Advertisement

ಸಾರ್ವಜನಿಕರಿಗೆ ಉಚಿತ ಲಸಿಕೆ: ಶಾಮನೂರು

09:48 AM May 29, 2021 | Team Udayavani |

ದಾವಣಗೆರೆ: ನಮ್ಮ ಆಸ್ಪತ್ರೆಯಿಂದಲೇ ಶೀಘ್ರ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

Advertisement

ನಗರದ ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ತರಳುಬಾಳು ಸೇವಾ ಸಂಸ್ಥೆ ಹಾಗೂ ಶಿವಸೇನೆ ಯುವಕರ ಸಂಘ ಸೋಂಕಿತರಿಗಾಗಿ ಆಹಾರ ತಯಾರಿಸುವುದನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಖಾಸಗಿಯಾಗಿ ವಿತರಿಸಲು ಬೇಕಾದ ಲಸಿಕೆಗಾಗಿ ಲಸಿಕಾ ಕಂಪನಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಅವರು ಒಂದು ಸಾವಿರ ಬಾಟಲ್‌ ಲಸಿಕೆ ಕೊಡಲು ಒಪ್ಪಿದ್ದಾರೆ. ಇದರಲ್ಲಿ 10 ಸಾವಿರ ಜನರಿಗೆ ಲಸಿಕೆ ಹಾಕಬಹುದು. ಮುಂದಿನಗಳಲ್ಲಿ ಲಸಿಕೆ ಬಂದ ತಕ್ಷಣವೇ ನಮ್ಮ ಆಸ್ಪತ್ರೆಯ ಐದು ವೈದ್ಯರ ತಂಡದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎಂದರು.

ತರಳುಬಾಳು ಸೇವಾ ಸಂಸ್ಥೆ ಹಾಗೂ ಶಿವಸೇನೆ ಯುವಕರ ಸಂಘಗಳ ಅನ್ನದಾಸೋಹ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅನ್ನದಾಸೋಹ ಪವಿತ್ರ ಕೆಲಸ. ಕೊರೊನಾ ಸೋಂಕಿತರಿಗಾಗಿ ಯುವಕರೆಲ್ಲ ಸೇರಿ ಅನ್ನದಾಸೋಹ ಮಾಡಿ ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಿರುವುದು ಉತ್ತಮ ಕಾರ್ಯ. ಈ ಕಾರ್ಯಕ್ಕೆ ಎಷ್ಟಾದರೂ ಅಕ್ಕಿ ಕೊಡುವುದಾಗಿ ಹೇಳಿದರು.

ತರಳುಬಾಳು ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ ಶಶಿಧರ ಹೆಮ್ಮೆನಬೇತೂರು ಮಾತನಾಡಿ, ನಮ್ಮ ಸೇವಾ ಕಾರ್ಯ ಆರಂಭವಾಗಿ 28ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಪ್ರತಿದಿನ ಕೋವಿಡ್ ಸೋಂಕಿತರಿಗೆ ಹಾಗೂ ಸಾರ್ವಜನಿಕರಿಗೆ ಆಹಾರ ಪೊಟ್ಟಣ ನೀಡುತ್ತಿದ್ದು, ಈವರೆಗೆ ಒಂದು ಲಕ್ಷ ಚಪಾತಿ, 40ಸಾವಿರ ಆಹಾರ ಪೊಟ್ಟಣ ವಿತರಿಸಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರ ಸೂಚನೆ ಮೇರೆಗೆ ಇಂದು ಎರಡು ಸಾವಿರ ಹೋಳಿಗೆ ಮಾಡಿದ್ದೇವೆ ಎಂದು ತಿಳಿಸಿದರು.

ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ತರಳುಬಾಳು ಸೇವಾ ಸಂಸ್ಥೆ ಮತ್ತು ಶಿವಸೇನೆಯ ಯುವಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಹಣ ಮುಖ್ಯವಲ್ಲ. ಜನರಿಗೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡಬೇಕು. ಅಂತಹ ಕೆಲಸವನ್ನು ಯುವಕರ ತಂಡ ಮಾಡುತ್ತಿದೆ ಎಂದ ಅವರು, ಇದೇ ಸಂದರ್ಭದಲ್ಲಿ 25 ಸಾವಿರ ಧನಸಹಾಯ ಮಾಡಿದರು.

ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ, ಮಹಾ ನಗರಪಾಲಿಕೆ ಮೇಯರ್‌ ಎಸ್‌.ಟಿ.ವೀರೇಶ್‌, ಶ್ರೀನಿವಾಸ್‌ ಹಾಗೂ ತರಳುಬಾಳು ಸೇವಾ ಸಂಸ್ಥೆ, ಶಿವಸೇನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next