Advertisement
ಸಂಘಟನೆಯು ತುಳು ಲಿಪಿ ಕಲಿಕೆಯ ಜತೆಗೆ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡುತ್ತಿದೆ. ಸದ್ಯ 100ಕ್ಕೂ ಅಧಿಕ ಮಂದಿ ಆನ್‌ಲೈನ್ ಮೂಲಕ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ 800 ವಿದ್ಯಾರ್ಥಿಗಳು ತುಳು ಲಿಪಿ ತರಗತಿಯಲ್ಲಿ ಕಲಿಯುತ್ತಿದ್ದಾರೆ ಎನ್ನುತ್ತಾರೆ ಸಮಿತಿಯ ಪ್ರ. ಕಾರ್ಯದರ್ಶಿ ಸದಾಶಿವ ಮುದ್ರಾಡಿ.
ವಾಟ್ಸಾಪ್‌ನಲ್ಲಿ ದಿನದ ಒಂದು ಗಂಟೆ ಕಾಲ ನಡೆಯುವ ಈ ತರಗತಿಯು ಗ್ರಾಫಿಕ್ಸ್ ಹಾಗೂ ಬರವಣಿಗೆ ಮೂಲಕ ಐದು ಅಕ್ಷರಗಳಂತೆ ಅಭ್ಯಾಸ ನಡೆಸಲಾಗುತ್ತದೆ. ಅದೇ ರೀತಿ ವಾಯ್ಸ ನೋಟ್ ಮೂಲಕ ಯಾವ ರೀತಿ ಬರೆಯಬೇಕೆಂಬ ತರಬೇತಿ ನೀಡಲಾಗುತ್ತದೆ. ಪ್ರತಿ ಗ್ರೂಪ್‌ಗೆ
ಮೂವರು ಶಿಕ್ಷಕರು ತರಬೇತಿ ನೀಡುತ್ತಾರೆ. ಬಳಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಅದೇ ಗ್ರೂಪ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ತಪ್ಪಿದಲ್ಲಿ ಶಿಕ್ಷಕರು ಅದನ್ನು ತಿದ್ದಿ ಮತ್ತೆ ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಮಾಡುತ್ತಾರೆ.
ಆಸಕ್ತರು ಆನ್‌ಲೈನ್ ತುಳು ಕಲಿಕೆ ತರಗತಿಗೆ ಸೇರಲು ಅರ್ಜಿ ಭರ್ತಿ ಮಾಡಿ ನೀಡಿದರೆ, ಸಂಘಟನೆಯ ಸದಸ್ಯರು ಅವರನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಿಸಿ ತುಳು ಲಿಪಿ ಕಲಿಸುವ ವ್ಯವಸ್ಥೆ ಮಾಡುತ್ತಾರೆ. ತುಳು ಭಾಷೆ ಕಲಿಕೆಗೆ ಪ್ರತ್ಯೇಕ ಗ್ರೂಪ್
ತುಳು ಲಿಪಿ ಮಾತ್ರವಲ್ಲದೆ, ಉಚಿತ ವಾಗಿ ತುಳು ಭಾಷೆ ಕಲಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ತುಳು ಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಮತ್ತು ಕಿರಣ್ ತುಳುವೆ ಅವರು ಹೇಳುವಂತೆ, “ತುಳು ಭಾಷೆ ಕಲಿಯಲು ಆಸಕ್ತಿ ಇರುವ ಮಂದಿಗೆ ಭಾಷೆ ಕಲಿಸಲಾಗುತ್ತಿದೆ. ಕುಂದಾಪುರ, ಬೆಂಗಳೂರು ಸಹಿತ ಹೊರ ಜಿಲ್ಲೆಯ ಮಂದಿ ಮತ್ತು ಗುಜರಾತ್, ನಾಗಾಲ್ಯಾಂಡ್, ತಮಿಳುನಾಡು ರಾಜ್ಯಗಳ ಆಸಕ್ತರೂ ತುಳು ಕಲಿಯುತ್ತಿದ್ದಾರೆ. ಇದೇ ಕಾರಣಕ್ಕೆ “ಬಲೇ ತುಳು ಭಾಷೆ ಕಲ್ಪುಗ’ ಎಂಬ ವಾಟ್ಸಾಪ್ ಗ್ರೂಪ್ ಕೂಡ ರಚನೆ ಮಾಡಲಾಗಿದೆ’ ಎನ್ನುತ್ತಾರೆ.
Related Articles
ಶೈಕ್ಷಣಿಕ ದೃಷ್ಟಿಯಿಂದ ತುಳು ಲಿಪಿಯ ಕುರಿತಾಗಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯಪುಸ್ತಕ ಇಡಬೇಕು ಎಂಬುದಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವರೆಗಿನ ತೃತೀಯ ಐಚ್ಛಿಕ ಭಾಷೆಯ ತುಳು ಪಠ್ಯದಲ್ಲಿ ತುಳು ಲಿಪಿಯ ಬಗ್ಗೆ ಪರಿಚಯವಿದೆ. ಪ್ರತ್ಯೇಕ ಪಠ್ಯಪುಸ್ತಕದ ಕುರಿತು ಕೆಲಸಗಳು ನಡೆಯುತ್ತಿವೆ.
-ದಯಾನಂದ ಕತ್ತಲ್‌ಸಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
Advertisement
ಅನ್ಯ ಭಾಷೆಯಲ್ಲಿ ಕಲಿಕೆರಾಜ್ಯ ಸಹಿತ ಹೊರ ರಾಜ್ಯದ ಮಂದಿಗೂ ತುಳು ಲಿಪಿ ಕಲಿಸ ಲಾಗುತ್ತಿದೆ. ಮುಂಬಯಿ ಕಲಿಕಾಸಕ್ತರಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಹಿಂದಿಯಲ್ಲಿಯೇ ತುಳುಲಿಪಿಯನ್ನು ಕಲಿಸುವ ವ್ಯವಸ್ಥೆ ಮಾಡುತ್ತಿದೆ. ಅದೇ ರೀತಿ ಕಾಸರಗೋಡಿನ ಕಲಿಕಾಸಕ್ತರಿಗೆ ಮಲಯಾಳ ಭಾಷೆ ಮೂಲಕ ತುಳು ಲಿಪಿ ಕಲಿಸಲಾಗುತ್ತಿದೆ.
-ಸುದರ್ಶನ್ ಸುರತ್ಕಲ್, ಜೈ ತುಳುನಾಡ್ ಸಂಘಟನೆ ಅಧ್ಯಕ್ಷ