Advertisement

ಇಂದ್ರಧನುಷ್‌ ಅಭಿಯಾನದ ಉಚಿತ ಲಸಿಕಾ ಕಾರ್ಯಕ್ರಮ

11:56 AM Jun 20, 2018 | Team Udayavani |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂ. 20,22,23 ಹಾಗೂ ಜು. 18, 20, 21ರಂದು “ಇಂದ್ರಧನುಷ್‌’ ಅಭಿಯಾನದಡಿ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹಾಗೂ ಉಪಕೇಂದ್ರಗಳಲ್ಲಿ ಅಭಿಯಾನದಡಿ ಗರ್ಭಿಣಿಯರಿಗೆ ಟಿಟಿ ಲಸಿಕೆ (ಧನುರ್ವಾಯು), ಎರಡು ವರ್ಷದೊಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೋ, ದಡಾರ ಹಾಗೂ ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಕಲಾಗುತ್ತದೆ.

ಜತೆಗೆ ಡಿಪಿಟಿ, ಹೆಪಟೈಟಿಸ್‌- ಬಿ, ಇನ್‌ಫ‌ುಯೆಂಜಾ- ಬಿ ಸೇರಿದಂತೆ ಪೆಂಟಾವೆಲೆಂಟ್‌ ಹಾಗೂ 5ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಹಾಕಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗೆ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next