ಚನ್ನರಾಯಪಟ್ಟಣ: ಯೋಗಕ್ಕೆ ವಿಶ್ವಮಟ್ಟದ ಸ್ಥಾನ ದೊರೆತ ಮೇಲೆ ಯೋಗ ತರಬೇತಿ ನೀಡಿ ಹಣ ಸಂಪಾದನೆಗೆ ಮುಂದಾಗುತ್ತಿವ ಸಂಸ್ಥೆಯ ಸಂಖ್ಯೆ ಹೆಚ್ಚುತ್ತಿರುವಾಗ ಪಟ್ಟಣದ ವಿವೇಕಾನಂದ ಯೋಗ ತರಬೇತಿ ಕೇಂದ್ರ ಸಾರ್ವಜನಿಕರಿಗೆ ನಿತ್ಯ ಉಚಿತವಾಗಿ ಯೋಗ ತರಬೇತಿಯನ್ನು ಎರಡು ದಶಕದಿಂದ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿದೆ.
ಪಟ್ಟಣದಲ್ಲಿನ ವಿವೇಕಾನಂದ ಯೋಗ ತರಬೇತಿ ಕೇಂದ್ರ ಆರು ವರ್ಷದ ಮಗುವಿನಿಂದ ಅರವತ್ತು ವರ್ಷ ವಯೋವೃದ್ಧರ ವರೆಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದೆ. ಜಾತಿ ಹಾಗೂ ವಯಸ್ಸಿನ ಭೇದವಿಲ್ಲದೇ ಆಸಕ್ತಿದಾಯಕರು ತರಬೇತಿ ಪಡೆಯ ಬಹುದಾಗಿದ್ದು ರೋಗದಿಂದ ಮುಕ್ತರಾಗಬಹುದು.
ಯೋಗ ಪ್ರಾಣಯಾಮ: ನಿತ್ಯ ಬೆಳಗ್ಗೆ 5.30 ರಿಂದ 7.00 ಗಂಟೆಯ ವರೆಗೆ ಗಾಂಧಿವೃತ್ತದಲ್ಲಿನ ಶಾಲಿನಿ ವಿದ್ಯಾಸಂಸ್ಥೆ ಆವರಣದಲ್ಲಿನ ವಿವೇಕಾನಂದ ಯೋಗ ತರಬೇತಿ ಕೇಂದ್ರದಲ್ಲಿ ತರಬೇತಿದಾರರಿಗೆ ಪ್ರಾಣ ಯಾಮ ಹಾಗೂ ಯೋಗಾಭ್ಯಾಸ ಹೇಳಿ ಕೊಡು ತ್ತಾರೆ, ನಿತ್ಯವೂ ಸುಮಾರು 150 ಕ್ಕೂ ಹೆಚ್ಚು ಮಂದಿ ಯೋಗ ತರಬೇತಿ ಪಡೆಯುತ್ತಾರೆ, ತರಬೇತಿ ಪಡೆದ ಕೆಲವರು ತಮ್ಮ ಮನೆಯಲ್ಲಿ ನಿತ್ಯ ಅಭ್ಯಾಸ ಮಾಡಿ ಕೊಳ್ಳುತ್ತಿದ್ದಾರೆ, ಇದುವರೆಗೆ ಸುಮಾರು ಎರಡರಿಂದ ಐದು ಸಾವಿರ ಮಂದಿಗೆ ಉಚಿತವಾಗಿ ತರಬೇತಿ ಪಡೆಯಲಾಗಿದೆ.
ವರ್ಷದಿಂದ ವರ್ಷಕ್ಕೆ ದ್ವಿಗುಣ: 20 ವರ್ಷದಿಂದ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದ ವೇಳೆ ಶಾಲೆಯ ಕೆಲ ವಿದ್ಯಾರ್ಥಿ ಮಾತ್ರ ಯೋಗ ತರ ಬೇತಿಗೆ ಇಷ್ಟಪಟ್ಟು ಆಗಮಿಸುತ್ತಿದ್ದರು. ಇವರೊಟ್ಟೆಗೆ ಬೆರಳೆಣಿಕೆ ಯಷ್ಟು ಮಂದಿ ಪಾಲಕರು ಆಗಮಿಸಿ ಯೋಗಾಭ್ಯಾಸ ಮಾಡುತ್ತಿದ್ದರು. ಹೀಗೆ ಪ್ರತಿ ವರ್ಷವೂ ನೂರಾರು ಮಂದಿ ತರಬೇತಿ ಪಡೆಯುತ್ತಿ ದ್ದಾರೆ. ಕಳೆದ 4 ವರ್ಷ ದಿಂದ ಹಿಂದೆ ಯೋಗಕ್ಕೆ ವಿಶ್ವ ಮಟ್ಟದಲ್ಲಿ ಸ್ಥಾನ ದೊರೆತ ಮೇಲೆ ಸಾಕಷ್ಟು ಮಂದಿ ತರಬೇತಿ ಕೇಂದ್ರಕ್ಕೆ ಆಗಮಿಸಿ ಯೋಗ ಕಲಿಕೆಗೆ ಮುಂದಾಗಿದ್ದಾರೆ.
ಎಲ್ಲರಿಗೂ ಉಚಿತ: ಪಟ್ಟಣದ ಪ್ರತಿಷ್ಠಿತ ಕ್ಲಬ್‌ನಲ್ಲಿ ಸದಸ್ಯತ್ವ ಪಡೆದಿರುವವರು ಯೋಗಭ್ಯಾಸಕ್ಕಾಗಿ ಮಾಸಿಕ ಸಾವಿರಾರು ರೂ. ಹಣಕೊಟ್ಟು ಹೊರಗಿ ನಿಂದ ಯೋಗ ತರಬೇತಿದಾರರ ಕರೆಸಿ ಯೋಗ ತರ ಬೇತಿ ಪಡೆಯುತ್ತಿ ದ್ದಾರೆ, ಯಾವುದೆ ಪ್ರಚಾರಲ್ಲದೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ವೇಕಾನಂದ ಯೋಗ ಕೇಂದ್ರಕ್ಕೆ ಮಧ್ಯಮವರ್ಗ ಹಾಗೂ ಬಡವರು ಆಗಮಿಸಿ ಯೋಗ ತರಬೇತಿ ಪಡೆಯಬಹುದಾಗಿದೆ. ರೋಗಕ್ಕೆ ತುತ್ತಾಗಿ ಮಾತ್ರೆ ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿ ಣಾಮ ಬೀರುತ್ತದೆ. ಆದ್ದ ರಿಂದ ಯೋಗದ ಮೊರೆ ಹೋಗುತ್ತಿದ್ದು ಸಕ್ಕರೆ ಕಾಯಿಲೆ, ಗಂಟಲು, ಮಂಡಿ ನೋವು ಹಾಗೂ ಇತರೆ ಕಾಯಿಲೆ ಇರುವವರಿಗೆ ಅಗತ್ಯ ವಿರುವ ಆಸನ ಹೇಳಿಕೊಡಲಾಗುತ್ತದೆ, ಸೂರ್ಯ ನಮ ಸ್ಕಾರ, ತಂಡಾಸನ, ಅರ್ಧ ಚಕ್ರಾ ಸನ, ರಾಗಿಬೀಸು ವಾಸನ, ಮುಂಡೂಕಾಸನ, ವೃತ್ತ ಪಾದಾಸನ ಹೀಗೆ ವಿವಿಧ ಬಗೆ 100ಕ್ಕೂ ಹೆಚ್ಚು ಆಸನವನ್ನು ನಿತ್ಯ ಹೇಳಿಕೊಡಲಾಗುತ್ತದೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ