Advertisement

ಬಡ ಗರ್ಭಿಣಿಗೆ ಉಚಿತ ಚಿಕಿತ್ಸೆ

12:17 PM May 06, 2020 | mahesh |

ಎಚ್‌.ಡಿ.ಕೋಟೆ: ಜೀವನೋಪಾಯಕ್ಕಾಗಿ ಆಂಧ್ರದಿಂದ ಬಂದು ತಲೆ ಕೂಡಲು ವ್ಯಾಪಾರ ಮಾಡಿ, ಬಯಲಿನಲ್ಲಿ ಜೀವನ ನಡೆಸುತ್ತಿದ್ದ ಬಡ ಗರ್ಭಿಣಿಗೆ ಪಟ್ಟಣದ ಸೆಂಟ್‌ ಮೇರಿಸ್‌ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡಿ, ಹೆರಿಗೆ ಮಾಡಿ ಮಾನವೀಯತೆ ಮರೆದಿದ್ದಾರೆ. ಅಂಜಮ್ಮ ಎಂಬ ಗರ್ಭಿಣಿಗೆ ಸೆಂಟ್‌ ಮೇರಿಸ್‌ ಖಾಸಗಿ ಆಸ್ಪತ್ರೆಯಲ್ಲಿ ಸುಲಲಿತವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪಟ್ಟಣದ ಜೆಎಸ್‌ಎಸ್‌ ಮಂಗಳ ಮಂಟಪದ ಎದುರಿನಲ್ಲಿರುವ ಪಾಳು ಜಮೀನೊಂದರಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟು ಅಂಜಮ್ಮ ಮತ್ತವರ ಕುಟುಂಬ ಪ್ರತಿದಿನ ತಲೆ ಕೂದಲು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

Advertisement

ಲಾಕ್‌ಡೌನ್‌ ನಿಂದ ಭಿಕ್ಷಾಟನೆ ಮಾಡಿ ಜೀವನ ನಡೆಸಬೇಕಾದ ಸ್ಥಿತಿ ಒದಗಿತ್ತು. ಈ ವೇಳೆ ಗರ್ಭಿಣಿ ಅಂಜಮ್ಮ ಕಣ್ಣಿಗೆ ಬಿದ್ದಾಗ ಖಾಸಗಿ ಆಸ್ಪತ್ರೆ ಸೆಂಟ್‌ ಮೇರಿಸ್‌ ವೈದ್ಯೆ ಡಾ.ಹೀಲ್ಡಾಲೋಬೋ, ಮಕ್ಕಳ ತಜ್ಞೆ ಡಾ.ಜ್ಯೋತಿ ಫರ್ನಾಡಿಂಸ್‌ ಮತ್ತು ತಂಡದವರಿಗೆ ವಿಷಯ ತಿಳಿಸಿ, ಮಹಿಳೆ ಹೆರಿಗೆಗೆ ದಾನಿಗಳಿಂದ ಹಣ ಕೊಡಿಸುವ ಭರವಸೆ ನೀಡಿ, ರಿಯಾಯ್ತಿ ದರದಲ್ಲಿ ಹೆರಿಗೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ವೈದ್ಯರ ತಂಡ ಗರ್ಭಿಣಿಗೆ ಆಸ್ಪತ್ರಯಲ್ಲಿ ಉಚಿತವಾಗಿ ತಪಾಸಣೆ ನಡೆಸಿ, ಔಷಧಿ ನೀಡಿದ್ದು, ಹೆರಿಗೆ
ನೋವು ಕಾಣಿಸಿಕೊಂಡಾಗ ಹೆರಿಗೆ ನೇರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next