮಾನ ತಾಯ್ನಾಡಿನ ಸೇವೆಗೆ ಧುಮುಕಿ ಬ್ರಿಟಿಷರ ವಿರುದ್ಧ ಹಲವರ ಜೊತೆಯಲ್ಲಿ ಹೋರಾಡಿ ಒಂಭತ್ತು ತಿಂಗಳು ಹಿಂಡಲ್ಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.
ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ ಚಳವಳಿಯಲ್ಲಿ ಹಿಂದುಳಿದ ವರ್ಗದಲ್ಲಿ ಪಾಲ್ಗೊಂಡವರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಇವರು ಅಪ್ರತಿಮ ಹೋರಾಟಗಾರರಾಗಿದ್ದು ಸದೃಢಕ್ಕಾಗಿ ಜೊತೆಗೆ ಲಾಠಿ ತಿರುವುದರಲ್ಲಿ ಹಾಗೂ ಈಜುಗಾರಿಕೆಯಲ್ಲಿ ಪ್ರವೀಣ ರಾಗಿದ್ದರು. ಹಲವು ಬಾರಿ ಇವರನ್ನು ಬ್ರಿಟಿಷರು ದಾಳಿ ನಡೆಸಿದ ಸಂದರ್ಭದಲ್ಲಿ ಹಿಚ್ಕಡದ ದಂಡೆಭಾಗದ ನದಿಯಲ್ಲಿ ಧುಮುಕಿ ಕೂರ್ವೆ ನಡುಗಡ್ಡೆ ಸೇರಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿರುವ ಘಟನೆ ಕುರಿತು ಹಾಗೂ ಜೈಲುವಾಸದಲ್ಲಿ ಅವರಿಗೆ ಉಪವಾಸದ ಆಚರಣೆ ಇರುವುದರಿಂದ ಜೈಲುಗಳಲ್ಲಿ ಒಂದು ಬಾರಿ ಉಪವಾಸ ಎಂದು, ಇನ್ನೊಂದು ಬಾರಿ ಇಲ್ಲವೆಂದು ತನಗೆ ಊಟ ಕೊಡಿ ಎಂಬಂತೆ ಜೈಲು ಊಟ ಇವರಿಗೆ ಅರೆಬರೆ ಹೊಟ್ಟೆ ತುಂಬುತ್ತಿತ್ತಂತೆ. ಹಲವಾರು ರೋಚಕ ಹೋರಾಟದ ಕತೆಯನ್ನು ನಮಗೆಲ್ಲರಿಗೂ ಹೇಳುತ್ತಿದ್ದರು ಎಂದು ಅವರ ಮೊಮ್ಮಗ ಹರಿಹರ ಹರಿಕಾಂತ ಹಿಲ್ಲೂರು ಮಾಹಿತಿ ನೀಡುತ್ತ ದೇಶವು 25ನೇ ಸ್ವಾತಂತ್ರೋತ್ಸವದ ದಿನದಂದು ಅಂದಿನ ಸರಕಾರ ಇವರಿಗೆ ತಾಮ್ರ ಫಲಕ ನೀಡಿ ಗೌರವಿಸಿತ್ತು.
ಇಂತವರ ಹೋರಾಟದ ಪರವಾಗಿ ಇಂದು ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಸಾಧ್ಯವಾಗಿದೆ. ಇವರು ನಂತರ ಹಿಲ್ಲೂರಿಗೆ ವಲಸೆ ಹೋಗಿ ತುಂಬು ಕುಟುಂಬದೊಂದಿಗೆ ಜೀವನ ನಡೆಸಿ ಅಗಸ್ಟ್ 1, 2000 ರಲ್ಲಿ ದೈವಾದಿಧೀನರಾದರು. ಅವರು ಯೋಧರಾಗಿ ಹೋರಾಡಿದ ಪ್ರೇರಣೆಯೇ ನಮ್ಮ ಕುಟುಂಬಕ್ಕೆ ದಾರಿದೀಪವಾಗಿದೆ ಎಂದು ಅವರ ಮೊಮ್ಮಗ ಹರಿಹರ ಹರಿಕಾಂತ ಹಿಲ್ಲೂರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
-ಅರುಣ ಶೆಟ್ಟಿ